ಡೇಟಿಂಗ್ ಆ್ಯಪ್‌ ಮೋಹ : ಚೆಲುವೆ ಅಂದಕ್ಕೆ ಮರುಳಾಗಿ 6 ಕೋಟಿ ಕಳೆದುಕೊಂಡ ಬ್ಯಾಂಕ್‌ ಮ್ಯಾನೇಜರ್‌

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಜನರು ಡೇಟಿಂಗ್‌ ಆ್ಯಪ್‌ಗಳ ಮೋಹಕ್ಕೆ ಸಿಲುಕುತ್ತಿದ್ದಾರೆ. ಇಂತಹ ಆ್ಯಪ್‌ಗಳಿಂದ ಜನರು ವಂಚನೆಗೆ ಒಳಗಾಗುತ್ತಿದ್ದಾರೆ ಅನ್ನೋದು ಅರಿವಿದ್ದರೂ ಕೂಡ ಮೋಸ ಹೋಗುತ್ತಲೇ ಇದ್ದಾರೆ. ಇದೀಗ ಬ್ಯಾಂಕ್‌ ಮ್ಯಾನೇಜರ್‌ ಒಬ್ಬರು ಡೇಟಿಂಗ್‌ ಆ್ಯಪ್‌ನಲ್ಲಿ(dating app froud ) ಚೆಲುವೆ ಯೋರ್ವಳ ಮೋಹಕ್ಕೆ ಸಿಲುಕಿ 6 ಕೋಟಿ ಕಳೆದುಕೊಂಡು, ಜೈಲು ಸೇರಿದ್ದಾನೆ.

ಬೆಂಗಳೂರಿನ ಹನುಮಂತ ನಗರದಲ್ಲಿ ಇರುವ ಇಂಡಿಯನ್ ಬ್ಯಾಂಕ್‍ನಲ್ಲಿ ಮ್ಯಾನೇಜರ್‌ ಆಗಿರುವ ಹರಿಶಂಕರ್‌ ಡೇಟಿಂಗ್‌ ಆ್ಯಪ್‌ಗೀಳು ಹಚ್ಚಿಸಿಕೊಂಡಿದ್ದ. ಡೇಟಿಂಗ್‌ ಆ್ಯಪ್‌ ಮೂಲಕ ಯುವತಿಯೋರ್ವಳನ್ನು ಪರಿಚಯ ಮಾಡಿಕೊಂಡಿದ್ದ. ನಂತರದಲ್ಲಿ ಪಶ್ಚಿಮ ಬಂಗಾಲ ಮೂಲದ ಯುವತಿಯ ವ್ಯಾಮೋಹಕ್ಕೆ ಸಿಲುಕಿದ್ದ ಮ್ಯಾನೇಜರ್‌ ಆಕೆಯ ಬ್ಯಾಂಕ್‌ ಖಾತೆಗೆ ನಿತ್ಯವು ಹಣ ವರ್ಗಾವಣೆ ಮಾಡೋದಕ್ಕೆ ಶುರು ಮಾಡಿದ್ದ.

ಕೇವಲ 6 ದಿನಗಳ ಅವಧಿಯಲ್ಲಿ ಯುವತಿಯ ಖಾತೆಗೆ ಬರೋಬ್ಬರಿ 6 ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾನೆ. ತನ್ನ ಸ್ವತಃ ಖಾತೆಯಿಂದ 12 ಲಕ್ಷ ರೂಪಾಯಿ ಹಾಗೂ ಬ್ಯಾಂಕ್‌ಗೆ ಸೇರಿದ 5.69 ಕೋಟಿ ರೂಪಾಯಿ ಹಣವನ್ನು ಯುವತಿಗೆ ವರ್ಗಾಯಿಸಿದ್ದಾನೆ. ಇನ್ನು ಆಕೆಗೆ ಹಣ ನೀಡೋ ಸಲುವಾಗಿ ಬ್ಯಾಂಕಿನಲ್ಲಿ ಠೇವಣಿ ಇರಿಸಿದ್ದ ಅನಿತಾ ಎಂಬವರ ಎಫ್‌ಡಿ ಖಾತೆಯ ಮೇಲೆ ಸಾಲ ಪಡೆದುಕೊಂಡಿದ್ದಾನೆ. ಆದರೆ ಈ ವಿಚಾರ ಅನಿತಾ ಅವರ ಅರಿವಿಗೆ ಬರುತ್ತಿದ್ದಂತೆಯೇ ಮ್ಯಾನೇಜರ್‌ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ.

ಮ್ಯಾನೇಜರ್‌ ಮಾಡುತ್ತಿದ್ದ ಖತರ್‌ನಾಕ್‌ ಕೆಲಸಕ್ಕೆ ಬ್ಯಾಂಕಿಂಗ್‌ ಸಿಬ್ಬಂದಿ ಮುನಿರಾಜು ಎಂಬಾತ ಕೂಡ ಸಾಥ್‌ ನೀಡುತ್ತಿದ್ದ ಎಂದು ಮ್ಯಾನೇಜರ್‌ ಪೊಲೀಸರ ವಿಚಾರಣೆಯ ವೇಳೆಯಲ್ಲಿ ಬಾಯ್ಬಿಟ್ಟಿದ್ದಾನೆ. ಡೇಟಿಂಗ್ ಆ್ಯಪ್‌ನಲ್ಲಿ ಪರಿಚಿತಳಾಗಿದ್ದ ಯುವತಿ ತುಂಬಾ ಸ್ಮಾರ್ಟ್‌ ಆಗಿದ್ಲು. ಹೀಗಾಗಿ ಆಕೆಯ ಪ್ರೇಮ ಪಾಶಕ್ಕೆ ಬಿದ್ದು, ಆಕೆಗೆ ಹಣ ಕಳುಹಿಸೋದಕ್ಕೆ ಶುರು ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ. ಇದೀಗ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ : 10 ರೂಪಾಯಿಯಲ್ಲಿ ದೃಷ್ಟಿ ತೆಗೆದು 25 ಸಾವಿರಕ್ಕೆ ಡಿಮ್ಯಾಂಡ್‌ : ಗೃಹ ಪ್ರವೇಶದ ಮನೆಯಲ್ಲಿ ಮಂಗಳಮುಖಿಯರ ದಾಂಧಲೆ

ಇದನ್ನೂ ಓದಿ : Anna Bhagya Rice : ಅನ್ನಭಾಗ್ಯದ ಅಕ್ಕಿಯ ಅಕ್ರಮ ಸಾಗಾಟ : ಲಾರಿ ವಶ, ಇಬ್ಬರ ಬಂಧನ

dating app froud bangaluru indian Bank Manager given 6 crore to dating girl

Comments are closed.