ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದ ವೈದ್ಯೆ ಡಾ.ಎಚ್.ಗಿರಿಜಮ್ಮ ನಿಧನ!

ದಾವಣಗೆರೆ: ಬರಹದ ಮೂಲಕವೇ ನಾಡಿನಾದ್ಯಂತ ಚಿರಪರಿಚಿತರಾಗಿದ್ದ ವೈದ್ಯೆ ಡಾ. ಎಚ್. ಗಿರಿಜಮ್ಮ ನಿಧನರಾಗಿದ್ದಾರೆ. 72 ವರ್ಷದ ಗಿರಿಜಮ್ಮ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ತಾಯಿ ಆಸೆಯಂತೆ ವೈದ್ಯಕೀಯ  ಅಧ್ಯಯನದಲ್ಲಿ ತೊಡಗಿಸಿಕೊಂಡು ವೈದ್ಯೆಯಾದ ಗಿರಿಜಮ್ಮ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದರು. ದಾವಣಗೆರೆ ಹರಿಹರ ಮೂಲದ ಗಿರಿಜಮ್ಮ ಪತಿ ಭಾಸ್ಕರ ಹೆಗಡೆಯವರನ್ನು ಅಗಲಿದ್ದಾರೆ. ಕಾದಂಬರಿಗಾರ್ತಿ ತ್ರಿವೇಣಿಯವರ ಬರಹದಿಂದ ಪ್ರಭಾವಿತರಾದ ಗಿರಿಜಮ್ಮ, ಸುಧಾ ವಾರಪತ್ರಿಕೆ ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ ತಮ್ಮ ಬರಹದ ಮೂಲಕ ಹೆಸರು ಗಳಿಸಿದ್ದರು.

ಚಂದಮಾಮ, ತಮಸೋಮಾ ಜೋತ್ಯಿರ್ಗಮಯ,ಅಂಬರತಾರೆ ಸೇರಿದಂತೆ ಒಟ್ಟು 27 ಕಾದಂಬರಿಗಳನ್ನು ಬರೆದಿರುವ ಗಿರಿಜಮ್ಮ, ಒಟ್ಟು 50 ಕತೆಗಳನ್ನು ಬರೆದಿದ್ದು, 5 ಕಥಾಸಂಗ್ರಹ ಗಳು ಪ್ರಕಟಗೊಂಡಿವೆ. ಹಲವು ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಬರೆದಿರುವ ಗಿರಿಜಮ್ಮ ಬೆಂಗಳೂರು ಸೇರಿದಂತೆ ಹಲವೆಡೆ ವೈದ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : Guinness Records : ಸೋಡಾ ಕುಡಿದು ಗಿನ್ನೆಸ್​ ರೆಕಾರ್ಡ್​ ಬರೆದ ಭೂಪ ..!!

ಇದನ್ನೂ ಓದಿ : ಕೇವಲ 1 ಕೋವಿಡ್‌ ಕೇಸ್‌ಗೆ ಲಾಕ್‌ಡೌನ್ ಘೋಷಿಸಿದ ನ್ಯೂಜಿಲ್ಯಾಂಡ್

Comments are closed.