Contractor killed the worker: ಹಣದ ವಿಚಾರಕ್ಕೆ ಕಿರಿಕ್ : ಕಾರ್ಮಿಕನ ಕೊಲೆಗೈದು ಪೊದೆಯಲ್ಲಿ ಎಸೆದ ಗುತ್ತಿಗೆದಾರ

ಗುರುಗ್ರಾಮ್: (Contractor killed the worker) ಹಣದ ವಿವಾದದ ಹಿನ್ನಲೆಯಲ್ಲಿ ಕೂಲಿ ಕಾರ್ಮಿಕನನ್ನು ಹೊಡೆದು ಕೊಲೆ ಮಾಡಿ ನಂತರ ಪೊದೆಗಳಲ್ಲಿ ಎಸೆದುಹೋಗಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಬಿಹಾರ ಮೂಲದ ರಾಮ್ ವಿಲಾಸ್ ( 52 ವರ್ಷ) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯ ಗುತ್ತಿಗೆದಾರನೇ ಈ ಕೃತ್ಯವನ್ನು ಎಸಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಬಿಹಾರ ಮೂಲದ 52 ವರ್ಷದ ಕೂಲಿ ಕಾರ್ಮಿಕ ರಾಮ್ ವಿಲಾಸ್ನನ್ನು ಹಣದ ವಿಚಾರವಾಗಿ ಹೊಡೆದು ಸಾಯಿಸಲಾಗಿದ್ದು, ಆತನ ದೇಹವನ್ನು ಗುರುಗ್ರಾಮ್‌ನ ಸೆಕ್ಟರ್ 56 ರಲ್ಲಿ ಪೊದೆಗಳಲ್ಲಿ ಎಸೆದಿರುವುದಾಗಿ ತಿಳಿದುಬಂದಿದೆ. ಮೃತ ವ್ಯಕ್ತಿ ಮಗ ನೀಡಿದ ದೂರಿನ ಪ್ರಕಾರ, ವೇತನದ ವಿಚಾರದಲ್ಲಿ ಗುತ್ತಿಗೆದಾರನಿಗೂ ಮೃತ ವ್ಯಕ್ತಿಗೂ ಜಗಳವಿದ್ದ ಕಾರಣ ಗುತ್ತಿಗೆದಾರನೇ ಕೊಲೆ ಮಾಡಿರುವುದಾಗಿ ಆರೋಪಿಸಿದ್ದಾನೆ.

ಗಾಲ್ಫ್ ಕೋರ್ಸ್ ರಸ್ತೆಯ ರ್ಯಾಪಿಡ್ ಮೆಟ್ರೊ ನಿಲ್ದಾಣದ ಬಳಿಯ ಪೊದೆಗಳಲ್ಲಿ ರಕ್ತದ ಮಡುವಿನಲ್ಲಿ ಶವ ಬಿದ್ದಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲಿ ಕಾರ್ಮಿಕ ರಾಮ್ ವಿಲಾಸ್ ಶವವಾಗಿ ಬಿದ್ದಿದ್ದು, ಆತನ ತಲೆ ಮತ್ತು ಮುಖದಲ್ಲಿ ಭಾರವಾದ ವಸ್ತುವಿನಿಂದ ಹೊಡೆದಿರುವ ಗಾಯದ ಗುರುತುಗಳಿದ್ದವು. ಅಲ್ಲದೇ ಅಲ್ಲೇ ಪಕ್ಕದಲ್ಲಿ ಇಟ್ಟಿಗೆ ಕೂಡ ಬಿದ್ದಿರುವುದು ಕಂಡುಬಂದಿದೆ.

ಇದೀಗ ಮೃತ ಕಾರ್ಮಿಕನ ಮಗ ನೀಡಿದ ದೂರಿನ ಆಧಾರದ ಮೇಲೆ ಸೆಕ್ಟರ್ 56 ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಶಂಕಿತ ಗುತ್ತಿಗೆದಾರನನ್ನು ಕೂಡ ವಶಕ್ಕೆ ಪಡೆದುಕೊಳ್ಳಲು ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ : ಲೈಂಗಿಕ ದೌರ್ಜನ್ಯಕ್ಕೆ ಹೆದರಿ ಚಲಿಸುತ್ತಿದ್ದ ಬಸ್‌ನಿಂದ ಜಿಗಿದ ಮಹಿಳೆ

ಇದನ್ನೂ ಓದಿ : Sexual assault case: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: 20 ವರ್ಷ ಜೈಲು 50 ಸಾವಿರ ದಂಡ

ಇದನ್ನೂ ಓದಿ : Chamarajnagar bus accident: ಮಹದೇಶ್ವರ ಬೆಟ್ಟದಲ್ಲಿ ಬಸ್‌ ಅಪಘಾತ: 15 ಕ್ಕೂ ಹೆಚ್ಚು ಮಂದಿಗೆ ಗಾಯ

Contractor killed the worker: The contractor killed the worker and threw him in the bush

Comments are closed.