Dhanbad nursing home fire: ಧನ್ಬಾದ್ ನರ್ಸಿಂಗ್ ಹೋಮ್‌ ನಲ್ಲಿ ಬೆಂಕಿ ಅವಘಡ: ದಂಪತಿ ಸೇರಿ 5 ಮಂದಿ ದುರ್ಮರಣ

ಧನ್‌ ಬಾದ್:‌ (Dhanbad nursing home fire) ನರ್ಸಿಂಗ್ ಹೋಂ-ಕಮ್-ಪ್ರೈವೇಟ್ ಹೌಸ್‌ನ ಸ್ಟೋರ್ ರೂಮ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಇಬ್ಬರು ವೈದ್ಯರು ಸೇರಿದಂತೆ ಕನಿಷ್ಠ ಐದು ಮಂದಿ ಬಲಿಯಾದ ಘಟನೆ ರಾಂಚಿಯಿಂದ ಸುಮಾರು 170 ಕಿ.ಮೀ ದೂರದಲ್ಲಿರುವ ಧನ್‌ಬಾದ್‌ನ ಬ್ಯಾಂಕ್ ಮೋರ್ ಪ್ರದೇಶದಲ್ಲಿ ನಡೆದಿದೆ. ಮೃತರನ್ನು ವೈದ್ಯಕೀಯ ಸಂಸ್ಥೆಯ ಮಾಲೀಕ ಡಾ.ವಿಕಾಸ್ ಹಜ್ರಾ, ಅವರ ಪತ್ನಿ ಡಾ.ಪ್ರೇಮಾ ಹಜ್ರಾ, ಮಾಲೀಕರ ಸೋದರಳಿಯ ಸೋಹನ್ ಖಮರಿ ಮತ್ತು ಮನೆಯ ಸಹಾಯಕಿ ತಾರಾದೇವಿ ಎಂದು ಗುರುತಿಸಲಾಗಿದೆ.

ರಾಂಚಿಯಿಂದ ಸುಮಾರು 170 ಕಿ.ಮೀ ದೂರದಲ್ಲಿರುವ ಧನ್‌ಬಾದ್‌ನ ಬ್ಯಾಂಕ್ ಮೋರ್ ಪ್ರದೇಶದಲ್ಲಿನ ನರ್ಸಿಂಗ್ ಹೋಂ-ಕಮ್-ಪ್ರೈವೇಟ್ ಹೌಸ್‌ನ ಸ್ಟೋರ್ ರೂಮ್‌ನಲ್ಲಿ ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯಿಂದ ಉಂಟಾದ ದಟ್ಟ ಹೊಗೆಯಿಂದ ನರ್ಸಿಂಗ್‌ ಹೋಮ್‌ನಲ್ಲಿದ್ದ ಐವರು ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ವರದಿ ಮಾಧ್ಯಮಗಳು ತಿಳಿಸಿವೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಬೆಂಕಿ ಅವಘಡದಲ್ಲಿ ಇಬ್ಬರು ವೈದ್ಯರು ಸೇರಿದಂತೆ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಇನ್ನೋರ್ವ ವ್ಯಕ್ತಿಗೆ ತೀವ್ರ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಗಾಯಾಳುವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ಅಪಘಾತದಲ್ಲಿ ನಾಲ್ವರು ಮೃತ ವ್ಯಕ್ತಿಗಳ ಗುರುತು ಪತ್ತೆಯಾಗಿದ್ದು, ಇನ್ನೋರ್ವ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಧನ್‌ಬಾದ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಪ್ರೇಮ್ ಕುಮಾರ್ ತಿವಾರಿ, “ಸ್ಟೋರ್ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟ ಹೊಗೆಯಿಂದ ಉಸಿರುಗಟ್ಟಿದ ಕಾರಣ ಮಾಲೀಕರು ಮತ್ತು ಅವರ ಪತ್ನಿ ಸೇರಿದಂತೆ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ. ಒಬ್ಬ ವ್ಯಕ್ತಿಯೂ ಗಾಯಗೊಂಡಿದ್ದಾರೆ. ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ. ” ಎಂದು ಪಿಟಿಐಗೆ ತಿಳಿಸಿದರು.

ಇದನ್ನೂ ಓದಿ : Bus driver attempt to suicide: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಬಿಎಂಟಿಸಿ ಬಸ್‌ ಚಾಲಕ

ಇದನ್ನೂ ಓದಿ : Murder-5 arrested: ತಂದೆ, ಸಹೋದರನಿಂದಲೇ ಮೆಡಿಕಲ್‌ ವಿದ್ಯಾರ್ಥಿನಿಯ ಕೊಲೆ: ಐವರು ಅರೆಸ್ಟ್‌

ಆದರೆ ಬೆಂಕಿ ಅವಘಡ ಸಂಭವಿಸಲು ನಿಖರವಾದ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಸದ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಅವಘಡಕ್ಕೆ ಕಾರಣಗಳನ್ನು ಪತ್ತೆಹಚ್ಚಲಾಗುತ್ತಿದೆ.

Dhanbad nursing home fire: Fire accident in Dhanbad nursing home: 5 people died including a couple

Comments are closed.