Mohammedraje Chiyaneh Shadlu : ಒಂದೇ ಪಂದ್ಯದಲ್ಲಿ 16 ಟ್ಯಾಕಲ್ ಪಾಯಿಂಟ್ಸ್, ಅಮೋಘ ದಾಖಲೆ ಬರೆದ ಇರಾನ್’ನ ಶಾದ್ಲೂ

ಹೈದರಾಬಾದ್ : ಇರಾನ್’ನ ಯುವ ಲೆಫ್ಟ್ ಕಾರ್ನರ್ ಡಿಫೆಂಡರ್ ಮೊಹಮದ್ರೇಜಾ ಚಿಯಾನೆ (Mohammedraje Chiyaneh Shadlu ) ಶಾದ್ಲೂ ಪ್ರೊ ಕಬಡ್ಡಿ ಲೀಗ್ (Pro Kabaddi) ಇತಿಹಾಸದಲ್ಲಿ ಸಾರ್ವಕಾಲಿಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ದಬಾಂಗ್ ಡೆಲ್ಲಿ ವಿರುದ್ಧ ಹೈದರಾಬಾದ್’ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಪರ ಮೊಹಮ್ಮದ್ರೇಜಾ ಶಾದ್ಲೂ 16 ಟ್ಯಾಕಲ್ ಪಾಯಿಂಟ್’ಗಳನ್ನು ಕಲೆ ಹಾಕಿದರು. ಈ 16 ಟ್ಯಾಕಲ್ ಪಾಯಿಂಟ್’ಗಳು 8 ಸೂಪರ್ ಟ್ಯಾಕಲ್’ಗಳ ಮೂಲಕವೇ ಬಂದದ್ದು ವಿಶೇಷ. ಇದು ಪೊರ್ ಕಬಡ್ಡಿ ಲೀಗ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಡಿಫೆಂಡರ್ ಒಬ್ಬ ಗಳಿಸಿದ ಅತೀ ಹೆಚ್ಚು ಟ್ಯಾಕಲ್ ಪಾಯಿಂಟ್ಸ್.

ಆದರೆ ಮೊಹಮ್ಮದ್ರೇಜಾ ಚಿಯಾನೆ ಶಾದ್ಲೂ ಅವರ ದಾಖಲೆಯ ಆಟ ಪಾಟ್ನಾ ಪೈರೇಟ್ಸ್ ಸೋಲಿನೊಂದಿಗೆ ವ್ಯರ್ಥಗೊಂಡಿತು. ಜಿದ್ದಾಜಿದ್ದಿನ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡವನ್ನು 30-27ರ ಅಂತರದಲ್ಲಿ ರೋಚಕವಾಗಿ ಮಣಿಸಿದ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಕೆ.ಸಿ ಮತ್ತೆ ಗೆಲುವಿನ ಲಯಕ್ಕೆ ಮರಳಿತು. ದಿನದ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಆತಿಥೇಯ ತೆಲುಗು ಟೈಟನ್ಸ್ 32-26 ಅಂಕಗಳಿಂದ ಗೆದ್ದು, ಸತತ 12 ಸೋಲುಗಳ ಸರಪಣಿಯನ್ನು ಕಡಿದುಕೊಂಡಿತು.

ಶನಿವಾರ ನಡೆದ 3ನೇ ಪಂದ್ಯದಲ್ಲಿ ಯು.ಪಿ ಯೋಧಾ ಪಡೆಯನ್ನು 42-29ರ ಅಂತರದಲ್ಲಿ ಮಟ್ಟ ಹಾಕಿದ ಜೈಪುರ ಪಿಂಕ್ ಪ್ಯಾಂಥರ್ಸ್ ಪಡೆ ಲೀಗ್’ನಲ್ಲಿ 10ನೇ ಗೆಲುವಿನೊಂದಿಗೆ 53 ಅಂಕ ಕಲೆ ಹಾಕಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲೇ ಮುಂದುವರಿಯತು. ಭಾನುವಾರ ನಡೆಯುವ ಪಂದ್ಯದಲ್ಲಿ ಟೇಬಲ್ ಟಾಪರ್ ಬೆಂಗಳೂರು ಬುಲ್ಸ್ ಬಳಗ, ಅಂಕಪಟ್ಟಿಯ 2ನೇ ಸ್ಥಾನಿ ಪುಣೇರಿ ಪಲ್ಟನ್ ತಂಡವನ್ನು ಎದುರಿಸುತ್ತದೆ. ಮತ್ತೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಮತ್ತು ಹರ್ಯಾಣ ಸ್ಟೀಲರ್ಸ್ ಮುಖಾಮುಖಿಯಾಗಲಿವೆ.

Mohammedraje Chiyaneh Shadlu : ಪ್ರೊ ಕಬಡ್ಡಿ ಲೀಗ್-9: ಭಾನುವಾರದ ಪಂದ್ಯಗಳು

  1. ಬೆಂಗಳೂರು ಬುಲ್ಸ್ Vs ಪುಣೇರಿ ಪಲ್ಟನ್
  2. ದಬಾಂಗ್ ಡೆಲ್ಲಿ ಕೆ.ಸಿ Vs ಹರ್ಯಾಣ ಸ್ಟೀಲರ್ಸ್

ಇದನ್ನೂ ಓದಿ : Pro Kabaddi League: ದಕ್ಷಿಣ ಭಾರತ ಡರ್ಬಿಯಲ್ಲಿ ತಲೈವಾಸ್ ವಿರುದ್ಧ ಗೆದ್ದರೆ ಬೆಂಗಳೂರು ಬುಲ್ಸ್ ಟೇಬಲ್ ಟಾಪರ್

ಇದನ್ನೂ ಓದಿ : Bulls completes 10th win : ಪ್ರೊ ಕಬಡ್ಡಿ ಲೀಗ್’ನಲ್ಲಿ ಕೆಂಪುಗೂಳಿಗಳ ದಶಾಶ್ವಮೇಧ ಕಂಪ್ಲೀಟ್

ಇದನ್ನೂ ಓದಿ : Pro Kabaddi League : ಬುಲ್ಸ್‌ಗೆ ಸ್ಟೀಲರ್ಸ್ ಸವಾಲ್, ಅಗ್ರಸ್ಥಾನದ ಮೇಲೆ ಕೆಂಪುಗೂಳಿಗಳ ಕಣ್ಣು

ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Mohammedraje Chiyaneh Shadlu : 16 tackle points in a single match, Shadlu of Iran wrote an amazing record.

Comments are closed.