Crime News : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ : ವ್ಯಕ್ತಿಗೆ 20 ವರ್ಷ ಜೈಲು ಶಿಕ್ಷೆ

ಉಡುಪಿ : ನಾಲ್ಕು ವರ್ಷಗಳ ಹಿಂದೆ ಕೋಟ ಪೊಲೀಸ್‌ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (Crime News) ಎಸಗಿದ ಆರೋಪದ ಹಿನ್ನೆಲೆಯಲ್ಲಿ 32 ವರ್ಷದ ವ್ಯಕ್ತಿಯೋರ್ವನಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ (ಪೋಕ್ಸೊ ನ್ಯಾಯಾಲಯ) 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾಳಕುದ್ರು ನಿವಾಸಿ ಅಶೋಕ್ ಹಾಗೂ ಶ್ರೀನಿವಾಸ ಸುವರ್ಣ ಎಂಬವರಿಗೆ ಪೊಲೀಸರು ನೀಡಿದ ಸಾಕ್ಷ್ಯಾಧಾರದ ಆಧಾರದ ಮೇಲೆ ಪ್ರಕರಣದಲ್ಲಿ ಅಪರಾಧಿ ಎಂದು ಪರಿಗಣಿಸಿದೆ. ನ್ಯಾಯಾಧೀಶರು ಅಪರಾಧಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆಯ ಜೊತೆಗೆ 23 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಚಾರ್ಜ್ ಶೀಟ್ ಪ್ರಕಾರ, ವ್ಯಕ್ತಿ 15 ವರ್ಷದ ಅಪ್ರಾಪ್ತ ಬಾಲಕಿಯೊಂದಿಗೆ ಸ್ನೇಹ ಸಲುಗೆ ಬೆಳೆಸಿಕೊಂಡಿದ್ದು, ನಂತರ ಒಂದು ದಿನ ತನ್ನ ಕಾರಿನಲ್ಲಿ ಶಾಲೆಗೆ ಬಿಡುವ ನೆಪದಲ್ಲಿ ಅವಳನ್ನು ಬಲವಂತವಾಗಿ ಮತ್ತೊಬ್ಬ ಆರೋಪಿಯ ಮನೆಗೆ ಕರೆದೊಯ್ದನು. ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಮನೆಗೆ ಕರೆದೊಯ್ದಿದ್ದಾನೆ. ಈ ಕೃತ್ಯವನ್ನು ಯಾರಿಗೂ ಬಹಿರಂಗ ಪಡಿಸದಂತೆ ಬೆದರಿಕೆ ಹಾಕಿದ್ದಲ್ಲದೆ ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ : Cochin Airport : ವಿಮಾನದಲ್ಲಿ ಶೂನಲ್ಲಿ ಬಚ್ಚಿಟ್ಟು 25 ಲಕ್ಷ ಮೌಲ್ಯದ ಚಿನ್ನದ ಪೇಸ್ಟ್‌ ಕಳ್ಳಸಾಗಣಿ : ಮಹಿಳೆ ಅರೆಸ್ಟ್‌

ಬಾಲಕಿ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದು, ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಅಂದಿನ ಉಪ ಎಸ್ಪಿ ಜೈಶಂಕರ್ ತನಿಖೆ ನಡೆಸಿ ಪೋಕ್ಸೋ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ದಂಡದ ಮೊತ್ತದಲ್ಲಿ 13 ಸಾವಿರ ರೂ. ಸಂತ್ರಸ್ತೆಗೆ ಪಾವತಿಸುವಂತೆ ನ್ಯಾಯಾಲಯ ಸೂಚಿಸಿದೆ. ಬಾಲಕಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಸರಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ಆದರೆ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಪ್ರಕರಣದ ಇತರ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಪ್ರಾಸಿಕ್ಯೂಷನ್ ಪರ ವಕೀಲರಾದ ವೈ ಟಿ ರಾಘವೇಂದ್ರ ಮತ್ತು ಹರಿಶ್ಚಂದ್ರ ವಾದ ಮಂಡಿಸಿದ್ದರು.

Crime News: Sexual assault on a minor girl: Man sentenced to 20 years in prison

Comments are closed.