India Corona Report : ಭಾರತದಲ್ಲಿ 36,401 ಹೊಸ ಕೋವಿಡ್ ಪ್ರಕರಣ, 530 ಮಂದಿ ಬಲಿ

ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಏರಿಕೆಯನ್ನು ಕಾಣುತ್ತಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿಭಾರತದಲ್ಲಿ 36,401 ಹೊಸ ಕೋವಿಡ್ -19 ಪ್ರಕರಣ ದಾಖಲಾಗಿದ್ದು, 530 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಇದುವರೆಗೆ ಕೊರೊನಾ ಸೋಂಕಿನಿಂದ 3,15,25,080 ಮಂದಿ ಚೇತರಿಸಿಕೊಂಡಿದ್ದು, ಕಳೆದ 24 ಗಂಟೆಗಳಲ್ಲಿ 39157 ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಅದ್ರಲ್ಲೂ ಇಂದು ಚೇತರಿಕೆಯ ಪ್ರಮಾಣ ಪ್ರಸ್ತುತ 97.53% ಇಷ್ಟು, ಇದು ಮಾರ್ಚ್ 2020 ರ ನಂತರ ಇದು ಅತೀ ಹೆಚ್ಚು. ಇನ್ನು ದೇಶದಲ್ಲಿ ಒಟ್ಟುಸಕ್ರಿಯ ಪ್ರಕರಣಗಳು 36,41,29 ಕ್ಕೆ ಕುಸಿದಿವೆ ಮತ್ತು ಒಟ್ಟು ಪ್ರಕರಣಗಳ ಶೇಕಡಾ 1.13 ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ ಸುಮಾರು 56 ಲಕ್ಷ ಮಂದಿಗೆ ಕೊರೊನಾ ಲಸಿಕೆಯನ್ನು ನೀಡಲಾಗಿದ್ದು, ದೇಶದಲ್ಲಿ ಇದುವರೆಗೆ 56.6 ಕೋಟಿಗೆ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಅಗಸ್ಟ್‌ ತಿಂಗಳಿನಲ್ಲಿಯೇ ಅತೀ ಹೆಚ್ಚು ಸಂಖ್ಯೆ ಸಂಖ್ಯೆಯಲ್ಲಿ ಕೊರೊನಾ ಪರೀಕ್ಷೆಯನ್ನು ನಡೆಸಲಾಗಿದ್ದು, ಭಾರತದಲ್ಲಿ ಒಟ್ಟು 50 ಕೋಟಿ ಮಾದರಿಗಳನ್ನು ಪರೀಕ್ಷಿಸಿದೆ.

ಇದನ್ನೂ ಓದಿ : ಕೇರಳದಲ್ಲಿ ಕೊರೊನಾ ಬ್ಲಾಸ್ಟ್‌ : 21,427 ಹೊಸ ಪ್ರಕರಣ, ಪಾಸಿಟಿವಿಟಿ ದರ 15.5ಕ್ಕೆ ಏರಿಕೆ

ಇದನ್ನೂ ಓದಿ : Night Curfew : ವಿಸ್ತರಣೆಯಾಯ್ತು ನೈಟ್‌ ಕರ್ಪ್ಯೂ : ಜಾರಿಯಾಗುತ್ತಾ ಕಠಿಣ ರೂಲ್ಸ್‌

Comments are closed.