Crime News: ಎರಡನೇ ಪತ್ನಿಯನ್ನು ಜೈಲಿಗಟ್ಟಲು ತನ್ನ ಮಗಳನ್ನೇ ಬಲಿ ಕೊಟ್ಟ ಪಾಪಿ ತಂದೆ

ನಾಗ್ಪುರ: (Crime News) ಮೊದಲ ಹೆಂಡ್ತಿ ಸಾವನ್ನಪ್ಪಿದ್ದಳು. ಎರಡನೇ ಮದುವೆಯಾದ್ರೂ ಪತ್ನಿ ಮನೆ ಬಿಟ್ಟು ಹೋಗಿದ್ದಳು. ಹೇಗಾದ್ರೂ ಮಾಡಿ ಎರಡನೇ ಪತ್ನಿ ಹಾಗೂ ಮನೆಯವರಿಗೆ ಬುದ್ದಿ ಕಲಿಸಲು ಹೊರಟ ತಂದೆ ಮಾಡಿದ್ದು ಮಾತ್ರ ನೀಚ ಕೃತ್ಯ. ತನ್ನ ಮಗಳ ಕೈಯಲ್ಲಿ ಡೆತ್ ನೋಟ್ ಬರೆಯಿಸಿಕೊಂಡಿದ್ದ ತಂದೆ, ಕೊನೆಗೆ ಮಗಳನ್ನೇ ಕೊಲೆ ಮಾಡಿದ್ದಾನೆ. ಎರಡನೇ ಪತ್ನಿ ಹಾಗೂ ಮನೆಯವರು ಇನ್ನೇನು ಜೈಲು ಪಾಲಾಗಬೇಕು ಅನ್ನೋ ಹೊತ್ತಲ್ಲೇ ಪಾಪಿಯ ಕೃತ್ಯ ಬಯಲಾಗಿದೆ.

ನಾಗ್ಪುರದ ಕಾಲಮ್ನಾದಲ್ಲಿ ಈ ಘಟನೆ(Crime News) ನಡೆದಿದೆ. ಗ್ರಾಮದಲ್ಲಿ ಹದಿನಾರು ವರ್ಷದ ಬಾಲಕಿಯ ಮೃತದೇಹ ಸೀಲಿಂಗ್‌ ಫ್ಯಾನ್‌ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆಯ ರೂಮಿನಲ್ಲಿ ಪತ್ತೆಯಾದ ಐದು ಡೆತ್‌ ನೋಟ್ ಗಳ ಆಧಾರದ ಮೇಲೆ ಪೋಲೀಸರು ಅಕೆಯ ಮಲತಾಯಿ, ಚಿಕ್ಕಮ್ಮ‌, ಚಿಕ್ಕಪ್ಪ ಹಾಗೂ ಅಜ್ಜಿಯ ವಿರುದ್ದ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಬಾಲಕಿಯ ತಂದೆಯ ಮೊಬೈಲ್ ಪೋನ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆಯಲ್ಲಿ ಆತ್ಮಹತ್ಯೆಯ ಹಿಂದಿನ ಅಸಲಿ ಸತ್ಯ ಬಯಲಾಗಿದೆ.

ಎರಡನೇ ಪತ್ನಿಗೆ ಬುದ್ದಿ ಕಲಿಸುವ ಸಲುವಾಗಿ ತನ್ನ ಹದಿನಾರು ವರ್ಷದ ಮಗಳನ್ನು ದಾಳವಾಗಿ ಬಳಸಿಕೊಂಡಿದ್ದಾನೆ. ಮಗಳ ಕೈಯಲ್ಲಿ ಡೆತ್ ನೋಟ್ ಬರೆದಿತ್ತು, ನೇಣು ಬಿಗಿದು ಆತ್ಮಹತ್ಯೆಯ ನಾಟಕವಾಡುವಂತೆ ತಿಳಿಸಿದ್ದಾನೆ. ಅಪ್ಪ ಹೇಳಿದಂತೆ ಮಗಳು ಕೂಡ ಡೆತ್ ನೋಟ್ ಬರೆದಿದ್ದಾಳೆ. ಅದರಲ್ಲಿ ತನ್ನ ಸಂಬಂಧಿಕರ ಹೆಸರನ್ನು ಒತ್ತಾಯವಾಗಿ ಬರೆಸಿದ್ದಾನೆ. ನಂತರ ಫ್ಯಾನಿಗೆ ನೇಣು ಬಿಗಿದುಕೊಂಡು, ಸ್ಟೂಲ್ ಮೇಲೆ ನಿಂತಿದ್ದಾಳೆ. ಈ ವೇಳೆಯಲ್ಲಿ ತಂದೆ ಆಕೆಯ ಪೋಟೋವನ್ನು ತೆಗೆದುಕೊಂಡಿದ್ದಾನೆ. ನಂತರ ಸ್ಟೂಲ್ ಅನ್ನು ಕಾಲಿನಿಂದ ಒದ್ದಿದ್ದಾನೆ. ಹೀಗಾಗಿ ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ : Mandya News : ಈಜಲು ತೆರಳಿದ್ದ ರಾಷ್ಟೀಯ ಮಟ್ಟದ ಸೈಕ್ಲಿಂಗ್‌ ಕ್ರೀಡಾಪಟು ಸಾವು

ಇದನ್ನೂ ಓದಿ : Accident News : ಟ್ರ್ಯಾಕ್ಟರ್ ಲಾರಿ ಮುಖಾಮುಖಿ ಡಿಕ್ಕಿ : 5 ಮಂದಿ ಸಾವು, 25 ಮಂದಿ ಗಾಯ

ಈ ವೇಳೆಯಲ್ಲಿ ಬಾಲಕಿಯ ಸಹೋದರ ಕೂಡ ಸ್ಥಳದಲ್ಲಿಯೇ ಇದ್ದಿದ್ದ. ಸಹೋದರಿ ಸಾಯುತ್ತಿದ್ದಂತೆಯೇ ಆತ ಅಲ್ಲಿಂದ ಪರಾರಿಯಾಗಿದ್ದ. ಆದರೆ ತಂದೆ ಪೊಲೀಸರ ವಿಚಾರಣೆಯ ವೇಳೆಯಲ್ಲಿ ತಾನು ಕೆಲಸದ ನಿಮಿತ್ತ ದೂರದ ಊರಿಗೆ ಹೋಗಿದ್ದೆ. ಮರಳಿ ಬರುವಷ್ಟರಲ್ಲಿ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುಳ್ಳು ಹೇಳಿದ್ದ. ಕೊನೆಗೆ ಪೊಲೀಸರು ವಿಚಾರಣೆ ತೀವ್ರಗೊಳಿಸುತ್ತಲೇ ತಂದೆಯ ನಿಜಬಣ್ಣ ಬಯಲಾಗಿದೆ. ಆತನ ಮೊಬೈಲ್ ನಲ್ಲಿ ಆಕೆಯ ಪೋಟೋ ಹಾಗೂ ವಿಡಿಯೋಗಳು ಪತ್ತೆಯಾಗಿದೆ.

ಕೂಲಿ ಕೆಲಸ ಮಾಡಿಕೊಂಡಿದ್ದ ಪಾಪಿ ತಂದೆ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದಾನೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ನಾಗ್ಪುರ ಪೊಲೀಸ್‌ ಠಾಣೆಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

(Crime News) The first woman died. Even after his second marriage, his wife left home. However, the father, who tried to teach his second wife and family, did the only mean thing. The father, who had written a death note on his daughter’s hand, finally killed his daughter. The second wife and the family were about to go to jail and the criminal act was revealed.

Comments are closed.