Crime Case : ಬಿರಿಯಾನಿ ನೀಡಿದ್ದೇ ತಡವಾಯ್ತು : ಮೂವರಿಂದ ರೆಸ್ಟೋರೆಂಟ್ ಸಿಬ್ಬಂದಿಗೆ ಥಳಿತ

ನೋಯ್ಡಾ : ಮೂವರು ವ್ಯಕ್ತಿಗಳು ರೆಸ್ಟೋರೆಂಟ್ ವೊಂದಕ್ಕೆ ಊಟಕ್ಕೆ ತೆರಳಿದ್ದರು. ಟೇಬಲ್ ಮೇಲೆ ಕುಳಿತು ಬಿರಿಯಾನಿ ಆರ್ಡರ್ ಮಾಡಿದ್ದಾರೆ. (Crime Case)ಆದರೆ ಹೋಟೆಲ್ ಸಿಬ್ಬಂದಿ ಬಿರಿಯಾನಿ ಖಾಲಿಯಾಗಿದೆ ಎಂದು ತಿಳಿಸಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಮೂವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ಹೋಟೆಲ್ ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗ್ರೇಟರ್ ನೋಯ್ಡಾದ ಅನ್ಸಲ್ ಪ್ಲಾಜಾ ಮಾಲ್‌ನಲ್ಲಿರುವ ಝೌಕ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ.

ಮನೋಜ್, ರವೇಶ್ ಮತ್ತು ಕ್ರಿಶ್ ಎಂಬವರೇ ಬಂಧಿತ ಆರೋಪಿಗಳು. ಇವರೆಲ್ಲರೂ ದಾದ್ರಿ ನಿವಾಸಿಗಳಾಗಿರುತ್ತಾರೆ. ಸಿಸಿ ಕ್ಯಾಮರಾದಲ್ಲಿರುವ ದೃಶ್ಯಾವಳಿಯಲ್ಲಿ ಮೂವರು ವ್ಯಕ್ತಿಗಳು ಹೋಟೆಲ್ ನ ಟೇಬಲ್ ಮೇಲೆ ಕುಳಿತುಕೊಂಡಿದ್ದಾರೆ. ಮೂವರ ಪೈಕಿ ಒಬ್ಬ ವ್ಯಕ್ತಿ ಇದ್ದಕ್ಕಿಂದಂತೆಯೇ ತನ್ನ ಸೀಟಿನಿಂದ ಎದ್ದು ಕಂಪ್ಯೂಟರ್ ನಲ್ಲಿ ಬಿಲ್ಲಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಥಳಿಸಲು ಆರಂಭಿಸುತ್ತಾನೆ. ಸಿಸಿ ಕ್ಯಾಮರಾದಲ್ಲಿ ದೃಶ್ಯ ಸರಿಯಾಗಿ ಕಾಣಿಸುವಂತೆ ವ್ಯಕ್ತಿಯನ್ನು ಹಿಡಿದು ಥಳಿಸಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೇ ಮೂವರು ಸೇರಿಕೊಂಡು ವ್ಯಕ್ತಿಯನ್ನು ರೆಸ್ಟೋರೆಂಟ್ ನಿಂದ ಹೊರಗೆ ಎಳೆ ತಂದು ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ : Crime News : ಬಿರಿಯಾನಿಯಲ್ಲಿ ಪಾಲು ಕೇಳಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಪತಿ !

ಇದನ್ನೂ ಓದಿ : Muruga Mutt : ಮಠದಲ್ಲಿ ಪೋಟೋಕಳ್ಳತನ ಪ್ರಕರಣ: ಮಾಜಿ ಆಡಳಿತಾಧಿಕಾರಿ ಬಸವರಾಜನ್ ಬಂಧನ, ಪತ್ನಿಗಾಗಿ ಶೋಧ

ಇದನ್ನೂ ಓದಿ : Murugha Sharanaru Statement : ನನ್ನ ಕೊಠಡಿಗೆ ವಿದ್ಯಾರ್ಥಿನಿಯರಿಗೆ ಪ್ರವೇಶವೇ ಇಲ್ಲ, ದೌರ್ಜನ್ಯ ಎಸಗಿಲ್ಲ : ಮುರುಘಾ ಶ್ರೀ ಹೇಳಿಕೆ

ಮೂವರು ಆರೋಪಿಗಳು ಊಟಕ್ಕೆ ರೆಸ್ಟೋರೆಂಟ್‌ಗೆ ಹೋಗಿ ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದರು. ಸ್ವಲ್ಪ ಸಮಯದ ನಂತರ ಅಲ್ತಾಫ್ ಎಂಬ ಮಾಣಿ ಬಿರಿಯಾನಿ ಮುಗಿದಿದೆ ಎಂದು ಹೇಳುತ್ತಾನೆ. ಆರೋಪಿಗಳಲ್ಲಿ ಒಬ್ಬ ವ್ಯಕ್ತಿ ಕೋಪಗೊಂಡು ರೆಸ್ಟೋರೆಂಟ್‌ ಸಿಬ್ಬಂದಿಯನ್ನು ಥಳಿಸಿರುತ್ತಾನೆ ”ಎಂದು ಗ್ರೇಟರ್ ನೋಯ್ಡಾದ ಎಸಿಪಿ -1 ಮಹೇಂದ್ರ ದೇವ್ ಘಟನೆ ಬಗ್ಗೆ ತಿಳಿಸಿದ್ದಾರೆ. ನಾಲೆಡ್ಜ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ್ದಕ್ಕಾಗಿ ಶಿಕ್ಷೆ) ಮತ್ತು 147 (ಗಲಭೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Crime Case : Assault on restaurant staff not serving biryani; The accused are in police custody

Comments are closed.