ಮಧ್ಯಂತರ ವರದಿ ಬಂದ ಕೂಡಲೇ ಸರಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ : ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ : ಹಲವು ತಿಂಗಳಿನಿಂದ ಸರಕಾರಿ ನೌಕರರು 7ನೇ ವೇತನ ಆಯೋಗದ ಸಿಹಿ ಸುದ್ದಿಗಾಗಿ ಕಾಯುತ್ತಿದ್ದಾರೆ. ಇದೀಗ ರಾಜ್ಯ ಸರಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಸಿದ್ಧಪಡಿಸಲಾಗುತ್ತಿದ್ದು, ಮಧ್ಯಂತರ ವರದಿ ಬಂದ ತಕ್ಷಣ ಅನುಷ್ಠಾನಗೊಳಿಸಲಾಗುವುದು ಎಂದು ಸಿ.ಎಂ.ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಸಿದ್ಧಪಡಿಸಲಾಗುತ್ತಿದ್ದು, ಮಧ್ಯಂತರ ವರದಿ ಬಂದ ತಕ್ಷಣ ಜಾರಿ ಮಾಡಲಾಗುವುದು, 2023-24ರಲ್ಲಿ ಇದನ್ನು ಜಾರಿಗೊಳಿಸುತ್ತೇವೆ. ಈಗಾಗಲೇ ಬಜೆಟ್ ನಲ್ಲಿ 7ನೇ ವೇತನ ಆಯೋಗದ ಅನುಷ್ಠಾನಕ್ಕೆ ಹಣ ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಸರಕಾರಿ ನೌಕಕರು ತಮ್ಮ ಬೇಡಿಕೆಯ ಪೂರೈಕೆಗಾಗಿ ಮುಷ್ಕರಕ್ಕೆ ಕರೆ (State government employees strike) ನೀಡಿದ್ದಾರೆ.

ಹಲವು ತಿಂಗಳುಗಳಿಂದ ತಾಳ್ಮೆಯಿಂದ ಕಾಯುತ್ತಿದ್ದ ಕರ್ನಾಟಕ ಸರಕಾರಿ ನೌಕರರು 7ನೇ ವೇತನ ಆಯೋಗದ ಶಿಫಾರಸುಗಳ ಜಾರಿ, ಹೊಸ ಪಿಂಚಣಿ ಯೋಜನೆ ರದ್ದು ಹಾಗೂ ಹಳೆ ಪಿಂಚಣಿ ಪದ್ಧತಿ ಮರು ಜಾರಿಗಾಗಿ ಆಗ್ರಹಿಸಿ ನಾಳೆಯಿಂದ ಮುಷ್ಕರ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ರಾಜ್ಯದ ಸರಕಾರಿ ಸೇವೆಯಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆ ಇದೆ. 7ನೇ ವೇತನ ಆಯೋಗದ ಶಿಫಾರಸ್ಸು ಜಾರಿ, ಎನ್ ಪಿಎಸ್ ರದ್ದು, ಹಳೆ ಪಿಂಚಣಿ ಪದ್ಧತಿ (ಒಪಿಎಸ್ ) ಜಾರಿ ಹಿನ್ನೆಲೆಯಲ್ಲಿ ನಾಳೆ ಸರಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ.

ಇದನ್ನೂ ಓದಿ : Delhi Liquor Scam : ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅರೆಸ್ಟ್ : AAP ಮುಂದಿನ ನಡೆಯೇನು ?

ಇದನ್ನೂ ಓದಿ : BS Yadiyurappa Birthday: ಧೀಮಂತ ನಾಯಕ, ರೈತಪರ ಹೋರಾಟಗಾರ ಬಿ.ಎಸ್‌ ಯಡಿಯೂರಪ್ಪ ಬೆಳೆದು ಬಂದ ಹಾದಿ

ಇದನ್ನೂ ಓದಿ : ಭಾರತ್ ಜೋಡೋ ಯಾತ್ರೆಯಿಂದ ಬಹಳಷ್ಟು ಕಲಿತಿದ್ದೇನೆ: ರಾಹುಲ್ ಗಾಂಧಿ

ಈ ಮುಷ್ಕರದಲ್ಲಿ ಸಚಿವಾಲಯದ ಜತೆಗೆ ಗ್ರಾಮ ಪಂಚಾಯಿತಿಯಿಂದ ವಿಧಾನಸೌಧದವರೆಗಿನ ಸರಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರಿ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.ಸರಕಾರಿ ನೌಕರರ ಈ ಮುಷ್ಕರದಿಂದ ಸಾರ್ವಜನಿಕರಿಗೆ ತಮ್ಮ ಸರಕಾರಿ ಕೆಲಸವನ್ನು ಮಾಡಲು ತೊಂದರೆಯಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಸರಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ನೋಡಬೇಕಿದೆ. ಕಳೆದ ಹಲವು ತಿಂಗಳುಗಳಿಂದ ಕಾಯುತ್ತಿದ್ದ ಸರಕಾರಿ ನೌಕರರಿಗೆ ಉತ್ತಮ ಫಲಿತಾಂಶ ದೊರಯುತ್ತಾ ಎಂದು ನೋಡಬೇಕಿದೆ.

State government employees strike: 7th pay commission will be implemented for government employees immediately after the interim report: CM Basavaraja Bommai

Comments are closed.