ಬೆಳಗಾವಿ : ಕಾರು ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಂಗನಕೇರಿ ಯಲ್ಲಿ ನಡೆದಿದೆ.
ಗೋಪಾಲ ಮುತ್ನಾಳ ( 36ವರ್ಷ), ರಾಮಣ್ಣ ಮಗ್ಗೆಪ್ಪಗೋಳ ( 44 ವರ್ಷ), ನೀಲವ್ವ ತಳವಾರ (40 ವರ್ಷ) ಮೃತಪಟ್ಟ ದುರ್ದೈವಿಗಳು. ಕಾರು ಹಾಗೂ ಬೈಕ್ ಸಂಗನಕೇರಿ ಬಳಿಯಲ್ಲಿ ಸಂಚರಿಸುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ. ಬೈಕ್ ಢಿಕ್ಕಿಯಾಗುತ್ತಿದ್ದಂತೆಯೇ ಕಾರು ಕೂಡ ಪಲ್ಟಿಯಾಗಿದೆ.
ಈ ಪೈಕಿ ಇಬ್ಬರು ಪಿ.ಜಿ.ಹುಣಶ್ಯಾಳ ಹಾಗೂ ಮಹಿಳೆ ಮಕ್ಕಳಗೇರಿ ಗ್ರಾಮಕ್ಕೆ ಮೊಹರಂ ಆಚರಣೆಗಾಗಿ ತೆರಳುತ್ತಿದ್ದರು ಎನ್ನಲಾಗಿದೆ. ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ : ಪಕ್ಕದ ಮನೆಯ ಮುಂದೆ ಮೂತ್ರ ಮಾಡಿದ ಮಗು : ಮಗುವಿನ ತಾಯಿಯನ್ನು ಚಾಕುವಿನಿಂದ ಕೊಂದ ಬಾಲಕ
ಇದನ್ನೂ ಓದಿ : ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದ ಅತ್ಯಾಚಾರ : ಖಾಸಗಿಯಾಗಿ ಟ್ಯೂಷನ್ ತೆಗೆದುಕೊಳ್ಳೋ ಮುನ್ನ ಹುಷಾರ್