Inauguration of Terminal-2 : ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2 ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು : (Inauguration of Terminal-2)ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದು, ಕನಕದಾಸ ಪುತ್ಥಳಿಗೆ ಮಾಲಾರ್ಪಣೆ ಮತ್ತು ವಂದೇ ಭಾರತ್‌ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದ್ದು ಇದೀಗ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ -2 ಉದ್ಘಾಟಿಸಿದ್ದಾರೆ. ಈ ಮೂಲಕ ನಾಳ್ಕು ಕೋಟಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಏರ್ಪೋರ್ಟ್‌ ಟರ್ಮಿನಲ್‌-2 ಗೆ ಪ್ರಧಾನಿ ಮೋದಿಯವರು ಆಗಮಿಸಿದ್ದು , ಮೊದಲ ಹಂತದ ಉದ್ಘಾಟನೆ(Inauguration of Terminal-2) ನೆರವೇರಿಸಿದ್ದಾರೆ . ಹದಿಮೂರು ಸಾವಿರ ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಇಂಟರ್‌ ನ್ಯಾಷನಲ್‌ ಏರ್‌ ಪೋರ್ಟ್‌ ನ ಟರ್ಮಿನಲ್‌ -2 ನಿರ್ಮಾಣವಾಗಿದ್ದು, ಹತ್ತು ಸಾವಿರ ಚದರ ಮೀಟರ್‌ ನಷ್ಟು ಪ್ರದೇಶವನ್ನು ಅಲಂಕೃತಗೊಳಿಸಲಾಗಿದೆ. ಉದ್ಯಾನ ಮಾದರಿಯ ರಚನೆಗಳು , ಸುಂದರವಾದ ಥೀಮ್‌ ಪಾರ್ಕ್‌ ಜೊತೆಗೆ ಹ್ಯಾಂಗಿಂಗ್‌ ಮಾದರಿಯ ಸುಂದರ ರಚನೆಗಳು , ಹಸಿರು ಗೋಡೆಗಳು ಸೇರಿದಂತೆ ಹಲವು ರೀತಿಯಲ್ಲಿ ಏರ್ ಪೋರ್ಟ್‌ ಅನ್ನು ನಿರ್ಮಿಸಲಾಗಿದ್ದು , ಸ್ಥಳೀಯ ತಂತ್ರಜ್ಞಾನಗಳ ಬಳಕೆಯಿಂದ ಸಿದ್ದಪಡಿಸಲಾಗಿದೆ .

ಏಷ್ಯಾದಲ್ಲೇ ಮೊದಲ ಗಾರ್ಡನ್‌ ಟರ್ಮಿನಲ್‌ ಎಂಬ ಹೆಗ್ಗಳಿಕೆಗೆ ಪಾತ್ರವಾದ ಟರ್ಮಿನಲ್‌ -2 ಇದೀಗ ಮೋದಿಯವರಿಂದ ಅನಾವರಣಗೊಂಡಿದೆ. ಅತ್ಯಂತ ಸುಂದರವಾದ , ಭವ್ಯವಾದ ಹಾಗೂ ಪರಿಸರ ಸ್ನೇಹಿ ಟರ್ಮಿನಲ್‌ ಇದಾಗಿದ್ದು , ಈಗಾಗಲೇ ಇದರ ಚಿತ್ರಣಗಳು ಎಲ್ಲೆಡೆ ವೈರಲ್‌ ಆಗಿವೆ . ವಿಶ್ವದ ಅತ್ಯಾಧುನಿಕ ಟೆಕ್ನಾಲಜಿಗಳೊಂದಿಗೆ ಇದೀಗ ವಿಮಾನಗಳ ಹಾರಾಟಕ್ಕೆ ಟರ್ಮಿನಲ್‌-2 ಐಷಾರಾಮಿ ಏರ್‌ಪೋರ್ಟ್‌ ಸಿದ್ಧವಾಗಿದೆ. ಸ್ವರ್ಗವನ್ನೇ ನಾಚಿಸುವಂತೆ ಬೆಂಗಳೂರು ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ನೂತನವಾಗಿ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವರ್ಷಕ್ಕೆ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ಹಾಗಾಗಿ ವಿಮಾನ ನಿಲ್ದಾಣ ತನ್ನ ಸಾಮರ್ಥ್ಯ ಹೆಚ್ಚಿಸಲು ಮುಂದಾಗಿ ಇದೀಗ ಟರ್ಮಿನಲ್-2 ಸಿದ್ಧಗೊಂಡಿದೆ.

ಇದನ್ನೂ ಓದಿ : Yellow & Red Alert : ಕರಾವಳಿಯಲ್ಲಿ ಮತ್ತೆ ಮಳೆ ಆರ್ಭಟ: 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ತಮಿಳುನಾಡಲ್ಲಿ ರೆಡ್ ಅಲರ್ಟ್​ ಘೋಷಣೆ

ಏರ್‌ಪೋರ್ಟ್‌ ಒಳಾಂಗಣವು ಸಂಪೂರ್ಣ ವುಡ್ ಡಿಸೈನ್, ಹಸಿರಿನೊಂದಿಗೆ ವಿನ್ಯಾಸಗೊಂಡಿದೆ. ಗ್ರೌಂಡ್ ಎಸಿ ಆಟೋ ಮೆಟಿಕ್ ಪಾಸ್‍ಪೋರ್ಟ್ ವೆರಿಫಿಕೇಷನ್, ಆಕರ್ಷಕ ಫ್ಲೋರಿಂಗ್ ಹಾಗೂ ಅತ್ಯಾಧುನಿಕ ಟೆಕ್ನಾಲಾಜಿಯನ್ನು ಹೊಂದಿದೆ. ವಿಮಾನ ಪ್ರಯಾಣಿಕರು ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ಸಂದರ್ಭದಲ್ಲಿ ವ್ಯಕ್ತಿಯನ್ನು ಗುರುತಿಸಲು ಫೇಸ್ ರೆಕಗ್ನಿಷನ್, ಫಿಂಗರ್ ಪ್ರಿಂಟ್ ಸೆನ್ಸಾರ್ ಸೌಲಭ್ಯಗಳನ್ನು ಒದಗಿಸಲಾಗಿದೆ. ನೂತನ ಟರ್ಮಿನಲ್‍ನಲ್ಲಿ ವಿಮಾನ ನಿಲ್ದಾಣದಲ್ಲಿನ ಸೌಲಭ್ಯಗಳ ಬಗ್ಗೆ ಪ್ಯಾಸೆಂಜರ್‌ಗಳಿಗೆ ಮಾಹಿತಿ ಪಡೆಯಲು ಇನ್ ಬಿಲ್ಟ್ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ತಂತ್ರಜ್ಞಾನವನ್ನು ಕೂಡ ರೂಪಿಸಲಾಗಿದೆ.

ಉದ್ಯಾನ ನಗರಿ ಬೆಂಗಳೂರಿನ ಸೌಂದರ್ಯದ ಅನುಭವವನ್ನು ನೀಡಲು, ಈ ವಾಕ್‌ಇನ್‌ದಿ ಗಾರ್ಡನ್ ಹೆಸರಿನ ಟರ್ಮಿನಲ್ ನಿರ್ಮಾಣ ಮಾಡಲಾಗಿದ್ದು , ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯ ಹಾಗೂ ಚೆಕ್-ಇನ್ ಮತ್ತು ವಲಸೆಗಾಗಿ ಕೌಂಟರ್‌ಗಳು ದ್ವಿಗುಣಗೊಳ್ಳುತ್ತವೆ, ಬಳಿಕ 2.5 ಕೋಟಿಯಿಂದ ವಾರ್ಷಿಕವಾಗಿ ಸುಮಾರು 5 ರಿಂದ 6 ಕೋಟಿ ಪ್ರಯಾಣಿಕರನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಟರ್ಮಿನಲ್-2 ಮೊದಲ ಹಂತದ ಕಾಮಗಾರಿಯನ್ನು ಮೋದಿಯವರು ಉದ್ಘಾಟಿಸಿದ್ದು , ನಂತರ ಕೆಂಪೇಗೌಡರ ನೂರ ಎಂಟು ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ

(Inauguration of Terminal-2) Prime Minister Narendra Modi has already arrived in Bangalore, garlanded Kanakadasa Putthali and given the green signal for Vande Bharat train traffic, and now he has inaugurated Terminal-2 of Bangalore International Airport. This will benefit 4 crore passengers tomorrow.

Comments are closed.