ಬೆಂಗಳೂರಿನಲ್ಲಿ ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ : ಡೆತ್‌ನೋಟ್‌ನಲ್ಲಿ ಬಿಜೆಪಿ ಶಾಸಕರ ಹೆಸರು

ಬೆಂಗಳೂರು : ಉದ್ಯಮಿಯೊಬ್ಬರು ಭಾನುವಾರ (ಜನವರಿ 1) ಗುಂಡು ಹಾರಿಸಿಕೊಂಡು ಆತ್ಮಹತ್ಯೆ (Businessman committed suicide) ಮಾಡಿಕೊಂಡ ಘಟನೆ ಸಂಭವಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.

ಕಗ್ಗಲಿಪುರ ಪೊಲೀಸರು ಸೋಮವಾರ ಅರವಿಂದ ಲಿಂಬಾವಳಿ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆಯ ಐಪಿಸಿ ಸೆಕ್ಷನ್‌ 306(ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಕೊಲೆಯಾದ ವ್ಯಕ್ತಯನ್ನು ಪೊಲೀಸರು ಬೆಂಗಳೂರಿನ ಉದ್ಯಮಿ ಪ್ರದೀಪ್‌ ಎಂದು ಗುರುತಿಸಿದ್ದಾರೆ. ನೆಟ್ಟಿಗೆರೆ ಗ್ರಾಮದ ಹತ್ತಿರ ಉದ್ಯಮಿ ಪ್ರದೀಪ್‌ ಕಾರಿನಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ.

ಘಟನೆ ಸ್ಥಳದಲ್ಲಿ ಡೆತ್‌ನೋಟ್‌ ಕೂಡ ಪತ್ತೆಯಾಗಿದ್ದು, ಇದರಲ್ಲಿ ಶಾಸಕ ಅರವಿಂದ್‌ ಲಿಂಬಾವಳಿ ಮತ್ತು ಐವರ ಹೆಸರು ಮತ್ತು ಫೋನ್‌ ನಂಬ್ರಗಳನ್ನು ಬರೆದಿದ್ದಾರೆ ಎಂದು ಪೊಲೀಸ್‌ ತಿಳಿಸಿದ್ದಾರೆ. ಮೃತ ಉದ್ಯಮಿ ಪ್ರದೀಪ್‌ ಡೆತ್‌ನೋಟ್‌ನಲ್ಲಿ, ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಅವರ ಹೆಸರನ್ನು ಬರೆದಿದ್ದು, ಇವರ ಹೆಸರೊಂದಿಗೆ ಐವರಾದ ಗೋಪಿ.ಕೆ, ಸೋಮಯ್ಯ, ಜಿ ರಮೇಶ್‌ ರೆಡ್ಡಿ, ಜಯರಾಮ ರೆಡ್ಡಿ ಮತ್ತು ರಾಘವ್‌ ಭಟ್‌ ಸದ್ಯ ಪೊಲೀಸ್‌ರು ಇವರೆಲ್ಲರ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

2018ರಲ್ಲಿ ಎಚ್‌ಎಸ್‌ಆರ್‌ ಲೇಔಟ್‌ನ ಹರಳೂರಿನಲ್ಲಿ ಕ್ಲಬ್‌ ತೆರೆಯಲು ಗೋಪಿ ಮತ್ತು ಸೋಮಯ್ಯ ಅವರನ್ನು ಪ್ರದೀಪ್‌ ಭೇಟಿಯಾಗಿದ್ದಾರೆ ಎಂದು ತಿಳಿದಿ ಬಂದಿದೆ. ಲಾಭದಲ್ಲಿ ಮೂರು ಲಕ್ಷ ರೂಪಾಯಿ ಮತ್ತು ಕ್ಲಬ್‌ನಲ್ಲಿ ಕೆಲಸ ಮಾಡಿದ್ದಕ್ಕಾಗಿ ತಿಂಗಳಿಗೆ ೧.೫ ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ನೀಡುವುದಾಗಿ ಇಬ್ಬರು ನನಗೆ ಭರವಸೆ ನೀಡಿದರು. ನಾನು ಅದನ್ನು ಒಪ್ಪಿಕೊಂಡು ಮೇ 2018 ರಿಂದ ಡಿಸೆಂಬರ್‌ 2018ರ ವರೆಗೆ ಬ್ಯಾಂಕ್‌ನಲ್ಲಿ ಒಂದು ಕೋಟಿ ರೂಪಾಯಿಗಳಷ್ಟು ಹಣವನ್ನು ಜಮಾ ಮಾಡಿದೆ” ಎಂದು ಪ್ರದೀಪ್‌ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

ಉದ್ಯಮದಲ್ಲಿ ಪಾಲುದಾರನನ್ನಾಗಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಒಂದು ಪೈಸೆಯನ್ನೂ ನೀಡಿಲ್ಲ. ನಾನು ಶಾಸಕರ ಬಳಿ ಹೋದಾಗ ರಾಜಿ ನೆಪದಲ್ಲಿ ಒಂಬತ್ತು ತಿಂಗಳಲ್ಲಿ 90 ಲಕ್ಷ ರೂ.ಗಳನ್ನು ತೆಗೆದುಕೊಂಡರು. ಆ ನಂತರ ಹಿಂತಿರುಗಿಸುವುದಾಗಿ ತಿಳಿಸಿದ್ದರು’ ಎಂದು ಆರೋಪಿಸಿದ್ದಾರೆ. ನನಗೆ ಶಾಸಕರು ಸಹಾಯ ಮಾಡಿಲ್ಲ, ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿದ್ದೇನೆ ಎಂದು ಪ್ರದೀಪ್‌ ಬರೆದಿದ್ದಾರೆ.

ಇದನ್ನೂ ಓದಿ : Students tour bus overturned: ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್‌ ಪಲ್ಟಿ: ಓರ್ವ ಸಾವು, 43 ಮಂದಿಗೆ ಗಾಯ

ಇದನ್ನೂ ಓದಿ : Elephant attack-1 dead: ಒಂಟಿ ಸಲಗದ ದಾಳಿ : ಮಗನನ್ನು ರಕ್ಷಿಸಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡ ತಂದೆ

ಇದನ್ನೂ ಓದಿ : Gurugram : ತಾಯಿ, ಪತ್ನಿಯ ಚಿಕಿತ್ಸೆಗೆ 24 ಕ್ಷ ರೂಪಾಯಿ ದರೋಡೆ : ಐವರು ಅರೆಸ್ಟ್‌

‘ರಮೇಶ್ ರೆಡ್ಡಿ ಎಂಬುವವರಿಂದ 10 ಲಕ್ಷ ಸಾಲ ತೆಗೆದುಕೊಂಡಿದ್ದೆ, ನನ್ನ ಕೃಷಿ ಆಸ್ತಿ ಮಾರಾಟ ಮಾಡಿ 35 ಲಕ್ಷ ರೂ. ಹಣವನ್ನು ಅವರಿಗೆ ನೀಡಿದ್ದೆ’ ಎಂದು ಹೇಳಿದ್ದಾರೆ. ‘ಆದರೆ, ಅವರು ಹೆಚ್ಚಿನ ಹಣ ವಸೂಲಿ ಮಾಡುವುದಾಗಿ ಬೆದರಿಸುತ್ತಿದ್ದಾರೆ. ರಾಘವ ಭಟ್ ನನ್ನಿಂದ 20 ಲಕ್ಷ ರೂ. ತೆಗೆದುಕೊಂಡಿದ್ದಾರೆ. ಅವರು ಇಂದಿಗೂ ಅದನ್ನು ವಾಪಸ್ ನೀಡಿಲ್ಲ’ ಎಂದು ಪ್ರದೀಪ್ ಆರೋಪಿಸಿದ್ದಾರೆ.ಮೃತದೇಹ ಪತ್ತೆಯಾದ ನಂತರ, ಫೋರೆನ್ಸಿಕ್ ತಂಡವು ಸಾವಿಗೆ ನಿಜವಾದ ಕಾರಣವನ್ನು ಕಂಡುಹಿಡಿಯಲು ಸ್ಥಳಕ್ಕೆ ತಲುಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸದ್ದಾರೆ.

Businessman commits suicide by shooting himself in Bangalore: Name of BJP MLA in death note

Comments are closed.