Rajiv Gandhi Hospital : ಚೆನ್ನೈನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ

ಚೆನ್ನೈ : ಚೆನ್ನೈ ಸೆಂಟ್ರಲ್‌ನಲ್ಲಿ ಇರುವ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ (Rajiv Gandhi Hospital) ಅಗ್ನಿ ಅವಘಡ ಸಂಭವಿಸಿದೆ. ಆಸ್ಪತ್ರೆಯ ಲಿವರ್‌ ಘಟಕದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ನಡೆಸುತ್ತಿದೆ.

ಅನಾರೋಗ್ಯ ಮತ್ತು ಅಪಘಾತದ ಚಿಕಿತ್ಸೆಗಾಗಿ ನೂರಾರು ರೋಗಿಗಳು ಚೆನ್ನೈ ಸೆಂಟ್ರಲ್‌ನಲ್ಲಿ ಇರುವ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ನಿತ್ಯವೂ ಆಗಮಿಸುತ್ತಿದ್ದಾರೆ. ಇಂದು ಆಕಸ್ಮಿಕವಾಗಿ ರಾಜೀವ್ ಗಾಂಧಿ ಆಸ್ಪತ್ರೆಯ ಲಿವರ್ ಚಿಕಿತ್ಸಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಲಿವರ್‌ ಚಿಕಿತ್ಸಾ ಘಟಕದಲ್ಲಿದ್ದ ಹಲವು ರೋಗಿಗಳು ಬೆಂಕಿ ಅವಘಡದಲ್ಲಿ ಸಿಲುಕಿದ್ದಾರೆ.

ಬೆಂಕಿ ವೇಗವಾಗಿ ಹರಡುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಏತನ್ಮಧ್ಯೆ, ಬೆಂಕಿಯಿಂದಾಗಿ ಯಕೃತ್ತಿನ ಚಿಕಿತ್ಸಾ ಘಟಕದಲ್ಲಿ ಸಿಲುಕಿದ್ದ ಎಲ್ಲ ರೋಗಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಅಲ್ಲದೆ, ಬೆಂಕಿ ಕಾಣಿಸಿಕೊಂಡ ಆವರಣದಿಂದ ಎಲ್ಲರನ್ನೂ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

ವಿದ್ಯುತ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಬೆಂಕಿಯ ರಭಸಕ್ಕೆ ಅಲ್ಲಿ ಇರಿಸಲಾಗಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಇದರಿಂದ ರಾಜೀವ್ ಗಾಂಧಿ ಆಸ್ಪತ್ರೆ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಆಸ್ಪತ್ರೆಯಲ್ಲಿ ಬೆಂಕಿ ಹತೋಟಿಗೆ ಬಂದಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ತೇರು ಎಳೆಯುವ ವೇಳೆಯಲ್ಲಿ ವಿದ್ಯುತ್‌ ಅವಘಡ : 11 ಮಂದಿ ದುರ್ಮರಣ

ಇದನ್ನೂ ಓದಿ : ತಣ್ಣೀರುಬಾವಿ ಬೀಚ್‌ನಲ್ಲಿ ಅಪಾಯಕ್ಕೆ ಸಿಲುಕಿದ್ದ ಐವರು ವಿದ್ಯಾರ್ಥಿಗಳ ರಕ್ಷಣೆ

Fire Accident Occurred in Chennai Rajiv Gandhi Hospital

Comments are closed.