Dehli acid attack: 17 ವರ್ಷದ ಬಾಲಕಿ ಮೇಲೆ ಆಸಿಡ್ ದಾಳಿ : ಬೆಚ್ಚಿಬಿದ್ದ ರಾಷ್ಟ್ರ ರಾಜಧಾನಿ

ದೆಹಲಿ: (Dehli acid attack) ಈಗಾಗಲೇ ಆಸಿಡ್‌ ದಾಳಿಗೆ ಬೆಚ್ಚಿಬಿದ್ದ ನಗರದಲ್ಲಿ ಈಗ ಮತ್ತೊಂದು ಘಟನೆ ನಡೆದಿದ್ದು, 17 ವರ್ಷದ ಬಾಲಕಿಯ ಮೇಲೆ ಕೀಚಕರು ಆಸಿಡ್‌ ದಾಳಿ ನಡೆಸಿರುವ ಘಟನೆ ದೆಹಲಿಯ ದ್ವಾರಕಪ್ರದೇಶದಲ್ಲಿ ನಡೆದಿದೆ. ಆಸಿಡ್‌ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಬಾಲಕಿಯನ್ನು ದೆಹಲಿಯ ಸಫ್ದರ್‌ ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೆಹಲಿಯಲ್ಲಿ ಇನ್ನೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಬೆಳಿಗ್ಗೆ ಸರಿಸುಮಾರು 9 ಗಂಟೆಗೆ ವಿದ್ಯಾರ್ಥಿನಿಯೋರ್ವಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್‌ ನಲ್ಲಿ ಬಂದ ಇಬ್ಬರು ಕೀಚಕರು ಬಾಲಕಿಯ ಮೇಲೆ ಆಸಿಡ್‌ (Dehli acid attack) ಎಸೆದಿದ್ದಾರೆ. ಕೀಚಕರು ಆಸಿಡ್‌ ಎಸೆದು ಪರಾರಿಯಾಗುತ್ತಿರುವ ವಿಡಿಯೋ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು, ಬಾಲಕಿಯ ನರಳಾಟ ಕರುಳು ಹಿಂಡುವಂತಿದೆ.

ಘಟನೆಯ ಬಗ್ಗೆ ದೆಹಲಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು ಇಬ್ಬರು ಕೀಚಕರಲ್ಲಿ ಒಬ್ಬನನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಬಾಲಕಿ ಶಾಲೆಗೆ ತೆರಳುವ ವೇಳೆ ಘಟನೆ ನಡೆದಿದೆ.

ಭಾರೀ ಸದ್ದು ಮಾಡಿತ್ತು 2005ರಲ್ಲಿ ದೆಹಲಿಯಲ್ಲಿ ನಡೆದ ಆಸಿಡ್‌ ದಾಳಿ
ಈ ಹಿಂದೆ ದೆಹಲಿಯಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿತ್ತು. 2005ರಲ್ಲಿ ದೆಹಲಿಯ ತುಘಲಕ್ ರಸ್ತೆಯಲ್ಲಿ 15 ವರ್ಷದ ಲಕ್ಷ್ಮೀ ಅಗರವಾಲ್ ಮೇಲೆ ಇಬ್ಬರು ಯುವಕರಿಂದ ಆ್ಯಸಿಡ್ ದಾಳಿ ನಡೆದಿತ್ತು. ಈ ಘಟನೆ ಇಡೀ ದೇಶದಲ್ಲೇ ಭಾರೀ ಸದ್ದು ಮಾಡಿತ್ತು. ಬಾಲಕಿ ಮದುವೆ ನಿರಾಕರಿಸಿದ್ದಕ್ಕೆ ದಾಳಿ ನಡೆಸಿದ್ದು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು. ಇದೀಗ ಅದೇ ರೀತಿಯಲ್ಲಿ ಇನೋರ್ವ ಬಾಲಕಿಯ ಮೇಲೆ ಆಸಿಡ್‌ ದಾಳಿ ನಡೆದಿದ್ದು, ದೆಹಲಿಯ ಜನತೆ ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ : ಕೋಟ: ಹೃದಯಾಘಾತದಿಂದ 30 ವರ್ಷದ ಮಹಿಳೆ ಸಾವು

ಇದನ್ನೂ ಓದಿ : Family problem: ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

(Delhi acid attack) Now another incident has taken place in the city which has already been shaken by acid attack, and the incident of acid attack on a 17-year-old girl has taken place in Delhi’s Dwaraka Pradesh. The girl, who was seriously injured in the acid attack, was admitted to Delhi’s Safdar Jung Hospital.

Comments are closed.