Vijaya Raghavendra wife Spandana : ಸ್ಪಂದನಾ ವಿಜಯ್‌ ರಾಘವೇಂದ್ರ ಪಂಚಭೂತಗಳಲ್ಲಿ ಲೀನ : ಪತ್ನಿಗೆ ಕಣ್ಣೀರ ವಿದಾಯ ಹೇಳಿದ ಚಿನ್ನಾರಿ ಮುತ್ತ

ಸ್ಯಾಂಡಲ್‌ವುಡ್‌ ಖ್ಯಾತನಟ ವಿಜಯ್‌ ರಾಘವೇಂದ್ರ ಅವರ ಪತ್ನಿ ಸ್ಪಂದನಾ (Vijaya Raghavendra wife Spandana) ಅಂತ್ಯಕ್ರೀಯೆ ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿದೆ. ಚಿನ್ನಾರಿ ಮುತ್ತನ ಪತ್ನಿ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಪತಿ ವಿಜಯ್‌ ರಾಘವೇಂದ್ರ ಹಾಗೂ ಪುತ್ರ ಶೌರ್ಯ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿದ್ದಾರೆ. ಸಾವಿರಾರು ಗಣ್ಯರು, ಸಂಬಂಧಿಕರು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ. ಸ್ಪಂದನಾ ನಿಧನಕ್ಕೆ ಸ್ಯಾಂಡಲ್‌ವುಡ್‌ ಕಂಬನಿ ಮಿಡಿದಿದೆ.

ಸ್ಪಂದನಾ ಬಾರದ ಲೋಕಕ್ಕೆ ಪಯಣಿಸಿ ಮೂರು ದಿನಗಳೇ ಕಳೆದಿದೆ. ಥಾಯ್ಲಾಂಡ್‌ ಪ್ರವಾಸಕ್ಕೆ ತೆರಳಿದ್ದ ವೇಳೆಯಲ್ಲಿ ಸ್ಪಂದನಾ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಪತಿ ವಿಜಯ್‌ ರಾಘವೇಂದ್ರ ಪತ್ನಿಯ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ಕೆರೆತಂದಿದ್ದರು. ಥಾಯ್ಲೆಂಡ್‌ನಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸ್ಪಂದನಾ ಪಾರ್ಥವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು.

ಮಲ್ಲೇಶ್ವರಂನಲ್ಲಿರುವ ಸ್ಪಂದನಾ ತಂದೆ ಬಿ.ಕೆ.ಶಿವರಾಂ ಅವರ ಮನೆಯಲ್ಲಿ ರಾತ್ರಿಯಿಂದಲೇ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಬೆಳಗಿನಿಂದಲೇ ನಟ ಶಿವರಾಜ್‌ ಕುಮಾರ್‌, ಯಶ್‌, ರವಿಚಂದ್ರನ್‌ ಸೇರಿದಂತೆ ಸ್ಯಾಂಡಲ್‌ವುಡ್‌ ನಟ, ನಟಿಯರು, ಹಿರಿಯ ಕಲಾವಿದರು ಆಗಮಿಸಿ ಕಂಬನಿ ಮಿಡಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಸೇರಿದಂತೆ ರಾಜಕೀಯ ಗಣ್ಯರು ಹಾಗೂ ಪೊಲೀಸ್‌ ಅಧಿಕಾರಿಗಳು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ : Vijaya Raghavendra wife Spandana : ಸ್ಪಂದನಾ ವಿಜಯ್ ಪಾರ್ಥಿವ ದರ್ಶನ ಪಡೆದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ನಂತರ ಸಂಜೆಯ ಸ್ಪಂದನಾ ಪಾರ್ಥವ ಶರೀರವನ್ನು ಮೆರವಣಿಗೆಯ ಮೂಲಕ ಶ್ರೀರಾಂಪುರದ ಹರೀಶ್ಚಂದ್ರ ಘಾಟ್‌ ಕೊಂಡೊಯ್ದು ಈಡಿನ ಸಮುದಾಯದ ಸಂಪ್ರದಾಯದಂತೆ ಅಂತ್ಯಕ್ರೀಯೆ ನಡೆಸಲಾಯಿತು. ಅಂತ್ಯಕ್ರೀಯೆಯಲ್ಲಿ ನಟ ವಿಜಯ್‌ ರಾಘವೇಂದ್ರ ತಂದೆ ಚಿನ್ನೆಗೌಡ, ತಮ್ಮ ನಟ ಮುರುಳಿ, ಸ್ಪಂದನಾ ತಂದೆ ಬಿ.ಕೆ.ಶಿವರಾಂ, ನಟ ಶಿವರಾಜ್‌ ಕುಮಾರ್‌, ಪತ್ನಿ ಗೀತಾ ಶಿವರಾಜ್‌ ಕುಮಾರ್‌, ಸ್ಪಂದನಾ ತಮ್ಮ ರಕ್ಷಿತ್‌ ಶಿವರಾಂ, ಚಿಕ್ಕಪ್ಪ ಬಿ.ಕೆ. ಹರಿಪ್ರಸಾದ್‌, ಸ್ಪಂದನಾ ಹಾಗೂ ವಿಜಯ್‌ ರಾಘವೇಂದ್ರ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರವೇ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಸ್ಪಂದನಾ ಹಾಗೂ ವಿಜಯ್‌ ರಾಘವೇಂದ್ರ ಅವರ ಮನೆಯಲ್ಲಿ ಶೋಕ ಮಡುಗಟ್ಟಿದೆ. ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಸ್ಪಂದನಾ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

Vijaya Raghavendra wife Spandana : Spandana Vijay Raghavendra Passes Away: Chinnari Mutta bids a tearful farewell to his wife

Comments are closed.