SBI ನೇಮಕಾತಿ 2023 : ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ ನೇಮಕಾತಿ (State Bank of India Bank Recruitment 2023) ಮಾರ್ಚ್ 2023 ರ ಅಧಿಕೃತ ಅಧಿಸೂಚನೆಯ ಮೂಲಕ ಮ್ಯಾನೇಜರ್, ಫ್ಯಾಕಲ್ಟಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ. ಹಾಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ ನೇಮಕಾತಿ ಅಧಿಸೂಚನೆಯ ಸಂಪೂರ್ಣ ವಿವರ :
ಬ್ಯಾಂಕ್ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಹುದ್ದೆಗಳ ಸಂಖ್ಯೆ : 8 ಹುದ್ದೆಗಳು
ಉದ್ಯೋಗ ಸ್ಥಳ : ಜೈಪುರ, ಕೋಲ್ಕತ್ತಾ ಹಾಗೂ ಮುಂಬೈ
ಹುದ್ದೆಯ ಹೆಸರು : ಮ್ಯಾನೇಜರ್, ಫ್ಯಾಕಲ್ಟಿ
ವೇತನ : ರೂ.63840-78230/- ಪ್ರತಿ ತಿಂಗಳು

ಎಸ್‌ಬಿಐ ಬ್ಯಾಂಕ್‌ನಲ್ಲಿ ಖಾಲಿ ಇರುವ ಹುದ್ದೆಗಳ ಹುದ್ದೆವಾರು ವಿವರ :
ಮ್ಯಾನೇಜರ್ : 5 ಹುದ್ದೆಗಳು
ಅಧ್ಯಾಪಕರು : 2 ಹುದ್ದೆಗಳು
ಹಿರಿಯ ಕಾರ್ಯನಿರ್ವಾಹಕ : 1 ಹುದ್ದೆ

ಎಸ್‌ಬಿಐ ಬ್ಯಾಂಕ್‌ನಲ್ಲಿ ಖಾಲಿ ಇರುವ ಹುದ್ದೆಗಳ ಹುದ್ದೆವಾರು ವಿದ್ಯಾರ್ಹತೆ ವಿವರ :

  • ಮ್ಯಾನೇಜರ್ : ಈ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಎಮ್‌ಬಿಎ, ಪಿಜಿಡಿಎಮ್ ಹಾಗೂ ಪಿಜಿಪಿಎಮ್‌ನಲ್ಲಿ ಉತ್ತೀರ್ಣರಾಗಿರಬೇಕು.
  • ಫ್ಯಾಕಲ್ಟಿ (ಕಾರ್ಯನಿರ್ವಾಹಕ ಶಿಕ್ಷಣ) : ಈ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಎಮ್‌ಬಿಎ, ಸ್ನಾತಕೋತ್ತರ ಪದವಿ ಹಾಗೂ ಪಿಹೆಚ್‌ಡಿ ಮುಗಿಸಿರಬೇಕು.
  • ಹಿರಿಯ ಕಾರ್ಯನಿರ್ವಾಹಕ : ಈ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಸಿಎಸ್‌ಇ/ಐಟಿ, ಸ್ನಾತಕೋತ್ತರ ಪದವಿಯಲ್ಲಿ ಹಿರಿಯ ಕಾರ್ಯನಿರ್ವಾಹಕ (ಸಂಖ್ಯಾಶಾಸ್ತ್ರ) ಬಿ.ಟೆಕ್‌ನ್ನು ಮುಗಿಸಿರಬೇಕು.

ಎಸ್‌ಬಿಐ ಬ್ಯಾಂಕ್‌ನಲ್ಲಿ ಖಾಲಿ ಇರುವ ಹುದ್ದೆಗಳ ಹುದ್ದೆವಾರು ವಯೋಮಿತಿ ವಿವರ :

  • ಮ್ಯಾನೇಜರ್ : ಈ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿದ ಆಭ್ಯರ್ಥಿಗಳು ಕನಿಷ್ಠ 28 ವರ್ಷ ವಯಸ್ಸನ್ನು ಹೊಂದಿರಬೇಕು ಹಾಗೂ 38 ವರ್ಷ ವಯಸ್ಸನ್ನು ಮೀರಿರಬಾರದು.
  • ಫ್ಯಾಕಲ್ಟಿ (ಕಾರ್ಯನಿರ್ವಾಹಕ ಶಿಕ್ಷಣ) : ಈ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿದ ಆಭ್ಯರ್ಥಿಗಳು ಕನಿಷ್ಠ 28 ವರ್ಷ ವಯಸ್ಸನ್ನು ಹೊಂದಿರಬೇಕು ಹಾಗೂ 55 ವರ್ಷ ವಯಸ್ಸನ್ನು ಮೀರಿರಬಾರದು.
  • ಹಿರಿಯ ಕಾರ್ಯನಿರ್ವಾಹಕ (ಅಂಕಿಅಂಶ) : ಈ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿದ ಆಭ್ಯರ್ಥಿಗಳು ಕನಿಷ್ಠ 25 ವರ್ಷ ವಯಸ್ಸನ್ನು ಹೊಂದಿರಬೇಕು ಹಾಗೂ 35 ವರ್ಷ ವಯಸ್ಸನ್ನು ಮೀರಿರಬಾರದು.

ವಯೋಮಿತಿ ಸಡಿಲಿಕೆ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಯೋಮಿತಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಯಮಗಳ ಪ್ರಕಾರ ಸಡಿಲಿಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ :
ಎಸ್‌/ಎಸ್‌ಟಿ/ಪಿಡ್ಲ್ಯೂಡಿ ಅಭ್ಯರ್ಥಿಗಳು : ಇಲ್ಲ
ಸಾಮಾನ್ಯ/ಇಡ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳು : ರೂ.750/-

ಪಾವತಿ ವಿಧಾನ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಾಗಿದೆ.

ಆಯ್ಕೆ ಪ್ರಕ್ರಿಯೆ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ ನೇಮಕಾತಿ ಪ್ರಕಾರ, ಅರ್ಹ ಅಭ್ಯರ್ಥಿಗಳನ್ನು ಕಿರುಪಟ್ಟಿ, ಸಂವಹನ, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಎಸ್‌ಬಿಐ ಬ್ಯಾಂಕ್‌ನಲ್ಲಿ ಖಾಲಿ ಇರುವ ಹುದ್ದೆಗಳ ಹುದ್ದೆವಾರು ಸಂಬಳದ ವಿವರ :

  • ಮ್ಯಾನೇಜರ್ (ಚಿಲ್ಲರೆ ಉತ್ಪನ್ನಗಳು) : ರೂ.63840-78230/- ಪ್ರತಿ ತಿಂಗಳು
  • ಫ್ಯಾಕಲ್ಟಿ (ಕಾರ್ಯನಿರ್ವಾಹಕ ಶಿಕ್ಷಣ) : ರೂ.2500000-4000000/- ವರ್ಷಕ್ಕೆ
  • ಹಿರಿಯ ಕಾರ್ಯನಿರ್ವಾಹಕ (ಅಂಕಿಅಂಶ) : ರೂ.1500000-2000000/- ವರ್ಷಕ್ಕೆ

ಇದನ್ನೂ ಓದಿ : ಉಡುಪಿ ಜಿಲ್ಲಾಧಿಕಾರಿ ಕಚೇರಿ ನೇಮಕಾತಿ 2023 : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : KMF recruitment 2023: ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : DC Office Bengaluru recruitment 2023: ಪುರಸಭೆ, ನಗರಸಭೆಯ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 23 ಫೆಬ್ರವರಿ 2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಕೊನೆಯ ದಿನಾಂಕ : 15 ಮಾರ್ಚ್ 2023

State Bank of India Bank Recruitment 2023 : Application Invitation for Various Manager Posts

Comments are closed.