Avinash Singh: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಶ್ಮೀರದ ಆಟೋ ಚಾಲಕನ ಮಗ

ಬೆಂಗಳೂರು: ತಂದೆ ಆಟೋ ಚಾಲಕ. ಮಗ ಲೆದರ್ ಬಾಲ್ ಕ್ರಿಕೆಟ್ ಆಡಲು ಶುರು ಮಾಡಿದ್ದು ಕೇವಲ 10 ತಿಂಗಳ ಹಿಂದೆ. ಅದಕ್ಕೂ ಮುಂಚೆ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಯುವಕನೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ್ದಾನೆ. ಇದು ಜಮ್ಮು ಮತ್ತು ಕಾಶ್ಮೀರದ ಎಕ್ಸ್’ಪ್ರೆಸ್ ವೇಗಿ ಅವಿನಾಶ್ ಸಿಂಗ್ (Avinash Singh) ಎಂಬ ಯುವಕನ ಯಶೋಗಾಥೆ.

ಮೊನ್ನೆ ಮೊನ್ನೆ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore – RCB) ತಂಡ ಜಮ್ಮು-ಕಾಶ್ಮೀರದ ವೇಗದ ಬೌಲರ್ ಅವಿನಾಶ್ ಸಿಂಗ್ ಅವರನ್ನು 60 ಲಕ್ಷ ರೂಪಾಯಿಗೆ ಖರೀದಿಸಿತ್ತು.

ಇನ್ನೂ ಪ್ರಥಮದರ್ಜೆ, ಲಿಸ್ಟ್ ಎ ಕ್ರಿಕೆಟ್ ಆಡದ ಕಾಶ್ಮೀರ ವೇಗಿಯನ್ನು RCB ಫ್ರಾಂಚೈಸಿ ಖರೀದಿಸಲು ಕಾರಣ ಆತನ ಶರವೇಗದ ಬೌಲಿಂಗ್. ಅವಿನಾಶ್ ಸಿಂಗ್ ಈಗಾಗಲೇ ಗಂಟೆಗೆ 150 ಕಿ.ಮೀ.ಗೂ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

24 ವರ್ಷದ ಅವಿನಾಶ್‌ ಸಿಂಗ್ ಅವರ ತಂದೆ ವೃತ್ತಿಯಲ್ಲಿ ಆಟೋ ಚಾಲಕ. ಮನೆಯಲ್ಲಿ ದುಡಿಯುತ್ತಿರುವ ಏಕೈಕ ವ್ಯಕ್ತಿ ತಂದೆ ಮಾತ್ರ. ಅವಿನಾಶ್ ಸಿಂಗ್ ಅವರ ತಮ್ಮ ಇಬ್ಬರು ಸಹೋದರರು ಇನ್ನೂ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಹೀಗಾಗಿ ಅವಿನಾಂಶ್ ಸಿಂಗ್ ಉದ್ಯೋಗ ಅರಸಿ ಅರಸಿ ಕೆನಡಾಗೆ ಹೊರಟು ನಿಂತಿದ್ದರು. ಆಗ ಅವಿನಾಶ್ ಅವರನ್ನು ತಡೆದದ್ದು ಕ್ರಿಕೆಟ್ ಕೋಚ್ ಮಯಾಂಕ್ ಗೋಸ್ವಾಮಿ. ಅವಿನಾಶ್ ಟೆನಿಸ್ ಬಾಲ್’ನಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡುತ್ತಿದ್ದುದನ್ನು ಗಮನಿಸಿದ್ದ ಕೋಚ್ ಗೋಸ್ವಾಮಿ, ತಂದೆಯ ಮನವೊಲಿಸಿ ಅವಿನಾಶ್’ರನ್ನು ಪುಣೆಗೆ ಕರೆದೊಯ್ದರು. ಅಲ್ಲಿ ಖ್ಯಾತ ಕ್ರಿಕೆಟ್ ಕೋಚ್ ಅಶೋಕ್ ಗಾಯಕ್ವಾಡ್ ಗರಡಿಯಲ್ಲಿ ತರಬೇತಿ ಆರಂಭವಾಯಿತು.

ವೇಗದ ಬೌಲರ್’ಗಳಿಗೆ ಸ್ಪೈಕ್ ಶೂ ಬೇಕೇಬೇಕು. ಆದರೆ ಅವಿನಾಶ್‌ ಬಳಿ ಸ್ಪೈಕ್‌ ಶೂ, ಕ್ರಿಕೆಟ್‌ ಕಿಟ್‌ ಖರೀದಿಸಲು ದುಡ್ಡಿರಲಿಲ್ಲ. ಕೋಚ್ ಗೋಸ್ವಾಮಿ ಮತ್ತು ಸ್ನೇಹಿತರ ಸಹಾಯದಿಂದ ಕ್ರಿಕೆಟ್ ಕ್ರಿಕೆಟ್ ಖರೀದಿಸಿದ ಅವಿನಾಶ್,ಜಮ್ಮುವಿನಲ್ಲಿ ನಡೆದ RCB ತಂಡದ ಆಯ್ಕೆ ಟ್ರಯಲ್ಸ್‌’ನಲ್ಲಿ ಭಾಗವಹಿಸಿದ್ಕರು. ಗಂಟೆಗೆ 150 ಕಿ.ಮೀ.ಗೂ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಆರ್‌ಸಿಬಿ ಟೀಮ್ ಮ್ಯಾನೇಜ್ಮೆಂಟ್’ನ ಗಮನ ಸೆಳೆದಿದ್ದರು.

ಇದನ್ನೂ ಓದಿ : Ranji Trophy: ನಾಳೆ ಕರ್ನಾಟಕಕ್ಕೆ ಗೋವಾ ಎದುರಾಳಿ, ಸಚಿನ್ ಪುತ್ರ ಅರ್ಜುನ್ ಮೇಲೆ ಎಲ್ಲರ ಕಣ್ಣು

ಇದನ್ನೂ ಓದಿ : David Warner : ಏಕದಿನ, ಟೆಸ್ಟ್ 100ರಲ್ಲಿ 100 : ಅಪರೂಪದ ದಾಖಲೆ ಬರೆದ ಆಸೀಸ್ ಓಪನರ್ ವಾರ್ನರ್

ಇದನ್ನೂ ಓದಿ : Rohit Sharma : ಗಾಯದಿಂದ ಚೇತರಿಸಿಕೊಂಡ ಹಿಟ್ ಮ್ಯಾನ್, ಬಿಕೆಸಿಯಲ್ಲಿ ರೋಹಿತ್ ಬ್ಯಾಟಿಂಗ್ ಅಭ್ಯಾಸ

ನಂತರದ ದಿನಗಳಲ್ಲಿ ಅವಿನಾಶ್‌ ಕೆಕೆಆರ್‌, ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಆಯ್ಕೆ ಟ್ರಯಲ್ಸ್‌’ನಲ್ಲಿ ಭಾಗವಹಿಸಿದ್ದರು. ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರುವ ಮೂಲಕ ತನ್ನ ಕ್ರಿಕೆಟ್ ಕನಸನ್ನು ನನಸಾಗಿಸಿಕೊಳ್ಳಲು ಹೊರಟಿದ್ದಾನೆ ಅವಿನಾಶ್ ಸಿಂಗ್. ಟೆನಿಸ್ ಬಾಲ್ ಕ್ರಿಕೆಟ್ ಮೂಲಕವೇ ಬೆಳಕಿಗೆ ಬಂದಿದ್ದ ಜಮ್ಮು-ಕಾಶ್ಮೀರದ ಮತ್ತೊಬ್ಬ ಎಕ್ಸ್’ಪ್ರೆಸ್ ವೇಗಿ ಉಮ್ರಾನ್ ಮಲಿಕ್ ಈಗಾಗ್ಲೇ ಐಪಿಎಲ್’ನಲ್ಲಿ ಗಮನ ಸೆಳೆದು ಭಾರತ ಪರ ಆಡಿದ್ದಾರೆ. ಅವರದ್ದೇ ಹಾದಿಯಲ್ಲಿ ಸಾಗುತ್ತಿರುವ ಅವಿನಾಶ್ ಸಿಂಗ್ ಐಪಿಎಲ್’ನಲ್ಲಿ RCB ಪರ ಮಿಂಚಿ ದೇಶದ ಪರ ಆಡುವ ಗುರಿ ಹೊಂದಿದ್ದಾರೆ.

Avinash Singh: Son of an auto driver from Kashmir in the Royal Challengers Bangalore team

Comments are closed.