Blast on new railway line: ಪ್ರಧಾನಿ ಮೋದಿಯ ಅವರಿಂದ ಉದ್ಘಾಟನೆಗೊಂಡ ಹೊಸ ರೈಲು ಮಾರ್ಗದಲ್ಲಿ ಸ್ಫೋಟ

ಕೆವಡಾ: (Blast on new railway line) ಪ್ರಧಾನಿ ನರೇಂದ್ರ ಮೋದಿಯವರಿಂದ ಅಕ್ಟೋಬರ್‌ 31 ರಂದು ಉದ್ಘಾಟನೆಗೊಂಡ ಹೊಸ ರೈಲು ಹಳಿಯಲ್ಲಿ ಸ್ಫೋಟಗೊಂಡಿರುವ ಘಟನೆ ಉದಯಪುರ- ಅಹಮಾದಾಬಾದ್‌ ರೈಲು ಮಾರ್ಗದ ಕೆವಡಾ ಪ್ರದೇಶದಲ್ಲಿನ ಓಡಾ ಸೇತುವೆಯ ಬಳಿ ನಡೆದಿದೆ. ಆದರೆ ಜನರ ಎಚ್ಚರಿಕೆಯಿಂದ ಭಾರೀ ಅನಾಹುತ ತಪ್ಪಿದೆ.

ನಿನ್ನೆ(ಭಾನುವಾರ) ರಾತ್ರಿಯ ವೇಳೆಯಲ್ಲಿ ಸ್ಫೋಟ(Blast on new railway line)ದ ಸದ್ದೊಂದು ಕೇಳಿಬಂದಿತ್ತು. ಅದರ ಸದ್ದಿನಿಂದಾಗಿ ಜನರಲ್ಲಿ ಕೋಲಾಹಲ ಉಂಟಾಗಿತ್ತು. ಮಾಹಿತಿಗಳ ಪ್ರಕಾರ ಓಡಾ ಸೇತುವೆಯಿಂದ ಸ್ಫೋಟದ ಶಬ್ಧ ಕೇಳಿ ಬಂದಿದ್ದು ,ಬಳಿಕ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ನೋಡಿದಾಗ ಹೊಸ ಹಳಿ ಹಾಳಾಗಿರುವುದು ಕಂಡುಬಂದಿದೆ. ತಕ್ಷಣವೇ ಸ್ಥಳೀಯರು ರೈಲ್ವೆ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ. ಜನರು ಎಚ್ಚೆತ್ತುಕೊಂಡು ರೈಲ್ವೇ ಇಲಾಖೆಗೆ ಮಾಹಿತಿ ನೀಡಿದ್ದರಿಂದ ಮುಂದೆ ನಡೆಯುವ ಭಾರೀ ಅನಾಹುತ ತಪ್ಪಿ ಹೋಗಿದೆ.

ವಾಸ್ತವವಾಗಿ ಈ ರೈಲು ಮಾರ್ಗವು ಅಕ್ಟೋಬರ್‌ 31 ರಂದು ಪ್ರಾರಂಭವಾಗಿದ್ದು, ಪ್ರಧಾನಿ ಮೋದಿಯವರಿಂದ ಉದ್ಘಾಟನೆಗೊಂಡಿತ್ತು. ಭಾನುವಾರ ಬೆಳಗ್ಗೆ ಜಿಲ್ಲಾಧಿಕಾರಿ ತಾರಾಚಂದ್ ಮೀನಾ ಅವರು ಕೆವಡಾದಲ್ಲಿರುವ ಓಡಾ ರೈಲ್ವೇ ಸೇತುವೆಯನ್ನು ಪರಿಶೀಲಿಸಲು ಆಗಮಿಸಿದ್ದು, ಪೊಲೀಸ್ ಆಡಳಿತ ಮಂಡಳಿಯ ಅಧಿಕಾರಿಗಳಿಂದ ಘಟನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಸಂಗ್ರಹಿಸಿದರು.

ಇದನ್ನೂ ಓದಿ : Crime News: ಎರಡನೇ ಪತ್ನಿಯನ್ನು ಜೈಲಿಗಟ್ಟಲು ತನ್ನ ಮಗಳನ್ನೇ ಬಲಿ ಕೊಟ್ಟ ಪಾಪಿ ತಂದೆ

ಇದನ್ನೂ ಓದಿ : Rajiv Gandhi assassination: 3 ದಶಕಗಳ ಬಳಿಕ ರಾಜೀವ್ ಗಾಂಧಿ ಹಂತಕರಿಗೆ ಬಿಡುಗಡೆ ಭಾಗ್ಯ: ನಳಿನಿ ಶ್ರೀಹರನ್ ಏನಂದ್ರು ಗೊತ್ತಾ

ಸಂಪೂರ್ಣ ಸಹಕಾರದ ಭರವಸೆ ನೀಡಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್
ಈ ಘಟನೆಯ ನಂತರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು “ಓಡಾ ರೈಲ್ವೇ ಸೇತುವೆಯ ಮೇಲಿನ ರೈಲು ಹಳಿಗಳಿಗೆ ಹಾನಿಯಾದ ಘಟನೆಯು ತುಂಬಾ ಆತಂಕಕಾರಿಯಾಗಿದೆ. ಪೊಲೀಸ್ ಮತ್ತು ಆಡಳಿತದ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆಯಲು ಡಿಜಿ ಪೊಲೀಸರಿಗೆ ಸೂಚನೆಯನ್ನು ನೀಡಲಾಗಿದೆ.” ಎಂದು ಹೇಳಿದ್ದಾರೆ. ಸೇತುವೆ ಪುನರಚನೆಗೆ ರೈಲ್ವೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಿಎಂ ಹೇಳಿದರು. ಈ ಮಾರ್ಗದಲ್ಲಿ ಪ್ರಯಾಣ ಸ್ಥಗಿತಗೊಂಡಿದ್ದರಿಂದ ರೈಲ್ವೆ ಪ್ರಯಾಣಿಕರನ್ನು ಅವರವರ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿದೆ ಎಂದು ತಿಳಿದು ಬಂದಿದೆ

(Blast on new railway line) The blast on the new railway line inaugurated by Prime Minister Narendra Modi on October 31 took place near Oda Bridge in Kewada area of the Udaipur-Ahmedabad railway line. But due to the caution of the people, a huge disaster was averted.

Comments are closed.