ಶಾಲೆ ಪುನರಾರಂಭದವರೆಗೆ ವಾರ್ಷಿಕ ಶುಲ್ಕ, ಅಭಿವೃದ್ದಿ ಶುಲ್ಕ ವಿಧಿಸುವಂತಿಲ್ಲ : ದೆಹಲಿ ಹೈಕೋರ್ಟ್ ಮಹತ್ವದ ಆದೇಶ

0

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಶಾಲೆಗಳು ಪುನರಾರಂಭವಾಗುವವರೆಗೆ ವಾರ್ಷಿಕ ಮತ್ತು ಅಭಿವೃದ್ಧಿ ಶುಲ್ಕ ವಿಧಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಪೋಷಕರಿಂದ ವಾರ್ಷಿಕ ಮತ್ತು ಅಭಿವೃದ್ಧಿ ಶುಲ್ಕವನ್ನು ತೆಗೆದುಕೊಳ್ಳದಂತೆ ನ್ಯಾಯಾಲಯ ನಿರ್ಬಂಧಿಸಿದೆ. ಈ ಸಂಬಂಧ ಹೈಕೋರ್ಟ್ ದೆಹಲಿ ಸರ್ಕಾರ ಮತ್ತು ಖಾಸಗಿ ಶಾಲೆಗೆ ನೋಟಿಸ್ ಜಾರಿಗೊಳಿಸಿದ್ದು, ಶಾಲಾ ಆಡಳಿತ ಮಂಡಳಿಗಳಿಗೆ ಎಚ್ಚರಿಕೆ ನೀಡಿದೆ.

ಜುಲೈನಿಂದ ಬೋಧನಾ ಶುಲ್ಕದೊಂದಿಗೆ ವಾರ್ಷಿಕ ಮತ್ತು ಅಭಿವೃದ್ಧಿ ಶುಲ್ಕಗಳನ್ನು ಪಡೆಯುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಖಾಸಗಿ ಶಾಲೆಯೊಂದರ ಪೋಷಕರ ಸಂಘ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದೆ.

ನ್ಯಾಯಮೂರ್ತಿ ಜಯಂತ್ ನಾಥ್ ಅವರು “ಪ್ರಸ್ತುತ ಲಾಕ್‌ಡೌನ್‌ನ ಬಾಕಿ ಇರುವ ಸಮಯದಲ್ಲಿ” ವಿದ್ಯಾರ್ಥಿಗಳ ಪೋಷಕರಿಂದ ವಾರ್ಷಿಕ ಮತ್ತು ಅಭಿವೃದ್ಧಿ ಶುಲ್ಕಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ಆದೇಶ ನೀಡಿದ್ದಾರೆ.

Leave A Reply

Your email address will not be published.