ಕಾರು ಅಪಘಾತದಲ್ಲಿ 3 ವರ್ಷದ ಬಾಲಕಿ ಸಾವು: ವಾಯುಪಡೆ ಅಧಿಕಾರಿಯ ಪುತ್ರ ಅರೆಸ್ಟ್‌

ದೆಹಲಿ : (Car accident- accused arrested) ಮೂರೂವರೆ ವರ್ಷದ ಬಾಲಕಿ ಕಾರು ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಅಪಘಾತದ ಆರೋಪದ ಮೇಲೆ 20 ವರ್ಷದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಭಾರತೀಯ ವಾಯುಪಡೆಯ ಅಧಿಕಾರಿಯ ಪುತ್ರ ಸಮರ್ಕ್ ಮಲಿಕ್ (20 ವರ್ಷ) ಎಂದು ಗುರುತಿಸಲಾಗಿದೆ.

ಅರ್ಜನ್ ವಿಹಾರ್‌ನಲ್ಲಿ ಮನೆಕೆಲಸ ಮಾಡಲು ತೆರಳುತ್ತಿರುವ ತಾಯಿಯ ಜೊತೆಗೆ ಬಾಲಕಿ ಹೋಗುತ್ತಿದ್ದಳು. ಈ ವೇಳೆ ಭಾರತೀಯ ವಾಯುಪಡೆಯ ಅಧಿಕಾರಿಯ ಪುತ್ರ ಸಮರ್ಕ್ ಮಲಿಕ್ ಕಾರಿನಲ್ಲಿ ತೆರಳುತ್ತಿದ್ದು, ತಾಯಿಯ ಜೊತೆ ತೆರಳುತ್ತಿದ್ದ ಬಾಲಕಿಗೆ ಢಿಕ್ಕಿ ಹೊಡೆದಿದ್ದಾನೆ. ನಂತರ ಚಾಲಕ ಸಮರ್ಕ್ ಗಾಯಗೊಂಡ ಬಾಲಕಿಯನ್ನು ಆಕೆಯ ತಾಯಿಯೊಂದಿಗೆ ದೆಹಲಿ ಕ್ಯಾಂಟ್ ಆಸ್ಪತ್ರೆ ಮತ್ತು ಡಿಡಿಯು ಆಸ್ಪತ್ರೆಗೆ ಕರೆದೊಯ್ದರು. ಹೆಚ್ಚಿನ ಚಿಕಿತ್ಸೆಗೆ ಆರ್ಎಂಎಲ್ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ವೇಳೆ ಬಾಲಕಿ ಮೃತಪಟ್ಟಿದ್ದಾಳೆ.

ಮಗಳನ್ನು ಕಳೆದುಕೊಂಡ ತಾಯಿ ಅಪಘಾತದ ಬಗ್ಗೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದು, ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಗ್ರೂಪ್ ಕ್ಯಾಪ್ಟನ್ ಮಗನನ್ನು ಬಂಧಿಸಿದ್ದಾರೆ. ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಕಾರನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ತಾಯಿಯ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆಯ (IPC) 279/304A ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಇನ್ನೂ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಗುಜರಾತಿನ ಪೆಟ್ರೋ ಕೆಮಿಕಲ್ ಕಂಪನಿಯಲ್ಲಿ ಭಾರೀ ಸ್ಫೋಟ: 2 ಮಂದಿ ಸಾವು, 2 ಮಂದಿಗೆ ಗಾಯ

ಇದನ್ನೂ ಓದಿ : Pulwama Encounter: ಪುಲ್ವಾಮಾ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕನ ಹತ್ಯೆಗೈದ ಭದ್ರತಾ ಪಡೆಗಳು

ಚಂಚಲ್ ಪಾರ್ಕ್ ಪ್ರದೇಶದ ಕೇಬಲ್ ಕಚೇರಿಯೊಳಗೆ ಗುಂಡಿನ ದಾಳಿ: ಓರ್ವನಿಗೆ ಗಾಯ

ದೆಹಲಿಯ ಚಂಚಲ್ ಪಾರ್ಕ್ ಪ್ರದೇಶದಲ್ಲಿನ ಕೇಬಲ್ ಕಚೇರಿಯೊಳಗೆ ಮುಸುಕುದಾರಿ ದಾಳಿಕೋರರು ನುಗ್ಗಿದ್ದು, ಕಚೇರಿಯಲ್ಲಿನ ಮುಂಭಾಗದ ಮೇಜಿನ ಬಳಿ ಕುಳಿತಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಓರ್ವ ವ್ಯಕ್ತಿಗೆ ಗಾಯಗಳಾಗಿದ್ದು, ಆರೋಪಿಗಳು ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಾಳುವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಪೂರ್ಣ ಸಿಸಿಟಿವಿ ದೃಶ್ಯಾವಳಿಗಳನ್ನು ಸುದ್ದಿ ಸಂಸ್ಥೆ ANI ಹಂಚಿಕೊಂಡಿದ್ದು, ಇದರಲ್ಲಿ ಇಬ್ಬರು ಪುರುಷರು – ಒಬ್ಬ ಪುದೀನ ಹಸಿರು ಮತ್ತು ಇನ್ನೋರ್‌ ದುಷ್ಕರ್ಮಿ ಬಿಳಿ ಕರವಸ್ತ್ರದಿಂದ ಅಸ್ಪಷ್ಟವಾಗಿ ಮುಖವನ್ನು ಮುಚ್ಚಿಕೊಳ್ಳುತ್ತಿದ್ದು, ನಂತರ ತಮ್ಮ ಕೈಯಲ್ಲಿ ಪಿಸ್ತೂಲ್‌ ಹಿಡಿದು ಕಚೇರಿ ಒಳಗೆ ಪ್ರವೇಶಿಸಿದ್ದಾರೆ. ಇದ್ದಕ್ಕಿದ್ದಂತೆ ಕಚೇರಿಯಲ್ಲಿ ಕುಳಿತಿದ್ದ ಮೂವರು ಪುರುಷರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯ ನಂತರ ಇಬ್ಬರು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ : ಫಾಕ್ಸ್‌ಲಿಂಕ್‌ನ ಉತ್ಪಾದನಾ ಘಟಕದಲ್ಲಿ ಭಾರಿ ಬೆಂಕಿ ಅವಘಡ

Car accident- accused arrested: 3-year-old girl died in a car accident: Air force officer’s son arrested

Comments are closed.