Senior Citizens : ಹಿರಿಯ ನಾಗರಿಕರಿಗೆ FDಗಳ ಮೇಲೆ ಹೆಚ್ಚಿನ ಬಡ್ಡಿ!!

ಭಾರತದಲ್ಲಿ 60 ವರ್ಷ ಮೇಲ್ಪಟ್ಟ (Above 60 years) ನಾಗರಿಕರನ್ನು ಹಿರಿಯ ನಾಗರಿಕರು(Senior Citizens) ಎಂದು ಕರೆಯುತ್ತಾರೆ. ಸಾಮಾನ್ಯವಾಗಿ, ಹೂಡಿಕೆಯ(Investement) ವಿಷಯ ಬಂದಾಗ ಹಿರಿಯ ನಾಗರಿಕರಿಗೆ ಸಾಧ್ಯವಾದಷ್ಟು ಕಡಿಮೆ ಪ್ರಮಾಣದ ಅಪಾಯಗಳೊಂದಿಗೆ ಖಚಿತ ಆದಾಯವನ್ನು ನೀಡುವುದೇ ಮುಖ್ಯ ಗುರಿಯಾಗಿದೆ. ಮಾರುಕಟ್ಟೆಯಲ್ಲಿ ಹಿರಿಯ ನಾಗರಿಕರಿಗೆ ಹಲವಾರು ಬಗೆಯ ಹಣ ಹೂಡಿಕೆಯ ಆಯ್ಕೆಗಳಿವೆ. ಆದರೆ, ಅವುಗಳಲ್ಲಿ ಜನಪ್ರಿಯವಾದದ್ದು FD(ಸ್ಥಿರ ಠೇವಣಿ)ಗಳು. ಇದು ಹಿರಿಯ ನಾಗರಿಕರು ತಮ್ಮ ಹಣವನ್ನು ಹೂಡಿಕೆ ಮಾಡುವ ಅತ್ಯಂತ ಜನಪ್ರಿಯ ಹಣಕಾಸಿನ ಮಾರ್ಗವಾಗಿದೆ.

ಈಕ್ವಿಟಿ ಹೂಡಿಕೆಗಿಂತ ಬ್ಯಾಂಕ್‌ FDಗಳಲ್ಲಿ ಹಣ ತೊಡಗಿಸುವುದು ಸುರಕ್ಷಿತವೆಂದು ಪರಿಗಣಿಸಿರುವುದರಿಂದ ಹಿರಿಯ ನಾಗರಿಕರು ಅಂತಹ ಆಯ್ಕೆಗಳನ್ನೇ ಮಾಡುತ್ತಾರೆ. ಈ ಮೊದಲೂ ಅವರು ಆದಾಯದ ರೂಪದಲ್ಲಿ ಬರುವ ಬಡ್ಡಿಯ ಖಾತರಿ ಲಾಭವನ್ನೇ ಪಡೆಯುತ್ತಿದ್ದರು.

ಬ್ಯಾಂಕ್‌ಗಳಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ದರ :

ಸಾಮಾನ್ಯ ನಾಗರಿಕರಿಗೆ ಹೋಲಿಸಿದರೆ ಹಿರಿಯ ನಾಗರಿಕರು ಸಾಮಾನ್ಯವಾಗಿ ಹೆಚ್ಚಿನ ಬಡ್ಡಿ ದರಗಳನ್ನು ಪಡೆಯುತ್ತಾರೆ. ಬ್ಯಾಂಕ್‌ಗಳು ಶೇಕಡಾ 0.50 ರಷ್ಟು ಹೆಚ್ಚಿನ ಬಡ್ಡಿ ದರವನ್ನು ಅವರಿಗೆ ಪಾವತಿಸುತ್ತದೆ. ಹಿರಿಯ ನಾಗರಿಕರು ತಮ್ಮ ಅಗತ್ಯಗಳಿಗೆ ತಕ್ಕಂತೆ ನಿಯಮಿತ ಅವಧಿಗೆ ಬಡ್ಡಿಗಳನ್ನು ಪಡೆಯುವ ಅಥವಾ FDಗಳ ಮುಕ್ತಾಯದ ಸಮಯದಲ್ಲಿ ಅಸಲು ಮತ್ತು ಬಡ್ಡಿಯನ್ನು ಸೇರಿಸಿ ಪಡೆಯುವ ಆಯ್ಕೆ ಮಾಡಬಹುದಾಗಿದೆ.

ಹಿರಿಯ ನಾಗರಿಕರ FD ಬಡ್ಡಿ ದರಗಳು(2 ವರ್ಷಗಳಿಂದ 3 ವರ್ಷಗಳ ಅವಧಿಗೆ)
ಬ್ಯಾಂಕ್‌ಗಳ ಹೆಸರು    ವಾರ್ಷಿಕ ಬಡ್ಡಿ ದರ
ಕಾರ್ಪೋರೇಷನ್‌ ಬ್ಯಾಂಕ್‌6 %
ಕೆನರಾ ಬ್ಯಾಂಕ್‌5.95 %
ಸಿಂಡಿಕೇಟ್‌ ಬ್ಯಾಂಕ್‌5.90 %
ಕರ್ನಾಟಕ ಬ್ಯಾಂಕ್‌5.80 %
ಎಸ್‌ಬಿಐ5.85 %
ವಿಜಯಾ ಬ್ಯಾಂಕ್‌5.75 %

ಹಿರಿಯ ನಾಗರಿಕರಿಗೆ FD ತೆರಿಗೆ:
ಇತ್ತೀಚೆಗೆ ಆದಾಯ ತೆರಿಗೆ ಕಾಯಿದೆಗೆ ಸೇರಿಸಿದ ಸೆಕ್ಷನ್‌ 80TTB ಅಡಿಯಲ್ಲಿ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು ಅಥವಾ ಅಂಚೆ ಕಚೇರಿಗಳಲ್ಲಿ ಇಡುವ ಠೇವಣಿಗಳ ಮೇಲಿನ ಬಡ್ಡಿಯು ವಾಸ್ತವಿಕವಾಗಿ ತೆರಿಗೆ ವಿನಾಯತಿಯನ್ನು ಹೊಂದಿದೆ. ಹಿರಿಯ ನಾಗರಿಕರು ಈ ಮೇಲೆ ಹೇಳಿರುವ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ FDಗಳಿಂದ ವರ್ಷಕ್ಕೆ ಬರುವ 50, 000 ರೂ. ವರೆಗಿನ ಬಡ್ಡಿಯ ಆದಾಯಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.

ಇದನ್ನೂ ಓದಿ : Edible Oil Price : ಅಡುಗೆ ಎಣ್ಣೆಯ ಬೆಲೆಗಳಲ್ಲಿ ಇಳಿಕೆ! ಯಾವ ಎಣ್ಣೆ ಎಷ್ಟು ಇಳಿಕೆಯಾಗಿದೆ ಗೊತ್ತಾ?

ಇದನ್ನೂ ಓದಿ : Schedule an email : Gmail ನ ಇಮೇಲ್‌ ಸಹ ಶೆಡ್ಯೂಲ್‌ ಮಾಡಬಹುದು! ಹೇಗೆ ಗೊತ್ತಾ?

(Senior Citizens banks are giving best FD interest rates for senior citizens)

Comments are closed.