ಮಣ್ಣು ಸೇರಿದ ಚಿನ್ನಸ್ವಾಮಿ ಮೈದಾನದ ಹೆಮ್ಮೆಯ ಪುತ್ರ, 50 ವರ್ಷಗಳ ಬಾಂಧವ್ಯ ಅಂತ್ಯ

ಬೆಂಗಳೂರು : ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ (Chinnaswamy Stadium Bangalore) ನೀವು ಯಾವತ್ತಾದ್ರೂ ಭೇಟಿ ಕೊಟ್ಟಿದ್ದರೆ ಅಲ್ಲೊಬ್ಬ ವ್ಯಕ್ತಿಯನ್ನು ನೋಡೇ ಇರುತ್ತಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಗ್ರೌಂಡ್ಸ್‌ಮನ್ (Groundsman of Chinnaswamy Stadium) ಆಗಿ ಕೆಲಸ ಮಾಡ್ತಿದ್ದ ರಾಮಣ್ಣ (75) ಇಂದು ಇಹಲೋಕವನ್ನು ತ್ಯಜಿಸಿದ್ದಾರೆ ಎಂದು ತಿಳಿಸಿದ್ದಾರೆ. ಇವರಿಗೆ ಕ್ರಿಕೆಟ್‌ ದಿಗ್ಗಜರು ಸಂತಾಪವನ್ನು ಮಿಡಿದಿದ್ದಾರೆ.

ಅವರು ತಮ್ಮ ಇಡೀ ಜೀವನವನ್ನೇ ಚಿನ್ನಸ್ವಾಮಿ ಕ್ರೀಡಾಂಗಣಕ್ಕಾಗಿ ಅರ್ಪಿಸಿದ್ದಾರೆ. ಕಳೆದ 53 ವರ್ಷಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಗ್ರೌಂಡ್ಸ್’ಮನ್ ಆಗಿ ಕೆಲಸ ಮಾಡುತ್ತಿದ್ದ ರಾಮಣ್ಣ (75) ಇಂದು ವಿಧಿವಶರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ರಾಮಣ್ಣ ಇಹಲೋಕ ತ್ಯಜಿಸಿದ್ದಾರೆ. ತಮ್ಮ 22ನೇ ವಯಸ್ಸಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ರಾಮಣ್ಣ, ನಂತರ ಚಿನ್ನಸ್ವಾಮಿ ಮೈದಾನದ ಗ್ರೌಂಡ್ಸ್’ಮನ್ ಆಗಿ ಕೆಲಸ ಮಾಡುತ್ತಾ ಬಂದಿದ್ದರು.

ಇದನ್ನೂ ಓದಿ : Akash Singh join CSK: ಐಪಿಎಲ್ 2023 ರಲ್ಲಿ ಮುಖೇಶ್ ಚೌಧರಿ ಬದಲಿಗೆ ಸಿಎಸ್‌ಕೆ ಸೇರಿದ ಆಕಾಶ್ ಸಿಂಗ್

ಇದನ್ನೂ ಓದಿ : Women’s Premier League final : ಮುಂಬೈ ಇಂಡಿಯನ್ಸ್ Vs ಡೆಲ್ಲಿ ಕ್ಯಾಪಿಟಲ್ಸ್, ಯಾರು ಚಾಂಪಿಯನ್ಸ್? ಇಲ್ಲಿದೆ ಫೈನಲ್ ಪಂದ್ಯದ ಕಂಪ್ಲೀಟ್ ಮಾಹಿತಿ

ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದ ರಾಮಣ್ಣ, ರಾಜ್ಯ ಕ್ರಿಕೆಟ್ ಸಂಸ್ಥೆಯ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಹಾಲಿ ಹಾಗೂ ಮಾಜಿ ಕ್ರಿಕೆಟಿಗರ ಜೊತೆ ಉತ್ತಮ ಒಡನಾಟ ಹೊಂದಿದ್ದ ರಾಮಣ್ಣ, ತಮ್ಮ ಜೀವತಾವಧಿಯ 53 ವರ್ಷಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಕಳೆದಿದ್ದರು. ಹೀಗಾಗಿ ಕ್ರಿಕೆಟ್‌ ದಿಗ್ಗಜರು ಅವರ ಕರ್ತವ್ಯ ನಿಷ್ಠಯನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ : RCB Unbox : ನಾಳೆ ಚಿನ್ನಸ್ವಾಮಿಯಲ್ಲಿ ಮಹಾ ಸಂಗಮ, ಮತ್ತೆ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ ಕಿಂಗ್ ಕೊಹ್ಲಿ, ಗೇಲ್, ಎಬಿಡಿ

Groundsman of Chinnaswamy Stadium : Proud son of Chinnaswamy Stadium, 50 years of association ends

Comments are closed.