Deadbody found in fridge: ಢಾಬಾದ ಫ್ರಿಡ್ಜ್‌ ನಲ್ಲಿ ಬಾಲಕಿಯ ಶವ ಪತ್ತೆ: ಆರೋಪಿ ಅರೆಸ್ಟ್‌

ದೆಹಲಿ: (Deadbody found in fridge) ದೆಹಲಿಯಲ್ಲಿ ನಡೆದ ಶ್ರದ್ದಾ ವಾಕರ್‌ ಹತ್ಯೆ ಪ್ರಕರಣ ಇಡೀ ದೆಹಲಿಯನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣದ ತನಿಖೆ ಇನ್ನೂ ನಡೆಯುತ್ತಲೇ ಇದ್ದು, ಇದರ ಮಧ್ಯೆ ಅದೇ ರೀತಿಯಲ್ಲಿ ಇನ್ನೊಂದು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಢಾಬಾದ ಫ್ರಿಡ್ಜ್‌ ನಲ್ಲಿ ಬಾಲಕಿಯ ಶವ ಪತ್ತೆಯಾಗಿದ್ದು, ಪೊಲೀಸರು ಆರೋಪಿಯನ್ನು ಫ್ರಿಡ್ಜ್‌ ನಲ್ಲಿದ್ದ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಾಹಿತಿಗಳ ಪ್ರಕಾರ, ಕಾಶ್ಮೀರ ಗೇಟ್‌ ಐಎಸ್‌ ಬಿಟಿ ಬಳಿ ಕಾರಿನಲ್ಲಿ ಬಾಲಕಿಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಇದಾದ ಬಳಿಕ ಆರೋಪಿ ಬಾಲಕಿಯ ಮೃತದೇಹವನ್ನು ಮಿತ್ರೌ ಗ್ರಾಮದ ತನ್ನ ಧಾಬಾದ ಫ್ರೀಜರ್‌ ನಲ್ಲಿ ಬಚ್ಚಿಟ್ಟಿದ್ದಾನೆ. ಇದೀಗ ದೆಹಲಿ ಪೊಲೀಸರು ಢಾಬಾದ ಫ್ರಿಡ್ಜ್‌ ನಲ್ಲಿದ್ದ ಶವವನ್ನು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ದೆಹಲಿಯ ಬಾಬಾ ಹರಿದಾಸ್‌ ನಗರ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಆರೋಪಿಯನ್ನು ಸಾಹಿಲ್‌ ಗೆಹ್ಲೋಟ್‌ ( 26 ವರ್ಷ) ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎನ್ನುವುದು ತಿಳಿದುಬಂದಿಲ್ಲ. ಆರೋಪಿಯ ವಿಚಾರಣೆ ಪೂರ್ಣಗೊಂಡಮೇಲಷ್ಟೇ ನಿಖರ ಮಾಹಿತಿಗಳು ತಿಳಿದುಬರಲಿವೆ.

ಅಂದು ಇಡೀ ದೆಹಲಿಯನ್ನೇ ಶ್ರದ್ದಾ ಕೊಲೆ ಪ್ರಕರಣ ಬೆಚ್ಚಿಬೀಳಿಸಿತ್ತು. ಶ್ರದ್ದಾಳ ಪ್ರಿಯಕರ ಅಫ್ತಾಬ್‌ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು. ಶ್ರದ್ದಾಳನ್ನು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಆಕೆಯ ಮೃತದೇಹವನ್ನು ಮೂವತ್ತೈದು ತುಂಡುಗಳನ್ನಾಗಿ ಕತ್ತರಿಸಿ, ಫ್ರಿಡ್ಜ್‌ ನಲ್ಲಿಟ್ಟಿದ್ದ. ಪ್ರತಿದಿನ ದೇಹದ ಭಾಗಗಳನ್ನು ಎಸೆದು ಬರುತ್ತಿದ್ದು, ನವೆಂಬರ್‌ ತಿಂಗಳಿನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ : Engineering student suicide in hostel: ಹಾಸ್ಟೆಲ್ ಕೊಠಡಿಯಲ್ಲೇ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಇದನ್ನೂ ಓದಿ : Pune road accident: ರಸ್ತೆ ದಾಟುತ್ತಿದ್ದ ಮಹಿಳೆಯ ಗುಂಪಿಗೆ ಎಸ್‌ ಯುವಿ ಢಿಕ್ಕಿ: 5 ಮಹಿಳೆಯರ ಸಾವು, 3 ಮಂದಿಗೆ ಗಾಯ

ಇದನ್ನೂ ಓದಿ : Rape with drugs: ಮಾಲ್‌ನ ಪಾರ್ಕಿಂಗ್ ಸ್ಥಳದಲ್ಲಿ ಮಹಿಳೆಗೆ ಮಾದಕವಸ್ತು ನೀಡಿ ಕಾರಿನೊಳಗೆ ಅತ್ಯಾಚಾರ

Deadbody found in fridge: Dead body of girl found in fridge of Dhaba: Accused arrested

Comments are closed.