Hero MotoCorp: ಡಿಸೆಂಬರ್‌ 1ರಿಂದ ದುಬಾರಿಯಾಗಲಿರುವ ಹೀರೋ ದ್ವಿಚಕ್ರ ವಾಹನಗಳು

ದೇಶದ ಅತಿದೊಡ್ಡ ದ್ವಿಚಕ್ರ ವಾಹನ (Two-Wheeler) ತಯಾರಿಕಾ ಕಂಪನಿ ಹೀರೋ ಮೋಟೋಕಾರ್ಪ್‌ (Hero MotoCorp) ತನ್ನ ಎಲ್ಲಾ ಮೋಟಾರ್‌ಸೈಕಲ್‌ ಮತ್ತು ಸ್ಕೂಟರ್‌ಗಳ ಬೆಲೆಯನ್ನು ಹೆಚ್ಚಿಸಲಿದೆ. ಇದು ಡಿಸೆಂಬರ್‌ 1ರಿಂದ ಜಾರಿಗೆ ಬರುವಂತೆ 1,500ರೂ. ವರಗೆ ಹೆಚ್ಚಿಸುವುದಾಗಿ ಹೇಳಿದೆ. ಇದು ನಿರ್ದಿಷ್ಟ ಮಾದರಿಗಳು ಮತ್ತು ಮಾರುಕಟ್ಟೆಗಳ ಆಧಾರದ ಮೇಲೆ ಅವಲಂಬಿಸಿರುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಒಟ್ಟಾರೆ ಹಣದುಬ್ಬರದ ವೆಚ್ಚಗಳ ಕಾರಣದಿಂದ ಮೋಟಾರ್‌ಸೈಕಲ್‌ ಮತ್ತು ಸ್ಕೂಟರ್‌ಗಳ ಬೆಲೆಗಳನ್ನು ಪರಿಷ್ಕರಿಸುವುದು ಅಗತ್ಯವಾಗಿದೆ ಎಂದು ಹೀರೋ ಮೋಟೋಕಾರ್ಪ್‌ ಮುಖ್ಯ ಹಣಕಾಸು ಅಧಿಕಾರಿ ನಿರಂಜನ್ ಗುಪ್ತಾ ಹೇಳಿದ್ದಾರೆ. ಕಂಪನಿಯು ತನ್ನ ಗ್ರಾಹಕರ ಮೇಲೆ ಹೊರೆಯನ್ನು ತಪ್ಪಿಸಲು ನವೀನ ಹಣಕಾಸು ಪರಿಹಾರಗಳನ್ನು ಒದಗಿಸುವುದನ್ನು ಮುಂದುವರಿಸುತ್ತದೆ ಎಂದು ಅವರು ಹೇಳಿದರು. ‘ನಾವು ಎಕ್ಸಲರೇಟೆಡ್‌ ಸೇವಿಂಗ್ಸ್‌ ಪ್ರೋಗ್ರಾಮ್‌ಗಳನ್ನು ಸಹ ಇರಿಸಿದ್ದೇವೆ. ಇದು ಹೆಚ್ಚಿನ ವೆಚ್ಚದ ಪರಿಣಾಮವನ್ನು ಸರಿದೂಗಿಸಲು ಮತ್ತು ಮಾರ್ಜಿನ್‌ ಇರುವಲ್ಲಿ ಸುಧಾರಣೆಯನ್ನು ಹೆಚ್ಚಿಸಲು ನಮಗೆ ಸಹಾಯ ಮಾಡುತ್ತದೆ’ ಎಂದು ಕಂಪನಿಯ ಪ್ರಮುಖರು ಹೇಳಿದ್ದಾರೆ.

ಇದನ್ನೂ ಓದಿ : Lamborghini Urus Performante : ಭಾರತಕ್ಕೆ ಇಂದು ಎಂಟ್ರಿ ಕೊಡಲಿರುವ ಲ್ಯಾಂಬೊರ್ಗಿನಿ ಯುರಸ್‌ ಪರ್ಫಾರ್ಮ್ನಟ್‌

ಆರ್ಥಿಕ ಸೂಚ್ಯಂಕಗಳು ದ್ವಿಚಕ್ರ ವಾಹನಗಳ ಬೇಡಿಕೆಯ ಬೆಳವಣಿಗೆಗೆ ಅನುಕೂಲಕರವಾಗಿವೆ. ಮುಂಬರುವ ತ್ರೈಮಾಸಿಕಗಳಲ್ಲಿ ಉದ್ಯಮದ ಪ್ರಮಾಣವು ಹೆಚ್ಚಾಗುವುದನ್ನು ಕಂಪನಿಯು ನಿರೀಕ್ಷಿಸುತ್ತಿದೆ ಎಂದು ಕಂಪನಿ ಹೇಳಿದೆ.

ಮುಂದೆ ಬರಲಿರುವ ಹೀರೋ ಬೈಕ್‌ಗಳು :
ಸದ್ಯ ಬೆಂಗಳೂರು, ದೆಹಲಿ ಮತ್ತು ಜೈಪುರದಲ್ಲಿ ಮಾತ್ರ ಲಭ್ಯವಿರು Vida ಎಲೆಕ್ಟ್ರಿಕ್‌ ಸ್ಕೂಟರ್‌ ಮುಂಬರುವ ತಿಂಗಳುಗಳಲ್ಲಿ ಇತರ ನಗರಗಳಲ್ಲಿಯೂ ನಿರೀಕ್ಷಿಸಬಹುದಾಗಿದೆ. ಹೀರೋ ಮೋಟೋಕಾರ್ಪ್‌ ಕ್ಯಾಲಿಫೋರ್ನಿಯಾ (ಯುಎಸ್‌ಎ) ಮೂಲದ ಝೀರೋ ಮೋಟಾರ್‌ಸೈಕಲ್‌ಗಳ ಸಹಯೋಗದೊಂದಿಗೆ ಎಲೆಕ್ಟ್ರಿಕ್ ಬೈಕ್ ಸಹ ಅಭಿವೃದ್ಧಿಪಡಿಸುತ್ತಿದೆ. CE ವಿಭಾಗದಲ್ಲಿ, Hero Xpulse 400 ಮತ್ತು Xtreme 400S ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದಲ್ಲದೇ ಹೀರೋ ಮೋಟೋಕಾರ್ಪ್‌ ಹಾರ್ಲೆ-ಡೇವಿಡ್ಸನ್ ಸಹಯೋಗದೊಂದಿಗೆ ಹೊಸ 350cc ಬೈಕ್ ಅನ್ನು ಅಭಿವೃದ್ಧಿಪಡಿಸುತ್ತಿದೆ.

ಇದನ್ನೂ ಓದಿ : Royal Enfield : ಹೊಸ ಅವತಾರದಲ್ಲಿ ಬಿಡುಗಡೆಯಾದ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌

ಇದನ್ನೂ ಓದಿ : Toyota Innova Hycross : ಹೊಸ ತಲೆಮಾರಿನ ಕಾರು : ಟೊಯೊಟಾ ಇನ್ನೋವಾ ಹೈಕ್ರಾಸ್‌ ಅನಾವರಣ

(Hero MotoCorp hike two-wheeler price from December 1)

Comments are closed.