ಡೆತ್‌ನೋಟ್‌ ಬರೆದಿಟ್ಟು ಪಿಎಸ್‌ಐ ನಾಗರಾಜು ಆತ್ಮಹತ್ಯೆ : ಕಾರಣವೇನು ಗೊತ್ತಾ ?

PSI Nagaraju : ತುಮಕೂರು : ಡೆತ್‌ನೋಟ್‌ ಬರೆದಿದ್ದು ಲಾಡ್ಜ್‌ನಲ್ಲಿ ಪೊಲೀಸ್‌ ಸಬ್‌ ಇನ್ಸ್‌ ಪೆಕ್ಟರ್‌ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರಿನ ದ್ವಾರಕಾ ಹೋಟೆಲ್‌ ಲಾಡ್ಜ್‌ ನಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆಯ ದಾವಣಗೆರೆ ನಗರದಲ್ಲಿರುವ ಬಡಾವಣೆ ಪೊಲೀಸ್‌ ಠಾಣೆಯ ಪಿಎಸ್‌ಐ ನಾಗರಾಜು ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.

ಜುಲೈ1 ರಂದು ಪಿಎಸ್‌ಐ ನಾಗರಾಜು ಅವರು ತುಮಕೂರಿನ ಹೋಟೆಲ್‌ ಲಾಡ್ಜ್‌ನಲ್ಲಿ ಬಾಡಿಗೆ ಕೋಣೆಯೊಂದನ್ನು ಪಡೆದುಕೊಂಡಿದ್ದರು. ನಂತರ ಲಾಡ್ಜ್‌ನ ಕೋಣೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಂದು ಬೆಳಗ್ಗೆ ಲಾಡ್ಜ್‌ ಸಿಬ್ಬಂದಿಗಳಿಗೆ ರೂಮಿನಿಂದ ದುರ್ವಾಸನೆ ಬಂದಿತ್ತು. ಹೀಗಾಗಿ ರೂಮ್‌ ಒಳಗೆ ತೆರಳಿ ಪರಿಶೀಲನೆ ನಡೆಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

ದಾವಣಗೆರೆ ಜಿಲ್ಲೆಯ ಜವಳಘಟ್ಟ ಗ್ರಾಮದ ನಿವಾಸಿ ಆಗಿದ್ದ ನಾಗರಾಜು ದಾವಣಗೆರೆಯ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದರು. ಲಾಡ್ಜ್‌ನಲ್ಲಿ ನಾಗರಾಜು ಅವರ ಮೂರು ಪುಟಗಳ ಡೆತ್‌ನೋಟ್‌ ಪತ್ತೆಯಾಗಿದೆ.

ಪಿಎಸ್‌ಐ ನಾಗರಾಜು ಅವರ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಒಂದು ವರ್ಷ ಸೇವೆ ಸಲ್ಲಿಸಿದ್ದರೆ, ಅವರು ಸೇವೆಯಿಂದ ನಿವೃತ್ತರಾಗುತ್ತಿದ್ದರು.

ಕಳೆದ ವರ್ಷವಷ್ಟೇ ಮಗಳ ಮದುವೆ ಮಾಡಿಸಿದ್ದರು, ಗರ್ಭಿಣಿ ಆಗಿದ್ದು, ಮುಂದಿನ ತಿಂಗಳು ಹೆರಿಗೆಗೆ ವೈದ್ಯರು ದಿನ ಕೊಟ್ಟಿದ್ದರು. ಈ ನಡುವಲ್ಲೇ ತಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Also Read : 200MP ಕ್ಯಾಮೆರಾ, 1TB ಸ್ಟೋರೆಜ್‌ : ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಅಲ್ಟ್ರಾದಲ್ಲಿ ಏನೇನಿದೆ ?

ನಾಗರಾಜು ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಸಮಸ್ಯೆ ಇರಲಿಲ್ಲ. ಶುಗರ್‌, ಬಿಪಿ ಸೇರಿ ಹೃದಯ ಸಂಬಂಧಿ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಜುಲೈ 1 ರಂದು ಮನೆ ಬಿಟ್ಟು ಹೋಗಿದ್ದು, ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದರು.

ಪಿಎಸ್‌ಐ ನಾಗರಾಜು ಅವರ ನಾಪತ್ತೆಯ ಕುರಿತು ದಾವಣಗೆರೆಯ ಕೆಟಿಜೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‌ಐ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Also Read : ಆಧಾರ್‌ ಕಾರ್ಡ್‌ ಬಳಸಿ, ನಿಮ್ಮ ಹೆಸರಲ್ಲಿ ಎಷ್ಟು ಮಂದಿ ಸಾಲ ಪಡೆದಿದ್ದಾರೆ ? ಹೀಗೆ ಚೆಕ್‌ ಮಾಡಿ

davanagere PSI Nagaraju committed suicide in lodge tumakur found death note

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories