Delhi Police : ಪ್ರೀತಿಸಿದ ಯುವತಿ ಬಿಎಸ್‌ಸಿ ಪದವೀಧರನಿಂದ ಬ್ಲಾಕ್‌ಮೇಲ್ : ಖಾಸಗಿ ಪೋಟೋ ಅಪ್ಲೋಡ್ ಮಾಡಿ 7 ಲಕ್ಷ ರೂ.ಸುಲಿಗೆ

ನವದೆಹಲಿ : ತಾನು ಪ್ರೀತಿಸಿದ ಮಹಿಳೆಗೆ ಬ್ಲ್ಯಾಕ್‌ಮೇಲ್‌(Black Mail Case) ಮಾಡಿ ಕಿರುಕುಳ ನೀಡುವ ಮೂಲಕ ಆಕೆಯಿಂದ ಬರೋಬ್ಬರಿ 7 ಲಕ್ಷ ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು(Delhi Police) ಬಂಧಿಸಿದ್ದಾರೆ. ಆರೋಪಿಯು ತನ್ನ ಪ್ರೀಯತಮೆಯ ಒಪ್ಪಿಗೆ ಇಲ್ಲದೇ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಆಕೆಯ ವೈಯಕ್ತಿಕ ಪೋಟೋಸ್‌ಗಳನ್ನು ಅಪ್‌ಲೋಡ್‌ ಮಾಡಿ ಅದನ್ನು ತೆಗೆದು ಹಾಕುವುದಕ್ಕೆ ಹಣದ ಆಮಿಷ ಒಡ್ಡಿದ್ದಾನೆ.

ಬಿಎಸ್‌ಸಿ ಕಂಪ್ಯೂಟರ್‌ ಸೈನ್ಸ್‌ ಪದವೀಧರ ಅನ್ಶುಲ್‌ ಶ್ರೀವಾಸ್ತವ ಎಂಬಾತನೇ ಬಂಧಿತ ಆರೋಪಿ. ಅನ್ಮುಲ್ ಶ್ರೀವಾಸ್ತವ್ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ನಂತರ ಆಕೆಯ ಒಪ್ಪಿಗೆ ಇಲ್ಲಿದೆ ಸಾಮಾಜಿಕ ಜಾಲತಾಣದಲ್ಲಿ ಆಕೆಯ ಜೊತೆಗಿದ್ದ ಖಾಸಗಿ ಪೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದ. ಅಲ್ಲದೇ ಆಕೆಗೆ ಕರೆ ಹಾಗೂ ಈ ಮೇಲ್ ಮಾಡಿ ಬೆದರಿಕೆಯನ್ನು ಒಡ್ಡುತ್ತಿದ್ದ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪೋಟೋಗಳನ್ನು ತೆಗೆಯಬೇಕಾದ್ರೆ ಹತ್ತು ಲಕ್ಷ ರೂಪಾಯಿ ನೀಡುವಂತೆ ಸಂತ್ರೆಸ್ತೆಗೆ ತಿಳಿಸಿದ್ದಾನೆ. ಭಯಗೊಂಡ ಯುವತಿ ಆರೋಪಿಗೆ ತನ್ನ ಬ್ಯಾಂಕ್ ಖಾತೆಯಿಂದ ಸುಮಾರು ಏಳು ಲಕ್ಷ ರೂಪಾಯಿಯನ್ನು ವರ್ಗಾಯಿಸಿದ್ದಾಳೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೆಪ್ಟೆಂಬರ್‌ 12ರಂದು ಆರ್‌ಕೆ ಪುರಂ ನಿವಾಸಿಯೊಬ್ಬರು ಇಮೇಲ್‌ ಮತ್ತು ಸಂದೇಶಗಳ ಮೂಲಕ ಅನ್ಶುಲ್‌ ಶ್ರೀವಾಸ್ತವ ನಿರಂತರವಾಗಿ ಕಿರುಕುಳ ನೀಡುವ ಮೂಲಕ ಬೆದರಿಕೆ(Black Mail Case) ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಪ್ರಕರಣದ ತನಿಖೆ ವೇಳೆಯಲ್ಲಿ ಆರೋಪಿಯಿಂದ ಹೆದರಿದ ಮಹಿಳೆಯು ವ್ಯಕ್ತಿಯು ಕಳಿಸಿದ ಬ್ಲ್ಯಾಕ್‌ಮೇಲ್‌ ಸಂದೇಶ, ಪ್ರಾಕ್ಸಿ ಸಂಖ್ಯೆಗಳಿಂದ ಸ್ವೀಕರಿಸಿದ ಕರೆಗಳ ಕುರಿತು ಮಾಹಿತಿ ನೀಡಿದ್ದಾರೆ. ನಂತರ ವ್ಯಕ್ತಿಗೆ ಸಂಬಂಧ ಪಟ್ಟ ಬ್ಯಾಂಕ್‌ ಖಾತೆಗೆ ಹಾಗೂ Instagram, Facebook, Google, Rediff ಸೇರಿದಂತೆ ಇರುವ ಸಾಮಾಜಿಕ ಜಾಲತಾಣಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಸದ್ಯ ಆರೋಪಿಯ ವಿರುದ್ದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಪ್ರಾಥಮಿಕ ವಿಚಾರಣೆಯ ನಂತರ ಆರೋಪಿಯ ಪತ್ತೆಗೆ ದಾಳಿ ನಡೆಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ದಾಖಲು ಆಗುತ್ತಿದ್ದಂತೆಯೇ ಅನ್ಶುಲ್‌ ಶ್ರೀವಾಸ್ತವ ಪರಾರಿಯಾಗಿದ್ದಾನೆ. ಆದರೆ ಪೊಲೀಸರ ತಂಡವು ಉತ್ತರ ಪ್ರದೇಶದ ಉನ್ನಾವೋದಲ್ಲಿ ಅನ್ಶುಲ್‌ ಶ್ರೀವಾಸ್ತವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಡಿಸಿಪಿ ಸಿ ಮನೋಜ್‌ ಹೇಳಿದ್ದಾರೆ. ಅಲ್ಲದೇ ಆರೋಪಿ ತಾನು ಮಾಡಿರುವ ಆರೋಪವನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಅನ್ಶುಲ್‌ ಶ್ರೀವಾಸ್ತವ್ ನಿಂದ ಮೊಬೈಲ್ ಪೋನ್, ಎರಡು ಸಿಎಮ್, ಎರಡು ಎಟಿಎಂ ಕಾರ್ಡ್ ಹಾಗೂ ಬ್ಯಾಂಕ್ ಚೆಕ್ ಬುಕ್ ಗಳನ್ನು ವಶ ಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ : Kerala Police:ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ತುಂಡಾಗಿ ಸಿಕ್ಕಿದ ಮೃತದೇಹ ಪ್ರಕರಣ ಭೇದಿಸಿದ ಪೊಲೀಸರು : ಗ್ಯಾಂಗ್​ವಾರ್​ನಿಂದ ನಡೆದಿತ್ತು ಕೊಲೆ

ಇದನ್ನೂ ಓದಿ : gang-raped : ಸಾಫ್ಟ್​ವೇರ್​ ಇಂಜಿನಿಯರ್​ಗೆ ಥಳಿಸಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ

ಇದನ್ನೂ ಓದಿ : Chinese Loan App : ಚೈನೀಸ್‌ ಲೋನ್‌ ಆಪ್‌ಗಳ ವಿರುದ್ಧ ಬೆಂಗಳೂರು ಪೊಲೀಸ್‌ ಸಮರ

ಆರೋಪಿ ಅನ್ಶುಲ್‌ ಶ್ರೀವಾಸ್ತವ್ ಗೆ ಸಂತ್ರಸ್ತೆಯ ಅಕ್ಕನ ಪರಿಚಯವಿತ್ತು. ಅಲ್ಲದೇ ಸಂತ್ರಸ್ತೆಯನ್ನು ಆತ ಪ್ರೀತಿಸುತ್ತಿದ್ದ. ತನ್ನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಳ್ಳಬೇಕು. ಇಲ್ಲವಾದ್ರೆ ಹತ್ತು ಲಕ್ಷ ರೂಪಾಯಿ ನೀಡುವಂತೆಯೂ ಆತ ಬೇಡಿಕೆ ಇಟ್ಟಿದ್ದ. ಆದ್ರೀಗ ಹಣದಾಸೆಗೆ ಬಲಿಬಿದ್ದ ಆರೋಪಿ ಪೊಲೀಸರ ಕೈಗೆ ಸಿಕ್ಕಿ ಬಿದ್ದು ಜೈಲು ಸೇರಿದ್ದಾರೆ.

Delhi Police : Blackmailed by BSC graduate who loved her: Upload private photo and extort Rs 7 lakh

Comments are closed.