Ex-Navy Officer Murder Case : ನೌಕಾಪಡೆ ಮಾಜಿ ಅಧಿಕಾರಿ ಪುತ್ರನಿಂದಲೇ ಹತ್ಯೆ : ಕೊಳದಲ್ಲಿ ಪತ್ತೆಯಾಯ್ತು ದೇಹದ ಭಾಗಗಳು

ಕೊಲ್ಕತ್ತಾ : ನೌಕಾಪಡೆಯ ಮಾಜಿ ಅಧಿಕಾರಿ ತನ್ನ ಪುತ್ರನಿಂದಲೇ ಹತ್ಯೆಯಾದ (Ex-Navy Officer Murder Case) ಘಟನೆ ಕೋಲ್ಕತ್ತಾದಲ್ಲಿ ಸಂಭವಿಸಿದೆ. ಕೋಲ್ಕತ್ತಾ ಬಳಿಯ ದಕ್ಷಿಣ 24 ಪರಗಣಗಳ ಬರುಯಿಪುರ್ ಪ್ರದೇಶದ ಕೊಳದಲ್ಲಿ ನೌಕಾಪಡೆಯ ಮಾಜಿ ಅಧಿಕಾರಿಯೊಬ್ಬರ ಛಿದ್ರಗೊಂಡ ದೇಹವನ್ನು ಪೊಲೀಸರು ವಶಪಡಿಸಿಕೊಂಡು, ಘಟನೆಗೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸಿದ್ದಾರೆ.

ನೌಕಾಪಡೆ ಮಾಜಿ ಅಧಿಕಾರಿ ಬಲಿಪಶು ಉಜ್ವಲ್ ಚಕ್ರವರ್ತಿ 55ವರ್ಷ ಎಂದು ಗುರುತಿಸಲಾಗಿದೆ. ಉಜ್ವಲ್‌ ಚಕ್ರವರ್ತಿ 2000 ರಲ್ಲಿ ನಿವೃತ್ತರಾದ ಭಾರತೀಯ ನೌಕಾಪಡೆಯ ಮಾಜಿ ನಾನ್ ಕಮಿಷನ್ಡ್ ಅಧಿಕಾರಿ ಎಂದು ಪೊಲೀಸರು ತಿಳಿಸಿದ್ದಾರೆ. “ಬರುಯಿಪುರದ ಕೊಳದಲ್ಲಿ ಪ್ಲಾಸ್ಟಿಕ್‌ನಲ್ಲಿ ಸುತ್ತಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ದೇಹವು ಪತ್ತೆಯಾಗಿದ್ದು, ಮೃತ ಅಧಿಕಾರಿಯ ಕುಟುಂಬ ಸದಸ್ಯರು ನವೆಂಬರ್ 15 ರಂದು ಕಾಣೆಯಾಗಿದ್ದಾರೆ ಎಂದು ದೂರನ್ನು ದಾಖಲಿಸಿದ್ದಾರೆ” ಎಂದು ಬರುಯಿಪುರದ ಪೊಲೀಸ್ ವರಿಷ್ಠಾಧಿಕಾರಿ ಪುಷ್ಪಾ ಹೇಳಿದರು.

Ex-Navy Officer Murder Case : ನೌಕಾಪಡೆ ಮಾಜಿ ಅಧಿಕಾರಿ ಹತ್ಯೆ ವಿವರ :

“ಮೃತ ಅಧಿಕಾರಿ ಮದ್ಯವ್ಯಸನಿಯಾಗಿದ್ದು, ಮಗನ ಮೇಲೆ ಹಲ್ಲೆ ನಡೆಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ನವೆಂಬರ್ 14 ರಂದು ಅವನು ತನ್ನ ಕುಟುಂಬದೊಂದಿಗೆ ಜಗಳವಾಡಿದ್ದು, ಕೋಪಗೊಂಡ ಮೃತ ಅಧಿಕಾರಿಯ ಮಗ ಅವನ ಮೇಲೆ ದಾಳಿ ನಡೆಸಿದ್ದಾನೆ. ಅಂತಿಮವಾಗಿ ಉಜ್ವಲ್‌ ಚಕ್ರವರ್ತಿ ಸಾವನ್ನಪ್ಪಿದರು.

ಇದನ್ನೂ ಓದಿ : ಆಟೋ ನಿಗೂಢ ಸ್ಪೋಟ ಪ್ರಕರಣ : ಮಂಗಳೂರಿಗೆ NIA ತಂಡ, ಸ್ಪೋಟಕ್ಕಿದ್ಯಾ ಉಗ್ರರ ನಂಟು

ಇದನ್ನೂ ಓದಿ : Hotel Owner Committed Suicide : ರಾಡಿಸನ್‌ ಬ್ಲೂ ಹೋಟೆಲ್‌ ಮಾಲೀಕ ಆತ್ಮಹತ್ಯೆ

ಇದನ್ನೂ ಓದಿ : Mangaluru Auto Blast: ಚಲಿಸುತ್ತಿದ್ದ ಆಟೋ ಸ್ಫೋಟ ಅನಿರೀಕ್ಷಿತವಲ್ಲ,ಇದೋಂದು ಭಯೋತ್ಪಾದಕ ಕೃತ್ಯ: ಡಿಜಿಪಿ ಪ್ರವೀಣ್‌ ಸೂದ್‌

ಕೊಲೆಯ ನಂತರ ಮಗ ದೇಹದ ಭಾಗಗಳನ್ನು ವಿಲೇವಾರಿ ಮಾಡಿದ್ದು, ಮೃತ ಅಧಿಕಾರಿಯ ಪತ್ನಿ ಕೂಡ ಮಗನಿಗೆ ಸಹಾಯ ಮಾಡಿದರು. ದೇಹದ ಇತರ ಭಾಗಗಳು ಅವನ ಮನೆಯ ಬಳಿ ಕಂಡುಬಂದಿವೆ” ಎಂದು ತನಿಖೆಯ ಮೂಲಕ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Ex-Navy Officer Murder Case : Ex-Navy officer’s son killed: Body parts found in pond

Comments are closed.