ಮಂಗಳವಾರ, ಏಪ್ರಿಲ್ 29, 2025
HomeCrimeಫಾರ್ಮಾ ಲ್ಯಾಬ್‌ ಕಂಪನಿಯಲ್ಲಿ ಬೆಂಕಿ ಅವಘಡ: ನಾಲ್ವರು ಸಾವು

ಫಾರ್ಮಾ ಲ್ಯಾಬ್‌ ಕಂಪನಿಯಲ್ಲಿ ಬೆಂಕಿ ಅವಘಡ: ನಾಲ್ವರು ಸಾವು

- Advertisement -

ಆಂದ್ರಪ್ರದೇಶ: (Fire accident in lab) ಆಂಧ್ರಪ್ರದೇಶದ ಪರವಾಡ ಲಾರಸ್‌ ಫಾರ್ಮಾ ಲ್ಯಾಬ್‌ ಲಿಮಿಟೆಡ್‌ ಕಂಪನಿಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, ಓರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ನಿರ್ವಹಣಾ ಕಾಮಗಾರಿ ವೇಳೆ ಈ ಘಟನೆ (Fire accident in lab) ನಡೆದಿದ್ದು, ಗಾಯಗೊಂಡಿರುವ ಕಾರ್ಮಿಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಕಾರ್ಮಿಕರ ಕುಟುಂಬಕ್ಕೆ ಇಪ್ಪತ್ತೈದು ಲಕ್ಷ ರೂ ಪರಿಹಾರ ನೀಡುವುದಾಗಿ ಆಂಧ್ರದ ಮುಖ್ಯಮಂತ್ರಿ ಘೋಷಿಸಿರುವುದಾಗಿ ತಿಳಿದುಬಂದಿದೆ.

ಅಪಘಾತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನೆಯ ಕುರಿತು ಅನಕಾಪಲ್ಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಕಾರಣವನ್ನು ತಿಳಿಯಲು ತನಿಖೆ ನಡೆಯುತ್ತಿದೆ.

ನೇಣು ಬಿಗಿದುಕೊಂಡು ಅಪರಿಚಿತ ವೃದ್ದ ಸಾವು

ರಾಮನಗರ: ಅಪರಿಚಿತ ವೃದ್ದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದ ಹಳೇ ಬಸ್‌ ನಿಲ್ದಾಣದ ಬಳಿ ನಡೆದಿದೆ. ರಾಮನಗರ ಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಳೇ ಬಸ್‌ ನಿಲ್ದಾಣದ ಬಳಿಯಲ್ಲಿ ಅಪರಿಚಿತ ವೃದ್ದನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ರಾಮನಗರದ ನಗರಸಭೆ ವಾಣಿಜ್ಯ ಸಂಕೀರ್ಣದ ಬಳಿಯಲ್ಲಿ ವೃದ್ದ ನೇಣಿಗೆ ಶರಣಾಗಿದ್ದು, ಸ್ಥಳಕ್ಕೆ ರಾಮನಗರ ಪುರ ಠಾಣೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : Sushant Singh death case: ಸುಶಾಂತ್ ಸಿಂಗ್ ರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದ ಆಸ್ಪತ್ರೆ ಸಿಬ್ಬಂದಿ; ಅಂದು ಅಲ್ಲಿ ನಡೆದಿದ್ದೇ ಬೇರೆ ಹೊರಬಿದ್ದ ಸುದ್ದಿಯೇ ಬೇರೆ ಅಂತೆ..!

ಇದನ್ನೂ ಓದಿ : Dehli Fire incident: ಬಹುಮಹಡಿ ಪಾರ್ಕಿಂಗ್ ನಲ್ಲಿ ಅಗ್ನಿ ಅವಘಡ: 21 ಕಾರುಗಳು ಬೆಂಕಿಗೆ ಆಹುತಿ

ನೇಣಿಗೆ ಶರಣಾದ ವೃದ್ದ ಯಾರೆಂಬುದು ತಿಳಿದಿಲ್ಲ. ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೂ ಕೂಡ ಕಾರಣಗಳು ತಿಳಿದುಬಂದಿಲ್ಲ. ಇದೀಗ ಘಟನೆ ಕುರಿತು ರಾಮನಗರಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Tunisha suicide case: ತುನಿಶಾ ಶರ್ಮಾರನ್ನು ಅತಿಯಾಗಿ ಕಾಡುತ್ತಿತ್ತು ‘ಆ’ ಒಂದು ನೋವು; ಆತ್ಮಹತ್ಯೆಗೆ ಅದೇ ಕಾರಣ ಎಂದ ಪೊಲೀಸರು..!

In Andhra Pradesh’s Parvada Laurus Pharma Lab Limited, a fire accident occurred, four workers died and one worker was seriously injured.

RELATED ARTICLES

Most Popular