ಬುಧವಾರ, ಜೂನ್ 18, 2025
HomeBreakingಕರಾವಳಿಗೂ ವ್ಯಾಪಿಸಿದ ಡ್ರಗ್ಸ್ ಜಾಲ : ಮಂಗಳೂರಲ್ಲಿ 132 ಕೆ.ಜಿ. ಗಾಂಜಾ ಪತ್ತೆ : ಇಬ್ಬರ...

ಕರಾವಳಿಗೂ ವ್ಯಾಪಿಸಿದ ಡ್ರಗ್ಸ್ ಜಾಲ : ಮಂಗಳೂರಲ್ಲಿ 132 ಕೆ.ಜಿ. ಗಾಂಜಾ ಪತ್ತೆ : ಇಬ್ಬರ ಬಂಧನ

- Advertisement -

ಮಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ಕರಾಳತೆ ಅನಾವರಣವಾದ ಬೆನ್ನಲ್ಲೇ ಕರಾವಳಿಯಲ್ಲಿಯೂ ಮಾದಕ ವಸ್ತು ಜಾಲ ಪತ್ತೆಯಾಗಿದೆ. ಮಂಗಳೂರಲ್ಲಿ 132 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದಿದ್ದು, ಕೇರಳ ಮೂಲದ ಇಬ್ಬರನ್ನು ಬಂಧಿಸಲಾಗಿದೆ.

Ganja 5

ಕರಾವಳಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಮಾಧಕ ವಸ್ತು ಸಾಗಾಟ ಜಾಲ ಸಕ್ರೀಯವಾಗಿದೆ. ಅದ್ರಲ್ಲೂ ಕೇರಳದಿಂದ ಮಂಗಳೂರಿಗೆ ಎಗ್ಗಿಲ್ಲದೇ ಗಾಂಜಾ ಸಾಗಾಟ ಮಾಡಲಾಗುತ್ತಿದೆಯೆಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಇದೀಗ ಭಾರೀ ಪ್ರಮಾಣದಲ್ಲಿ ಗಾಂಜಾ ಪತ್ತೆಯಾಗಿರೋದು ಕರಾವಳಿಗರಲ್ಲಿ ಭಯ ಹುಟ್ಟಿಸಿದೆ.

Ganja 4

ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಮಂಗಳೂರಿನ ಸಿಸಿಬಿ ಪೊಲೀಸರು ಬೃಹತ್ ಪ್ರಮಾಣದಲ್ಲಿ ಮಹೇಂದ್ರ ಪಿಕ್ ಅಪ್ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.

Ganja New

ಕಾಸರಗೋಡು ನಿವಾಸಿಗಳಾದ ಕಲಂದರ್ ಮಹಮ್ಮದ್(35) ಮತ್ತು ಮೊಯಿದ್ದೀನ್ ಅನ್ಸಾರ್(27) ಬಂದಿತ ಆರೋಪಿಗಳು. ಬಂಧಿತರಿಂದ ಬರೋಬ್ಬರಿ 132 ಕೆ.ಜಿ. ಗಾಂಜಾ, ಮಹೇಂದ್ರ ಬೊಲೆರೋ, ಸ್ವಿಫ್ಟ್ ಕಾರು ವಶಕ್ಕೆ ಪಡೆಯಲಾಗಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular