ಮಾರ್ಕೆಟ್ ಕಾಂಪ್ಲೆಕ್ಸ್‌ನಲ್ಲಿ ಭಾರೀ ಬೆಂಕಿ ಅವಘಡ; 3 ಮಂದಿಗೆ ಗಾಯ

ಪುರಿ: (Fire incident in market complex) ಒಡಿಶಾದ ಪುರಿಯಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ತಡರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಪರಿಣಾಮ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. 140 ಪ್ರವಾಸಿಗರನ್ನು ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಪೊಲೀಸರ ಪ್ರಕಾರ, ಬೆಂಕಿ ಹೊತ್ತಿಕೊಂಡಾಗ ಹೋಟೆಲ್ ಕಟ್ಟಡದಲ್ಲಿ ಸುಮಾರು 140 ಪ್ರವಾಸಿಗರು ಇದ್ದರು. ಆ 140 ಪ್ರವಾಸಿಗರಲ್ಲಿ 30 ಮಂದಿ ನಾಸಿಕ್ ಮತ್ತು ಇಂದೋರ್‌ನಿಂದ ಬಂದವರು. ಸುಮಾರು 110 ಮಂದಿ ಒಡಿಶಾ ಮತ್ತು ಜೈಪುರದವರು ಎಂದು ತಿಳದುಬಂದಿದೆ. ಅವರೆಲ್ಲರನ್ನೂ ಒಡಿಶಾ ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ ಎಂದು ಒಡಿಶಾದ ಮುಖ್ಯ ಅಗ್ನಿಶಾಮಕ ಅಧಿಕಾರಿ ರಮೇಶ್ ಮಾಝಿ ತಿಳಿಸಿದ್ದಾರೆ.

ಮಾಹಿತಿ ಪ್ರಕಾರ ತಡರಾತ್ರಿ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ನಂದಿಸುವ ಪ್ರಯತ್ನ ಮುಂದುವರಿದಿದೆ. ಸ್ಥಳದಲ್ಲಿ 12 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದ್ದು, ಸುಮಾರು 160 ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. “ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬೆಂಕಿ ಅನಾಹುತಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಅಗ್ನಿಶಾಮಕ ಟೆಂಡರ್‌ಗಳು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದು, ಶೀಘ್ರದಲ್ಲೇ ಬೆಂಕಿಯನ್ನು ನಂದಿಸಲಾಗುವುದು” ಎಂದು ಅಗ್ನಿಶಾಮಕ ಅಧಿಕಾರಿ ಮಾಝಿ ತಿಳಿಸಿದ್ದಾರೆ.

“ಬುಧವಾರ ತಡರಾತ್ರಿ ಸಂಭವಿಸಿದ ಬೆಂಕಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಾಹಿತಿ ಮೇರೆಗೆ 100ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಸಂಚಾರ ದಟ್ಟಣೆಯನ್ನು ತಪ್ಪಿಸಲು ಸಂಚಾರವನ್ನು ಪರ್ಯಾಯ ಮಾರ್ಗಗಳಲ್ಲಿ ತಿರುಗಿಸಲಾಗಿದೆ” ಎಂದು ಎಸ್ಪಿ ಸಿಂಗ್ ಹೇಳಿದರು.

ಇದನ್ನೂ ಓದಿ : Unnavo crime : ಅಕ್ರಮ ಸಂಬಂಧಕ್ಕೆ ವಿರೋಧಿಸಿದ ತಾಯಿಯನ್ನೇ ಹತ್ಯೆಗೈದು ಪರಾರಿಯಾದ ಮಕ್ಕಳು

ಇದನ್ನೂ ಓದಿ : Mumbai Cyber Crime: ಬ್ಯಾಂಕ್ KYC ಅಪ್‌ಡೇಟ್ ಹೆಸರಲ್ಲಿ ನಿವೃತ್ತ ರೈಲ್ವೆ ಉದ್ಯೋಗಿಗೆ ವಂಚನೆ

ಇದನ್ನೂ ಓದಿ : Two Car accident: ಕಾರು ಅಪಘಾತ: 3 ಮಕ್ಕಳು ಸೇರಿ 4 ಮಂದಿ ಸಾವು

Fire incident in market complex: Heavy fire incident in market complex; 3 injured

Comments are closed.