Karnataka-Maharashtra: ಕರ್ನಾಟಕ-ಮಹಾರಾಷ್ಟ್ರದ ಗಡಿಗಳಲ್ಲಿ ಮೊಳಗುತ್ತಿದೆ ಕನ್ನಡದ ಪ್ರೇಮ

ಬೆಂಗಳೂರು: (Karnataka-Maharashtra) ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಗಡಿ ವಿವಾದಗಳು ತಾರಕಕ್ಕೇರಿದೆ. ಮಹಾರಾಷ್ಟ್ರದಲ್ಲಿನ ಕನ್ನಡಿಗರು ತಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಮಹಾರಾಷ್ಟ್ರದ ಗಡಿಭಾಗಗಳಲ್ಲಿ ಕನ್ನಡದ ಪ್ರೇಮ ಮೊಳಗುತ್ತಿದೆ.

ಮಹಾರಾಷ್ಟ್ರ ಮತ್ತು ಕರ್ನಾಟಕ(Karnataka-Maharashtra)ದ ನಡುವೆ ಗಡಿ ವಿವಾದಗಳು ಮತ್ತೆ ಪ್ರಾರಂಭವಾಗಿದ್ದು, ಮಹಾರಾಷ್ಟ್ರದಲ್ಲಿನ ಕನ್ನಡಿಗರು ತಮ್ಮನ್ನು ಕರುನಾಡಿಗೆ ಸೇರಿಸಿ ಎಂದು ಪಟ್ಟು ಹಿಡಿದು ನಿಂತಿದ್ದಾರೆ. ಸಾಂಗ್ಲಿ ಜಿಲ್ಲೆಯ ಜತ್‌ ತಾಲೂಕಿನ ತಿಕ್ಕಂಬಡಿ ಗ್ರಾಮದಲ್ಲಿ ಕನ್ನಡದ ಕಹಳೆ ಮೊಳಗುತ್ತಿದ್ದು, ಸುಮಾರು ನಲವತ್ತು ಹಳ್ಳಿಗಳ ಕನ್ನಡ ಭಾಷೀಕರು ತಮ್ಮನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ.

ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಗಡಿ ಗ್ರಾಮಸ್ಥರು
ಗಡಿ ಭಾಗದ ಜನರು ಮಹಾರಾಷ್ಟ್ರ ಸರ್ಕಾರದ ವಿರುದ್ದ ದೂರುತ್ತಿದ್ದು, ಮಹಾರಾಷ್ಟ್ರ ಸರ್ಕಾರದಿಂದ ಗಡಿಭಾಗದ ಜನರಾದ ನಮಗೆ ಅನ್ಯಾಯವಾಗುತ್ತಿದೆ. ಮಹಾರಾಷ್ಟ್ರ ಸರಕಾರ ಕುಡಿಯೋಕೆ ನೀರು ಕೊಡ್ತಿಲ್ಲ. ಸಿಎಂ ಬೊಮ್ಮಾಯಿ ಸರ್ಕಾರವು ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ. ನಮ್ಮನ್ನು ಕರುನಾಡಿಗೆ ಸೇರ್ಪಡೆ ಮಾಡಿ ಎಂದು ಗಡಿ ಭಾಗದ ಜನರು ಒತ್ತಾಯಿಸಿದ್ದಾರೆ.

ಸಚಿವ ಕೆ. ಸುಧಾಕರ್‌ ಮಹಾರಾಷ್ಟ್ರ ಸರ್ಕಾರದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, “ಗಡಿ ಬದಲಾಯಿಸಲು ಸಾಧ್ಯವಿಲ್ಲ, ಒಂದಿಂಚು ಜಾಗ ನೀಡಲ್ಲ. ಮಹಾರಾಷ್ಟ್ರದ ಸಾಕಷ್ಟು ಪ್ರದೇಶಗಳಲ್ಲಿ ಕನ್ನಡ ಮಾತನಾಡುತ್ತಾರೆ. ಎಲ್ಲಾ ಕನ್ನಡ ಮಾತನಾಡುವ ಪ್ರದೇಶಗಳನ್ನು ಕರ್ನಾಟಕಕ್ಕೆ ವಿಸ್ತರಣೆ ಮಾಡೋಕೆ ಆಗುತ್ತಾ?” ಎಂದಿದ್ದಾರೆ. ಅಲ್ಲದೇ “ವಿಪಕ್ಷಗಳಿಗೆ ರಾಜಕಾರಣ, ಚುನಾವಣೆ ಎರಡೇ ವಿಷಯ ತಿಳಿದಿರುವುದು. ಗಡಿ, ನೆಲ,ಜಲ ವಿಚಾರಕ್ಕೆ ಬಂದಾಗ ಎಲ್ಲರೂ ಒಂದಾಗಬೇಕು. ಅಂತರಾಜ್ಯ ಸಂಬಂಧಗಳು ಚೆನ್ನಾಗಿರಬೇಕು ಎಂದು ಸಚಿವ ಕೆ. ಸುಧಾಕರ್‌ ಡಿಕೆಶಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ : Voter ID scam: ಬಿಬಿಎಂಪಿ ಅಧಿಕಾರಿಗಳು ಲಂಚ ಪಡೆದಿರುವ ಆರೋಪ: ಅಧಿಕಾರಿಗಳ ಅಮಾನತು

ಇದನ್ನೂ ಓದಿ : Karavali Rains: ಕರಾವಳಿಯಲ್ಲಿ ಭಾರೀ ಮಳೆ : ರಾಜ್ಯದಲ್ಲಿ 2ದಿನ ಮಳೆ ಮುಂದುವರಿಕೆ

ಇನ್ನೂ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಹಿನ್ನಲೆಯಲ್ಲಿ ಇಂದು ಸಂಜೆ ಏಳು ಗಂಟೆಗೆ ಸಿಎಂ ನೇತ್ರತ್ವದಲ್ಲಿ ಕೆಲವು ಸುಪ್ರೀಂ ಕೋರ್ಟ್‌ ವಕೀಲರ ಜೊತೆ ಸಭೆ ನಡೆಯಲಿದೆ. ರಾಜ್ಯ ಸರ್ಕಾರವು ಸರ್ವಪಕ್ಷಗಳ ಸಭೆ ಕರೆಯುವ ಬಗ್ಗೆ ಚರ್ಚೆ ನಡೆಸುತ್ತಿದ್ದು, ಸಿಎಂ ರೇಸ್‌ ಕೋರ್ಸ್‌ ನಿವಾಸದಲ್ಲಿ ಈ ಸಭೆ ನಡೆಯಲಿದೆ.

(Karnataka-Maharashtra) Border disputes between Maharashtra and Karnataka have escalated. The Kannadigas in Maharashtra are sitting there demanding their inclusion in Karnataka. The love of Kannada is ringing in the borders of Maharashtra.

Comments are closed.