Chandigarh Murder Case : ಪತಿಯನ್ನು ಕೊಂದು ಶೌಚಾಲಯದ ಗುಂಡಿಯಲ್ಲಿ ಹೂತ್ತಿಟ್ಟ ಪತ್ನಿ

ಚಂಡೀಗಢ : ಪಂಜಾಬ್‌ನ ಸಂಗ್ರೂರ್‌ ಜಿಲ್ಲೆಯಲ್ಲಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು ಶೌಚಾಲಯದ ಗುಂಡಿಯಲ್ಲಿ ಶವವನ್ನು (Chandigarh Murder Case) ಹೂತ್ತಿಟ್ಟಿದ್ದಾಳೆ. ತನ್ನ ಪತಿಯ ಕತ್ತು ಹಿಸುಕಿ ಕೊಂದು ಪ್ರಿಯಕರನ ಸಹಾಯದಿಂದ 25 ಅಡಿ ಆಳವಿರುವ ಶೌಚಾಲಯದ ಗುಂಡಿಯಲ್ಲಿ ಶವವನ್ನು ಹೂತು ಹಾಕಿದ್ದಾಳೆ ಎಂದು ವರದಿ ಆಗಿದೆ.

ಪಂಜಾಬ್‌ನ ಸಂಗ್ರೂರ್‌ ಜಿಲ್ಲೆಯ ಬಕ್ಷೀವಾಲಾ ನಿವಾಸಿಯಾಗಿರುವ ಅಮ್ರಿಕ್‌ ಸಿಂಗ್‌ ಮೃತ ದುರ್ದೈವಿಯಾಗಿದ್ದಾರೆ. ಘಟನೆ ನಡೆದು ಒಂದು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಶವವನ್ನು ಶನಿವಾರ ಶೌಚಾಲಯ ಗುಂಡಿಯಿಂದ ಹೊರ ತೆಗೆಯಲಾಗಿದೆ. 35ವರ್ಷದ ರಜ್ಜಿ ಕೌರ್‌ ಅಲಿಯಾಸ್‌ ಜಸ್ವಿರ್‌ ಕೌರ್‌ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿಗೆ 11 ಮತ್ತು 13 ವರ್ಷದ ಇಬ್ಬರು ಗಂಡು ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ನವೆಂಬರ್‌ 20ರಂದು ತನ್ನ ಪತಿ ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದಾಳೆ. ಈ ಪ್ರಕರಣಕ್ಕೆ ಸಂಬಂದಿಸಿದಂತೆ ತನಿಖೆ ನಡೆಸುತ್ತಿದ್ದಾಗ ಆರೋಪಿ ಅದೇ ಪ್ರದೇಶದ ನಿವಾಸಿಯಾದ ಸುರ್ಜಿತ್‌ ಸಿಂಗ್‌ ಬಗ್ಗಾ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ : Assault On Student by Teacher : ಮಗ್ಗಿ ಹೇಳದ ವಿದ್ಯಾರ್ಥಿ ಕೈಗೆ ಗಾಯ ಮಾಡಿದ ಶಿಕ್ಷಕ

ಇದನ್ನೂ ಓದಿ : Engagement Cancel : ಎಂಗೇಜ್ಮೆಂಟ್‌ ಆದ್ಮೇಲೆ ಹಳೆ ಪ್ರಿಯತಮೆ ಜೊತೆ ಓಡಿಹೋದ ಮರೆಪ್ಪ

ಇದನ್ನೂ ಓದಿ : Bomb blast target:‌ ಧರ್ಮಸ್ಥಳ ಮತ್ತು ಕೃಷ್ಣ ಮಠವನ್ನೂ ಟಾರ್ಗೆಟ್‌ ಮಾಡಿದ್ನಾ ಉಗ್ರ ಶಾರೀಖ್‌ ?

ಆರೋಪಿ ತನ್ನ ಪ್ರಿಯಕರ ಜೊತೆ ಸೇರಿ ತನ್ನ ಪತಿಯನ್ನು ಅಕ್ಟೋಬರ್‌ 27ರಂದು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸ್‌ ಎಸ್‌ಎಸ್‌ಪಿ ಸುರೇಂದ್ರ ಲಂಬಾ ತಿಳಿಸಿದ್ದಾರೆ. ಅಕ್ಟೋಬರ್‌ 27ರ ಸಂಜೆ ತನ್ನ ಪತಿ ಅಮ್ರಿಕ್‌ಗೆ ಊಟದಲ್ಲಿ ನಿದ್ದೆ ಮಾತ್ರೆಯನ್ನು ಬೆರೆಸಿ, ಊಟದ ಬಳಿಕ ಪ್ರಜ್ಞಾಹೀನ ಸ್ಥಿತಿಗೆ ತಲುಪಿದನ್ನು ನೋಡಿ ಪ್ರಿಯಕರನ ಸಹಾಯದಿಂದ ಪತಿಯ ಕತ್ತು ಹಿಸುಕಿ ಕೊಂದಿದ್ದಾಳೆ. ನಂತರ 25 ಅಡಿ ಆಳದ ಶೌಚಾಲಯ ಗಂಡಿಯಲ್ಲಿ ಹೂತು ಹಾಕಿದ್ದಾರೆ. ಈ ಘಟನೆ ಬಗ್ಗೆ ಯಾವುದೇ ಅನುಮಾನ ಬರದಂತೆ 20 ದಿನಗಳ ನಂತರ ಪತಿ ನಾಪತ್ತೆಯಾದ ದೂರನ್ನು ದಾಖಲಿಸಿದ್ದಾಳೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿದ್ದು, ಶನಿವಾರ ಶವವನ್ನು ಹೊರ ತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Chandigarh Murder Case: Wife killed her husband and buried him in the pit of the toilet

Comments are closed.