ಕೆ-ಸೆಟ್ ಪರೀಕ್ಷೆ ಮತ್ತೆ ಮುಂದೂಡಿಕೆ : ಹೊಸ ವೇಳಾಪಟ್ಟಿ ಪ್ರಕಟ

0

ಬೆಂಗಳೂರು : ಪೊಲೀಸ್ ಪರೀಕ್ಷೆಯ ದಿನವೇ ಕೆ-ಸೆಟ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಆದ್ರೀಗ ಪರೀಕ್ಷಾ ದಿನಾಂಕವನ್ನು ಇದೀಗ ಮುಂದೂಡಿಕೆ ಮಾಡಲಾಗಿದ್ದು. ಕೆ-ಸೆಟ್ ಪರೀಕ್ಷೆಯನ್ನು ಸೆ. 20ರ ಬದಲು ಸೆ. 27 ರಂದು ನಡೆಸಲು ನಿರ್ಧರಿಸಲಾಗಿದೆ.

ಹಲವು ಅಭ್ಯರ್ಥಿಗಳು ಎರಡು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿರುವುದರಿಂದಾಗಿ ಒಂದೇ ದಿನ ಕೆ-ಸೆಟ್ ಹಾಗೂ ಪೊಲೀಸ್ ಪರೀಕ್ಷೆ ನಡೆಸುವುದರಿಂದ ಸಮಸ್ಯೆಯಾಗಲಿದೆ. ಹೀಗಾಗಿ ಕೆ-ಸೆಟ್ ಪರೀಕ್ಷಾ ದಿನಾಂಕವನ್ನು ಸೆಪ್ಟೆಂಬರ್ 20ರ ಬದಲಾಗಿ ಸೆಪ್ಟೆಂಬರ್ 27ರಂದು ನಡೆಸುವುದಾಗಿ ಮೈಸೂರು ವಿವಿ ಮಾಹಿತಿ ನೀಡಿದೆ.

ಹೆಚ್ಚಿನ ಮಾಹಿತಿಗಾಗಿ ಮೈಸೂರು ವಿಶ್ವವಿದ್ಯಾಲಯದ ಅಧಿಕೃತ ವೆಬ್ ಸೈಟ್ https://uni.mysore.ac.in ಗೆ ಭೇಟಿ ನೀಡಬಹುದು

Leave A Reply

Your email address will not be published.