engineer exam : ಲೋಕೋಪಯೋಗಿ ಇಂಜಿನಿಯರ್​ ಪರೀಕ್ಷೆ ಅಕ್ರಮದ ಆರೋಪಿ ರುದ್ರಗೌಡ 19 ದಿನ ಖಾಕಿ ವಶಕ್ಕೆ

ಬೆಂಗಳೂರು : engineer exam : ಲೋಕೋಪಯೋಗಿ ಇಂಜಿನಿಯರ್​ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿರುವ ಆರೋಪಿ ರುದ್ರಗೌಡ ಡಿ. ಪಾಟೀಲ್​​ನನ್ನು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯವು 10 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.


ಕಳೆದ ವರ್ಷ ನಡೆದಿದ್ದ ಲೋಕೋಪಯೋಗಿ ಇಂಜಿನಿಯರಿಂಗ್​ ಪರೀಕ್ಷೆಯಲ್ಲಿ ಬ್ಲೂಟುತ್​ ಸಾಧನವನ್ನು ಬಳಸಿ ಓರ್ವ ಅಭ್ಯರ್ಥಿ ಪರೀಕ್ಷೆಯನ್ನು ಬರೆದಿದ್ದ. ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಪರೀಕ್ಷಾ ಕೇಂದ್ರ ಇದ್ದಿದ್ದರಿಂದ ಆರೋಪಿಯು ಈತನನ್ನು ಬಂಧಿಸಿದ್ದರು. ಅಭ್ಯರ್ಥಿಯು ವಿಚಾರಣೆ ಸಂದರ್ಭದಲ್ಲಿ ರುದ್ರಗೌಡ ಡಿ. ಪಾಟೀಲ್​ ಹೆಸರನ್ನು ಬಾಯ್ಬಿಟ್ಟಿದ್ದ. ಇದಾದ ಬಳಿಕ ಕಾಲೇಜು ಮುಖ್ಯಸ್ಥ ನಾಗರಾಜ್​ ಕಾಮ್ಲೆ ಸೇರಿ 16 ಮಂದಿಯನ್ನು ಬಂಧಿಸಿದ್ದರು. ಬಾಡಿ ವಾರಂಟ್​ ಜಾರಿ ಮಾಡಿ ರುದ್ರಗೌಡ ಡಿ ಪಾಟೀಲ್​ನನ್ನು ಬಂಧಿಸಲಾಗಿತ್ತು.


ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರಾದ ರುದ್ರಗೌಡ ಡಿ ಪಾಟೀಲ್​​ನನ್ನು ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯಾಲಯವು ಆದೇಶ ಹೊರಡಿಸಿದೆ.

supreme court : ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ : 2 ವಾರಗಳಲ್ಲಿ ನೋಟಿಫಿಕೇಶನ್​​

ಬೆಂಗಳೂರು : ಇಡೀ ದೇಶಾದ್ಯಂತ ಕಾರ್ಪೋರೇಷನ್ ಎಲೆಕ್ಷನ್ ನಡೆಸುವಂತೆ ಸುಪ್ರೀಂಕೋರ್ಟ್ (Supreme Court) ತ್ರಿದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ. ಈ ಸಂಬಂಧ ಎರಡು ವಾರಗಳಲ್ಲಿ ನೋಟಿಫಿಕೇಶನ್​ ಹೊರಡಿಸುವಂತೆ ಸರ್ವೋಚ್ಛ ನ್ಯಾಯಾಲಯ ಹೇಳಿದ್ದು ಈ ಮೂಲಕ ಬಿಬಿಎಂಪಿ ಚುನಾವಣೆಗೆ ಗ್ರೀನ್​ ಸಿಗ್ನಲ್​ ಸಿಕ್ಕಂತಾಗಿದೆ.

ಸುರೇಶ್​ ಮೋಹನ್​ ಹಾಗೂ ಮಧ್ಯ ಪ್ರದೇಶಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್​ ಎಸ್ಸಿ, ಎಸ್ಟಿ ಮೀಸಲಾತಿ ಹೊರತುಪಡಿಸಿ ಉಳಿದವುಗಳನ್ನು ಜನರಲ್​ ಎಂದು ಪರಿಗಣಿಸಿ ಚುನಾವಣೆ ನಡೆಸಿ , ಹಳೆ ವಾರ್ಡ್​ ಸಂಖ್ಯೆಗೆ ಚುನಾವಣೆ ಮಾಡಿ ಎಂದು ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ . 243 ವಾರ್ಡ್​ಗಳ ಬದಲಾಗಿ 198 ವಾರ್ಡ್​ಗಳಿಗೆ ಬಿಬಿಎಂಪಿ ಚುನಾವಣೆಗೆ ನಡೆಯಲಿದೆ.

2020ರ ಸೆಪ್ಟೆಂಬರ್​ 23ರಂದು ಹೊರಡಿಸಿರುವ ಅಧಿಸೂಚನೆಯಂತೆ ಕರ್ನಾಟಕ ನಗರ ಪಾಲಿಕೆಯ ಮೂರನೇ ತಿದ್ದುಪಡಿಸಿ ಕಾಯ್ದೆಯ ಪ್ರಕಾರ 243 ಬಿಬಿಎಂಪಿ ವಾರ್ಡ್​ಗಳಿಗೆ ಬದಲಾಗಿ 198 ವಾರ್ಡ್​ಗಳಿಗೆ ಆರು ವಾರಗಳ ಒಳಗಾಗಿ ಚುನಾವಣೆ ನಡೆಸಿ ಎಂದು ರಾಜ್ಯ ಹೈಕೋರ್ಟ್​ 2020ರ ಡಿಸೆಂಬರ್​ ನಾಲ್ಕರಂದು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಆದರೆ ರಾಜ್ಯ ಹೈಕೋರ್ಟ್​ ಆದೇಶವನ್ನು ರದ್ದುಪಡಿಸಿದ್ದ ರಾಜ್ಯ ವಿಧಾನಸಭೆಯು 243 ವಾರ್ಡ್​ಗಳಿಗೆ ಚುನಾವಣೆ ನಡೆಯಲಿ ಎಂದು ಹೇಳಿತ್ತು.

ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ ಕುರಿತಂತೆ ಮಧ್ಯಪ್ರದೇಶದಿಂದ ಸಲ್ಲಿಕೆಯಾದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್​ 2ವಾರಗಳ ಒಳಗಾಗಿ ಸ್ಥಳೀಯ ಚುನಾವಣೆಗಳಿಗೆ ನೋಟಿಫಿಕೇಶನ್​ ಹೊರಡಿಸುವಂತೆ ಹೇಳಿದೆ.

ಇನ್ನು ಈ ವಿಚಾರವಾಗಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್​.ಅಶೋಕ್​, ಸುಪ್ರೀಂ ಕೋರ್ಟ್​ ಬಿಬಿಎಂಪಿ ಚುನಾವಣೆಯನ್ನು ನಡೆಸುವಂತೆ ಹಸಿರು ನಿಶಾನೆಯನ್ನು ನೀಡಿದೆ. ನಾವು ಬೂತ್​ ಮಟ್ಟದಲ್ಲಿ ಕೆಲಸ ಮಾಡಿದ್ದು ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ. ಯಾವುದೇ ಕಾರಣಕ್ಕೂ ನಾವು ಚುನಾವಣೆಗೆ ಹೆದರಿಕೊಳ್ಳುವುದಿಲ್ಲ ಎಂದು ಹೇಳಿದರು.

ಇದನ್ನು ಓದಿ : CSK vs DC Prithvi Shaw : ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಪೃಥ್ವಿ ಶಾ ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : Chris Gayle : IPL 2022ನಲ್ಲಿ ಕ್ರಿಸ್‌ಗೇಲ್‌ ಹೊರಗುಳಿದಿದ್ಯಾಕೆ ? ಕೊನೆಗೂ ಬಯಲಾಯ್ತು ನಿಜವಾದ ಕಾರಣ

engineer exam illegal court sent accused to 10 days police custody

Comments are closed.