Singapore tour plan: ಪೌರಕಾರ್ಮಿಕರಿಗೆ ಸಿಹಿ ಸುದ್ದಿ! 300 ಪೌರಕಾರ್ಮಿಕರಿಗೆ “ಸಿಂಗಾಪುರ ಪ್ರವಾಸ ಯೋಜನೆ” ಭಾಗ್ಯ

ಬೆಂಗಳೂರು: (Singapore tour plan) ರಾಜ್ಯ ಸರ್ಕಾರ ಪೌರಕಾರ್ಮಿಕರಿಗೆ ಸಿಹಿಸುದ್ದಿ ನೀಡಿದ್ದು, ರಾಜ್ಯದ 300 ಪೌರಕಾರ್ಮಿಕರಿಗೆ ಸಿಂಗಾಪುರ ಪ್ರವಾಸ ಯೋಜನೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ವಿಧಾನ ಸೌಧದಲ್ಲಿ ಇಂದು ಪರಿಶಿಷ್ಠ ಫಲಾನುಭವಿಗಳಿಗೆ ಸವಲತ್ತು ವಿತರಣೆ, ಜಾಗೃತಿ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಸಿಂಗಾಪುರ ಪ್ರವಾಸ ಭಾಗ್ಯ ಯೋಜನೆಗೆ ಚಾಲನೆ ನೀಡುವ ಮೂಲಕ ಪಾಸ್‌ ಪೋರ್ಟ್‌ ವಿತರಿಸಿದರು.

ಇಂದು ಸಿಎಂ ಬಸವರಾಜ ಬೊಮ್ಮಾಯಿ ಸಾಂಕೇತಿಕವಾಗಿ ಇಬ್ಬರು ಪೌರಕಾರ್ಮಿಕರಿಗೆ ಪಾಸ್ ಪೋರ್ಟ್ ವಿತರಿಸಿದರು. ಪೌರಕಾರ್ಮಿಕರಿಗೆ ಇದೊಂದು ಅಂತರಾಷ್ಟ್ರೀಯ ಪ್ರವಾಸ ಅಂತಾನೇ ಹೇಳಲಾಗುತ್ತಿದ್ದು, ಸಿಎಂ ಘೋಷಣೆ ಮಾಡಿದ ಸಿಂಗಾಪುರ ಪ್ರವಾಸ ಭಾಗ್ಯ ಯೋಜನೆಯನ್ನು ರಾಜ್ಯದ 300 ಪೌರಕಾರ್ಮಿಕರು ಪಡೆಯಲಿದ್ದಾರೆ. ಸದ್ಯದಲ್ಲೇ ಸಿಂಗಾಪುರ ಪ್ರವಾಸವನ್ನು ಕೈಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಸಿಎಂ ಬಸವರಾಜ ಬೊಮ್ಮಾಯಿ 595 ಕೋಟಿ ರೂ.ಗಳ ಗಂಗಾ ಕಲ್ಯಾಣ ಯೋಜನೆಗೆ ಚಾಲನೆ ನೀಡಿದ್ದು, ಈ ಯೋಜನೆಯ ಮೂಲಕ 17 ಸಾವಿರ ಫಲಾನುಭವಿಗಳಿಗೆ ಸೌಲಭ್ಯ ಸಿಗಲಿದೆ. ಸಾಂಕೇತಿಕವಾಗಿ ಇಬ್ಬರು ಪೌರಕಾರ್ಮಿಕರಿಗೆ ಯೋಜನೆ ಸೌಲಭ್ಯಗಳನ್ನು ವಿತರಿಸಿದ್ದಾರೆ. ಸದಾ ಕೆಲಸದಲ್ಲೇ ತೊಡಗಿದ್ದ ಪೌರಕಾರ್ಮಿಕರಿಗೆ ರಾಜ್ಯ ಸರಕಾರದ ಮಹತ್ವದ ಯೋಜನೆ ಇದಾಗಿದ್ದು, ಪೌರ ಕಾರ್ಮಿಕರು ಕೇವಲ ಕೆಲಸಕ್ಕೆ ಸೀಮಿತವಲ್ಲ, ಅವರಿಗೂ ಹೊರಪ್ರಪಂಚವನ್ನು ನೋಡುವ ಅವಕಾಶವನ್ನು ಒದಗಿಸಲು ರಾಜ್ಯ ಸರಕಾರ ಮುಂದಾಗಿದೆ.

ಇದನ್ನೂ ಓದಿ : Maleyur Guruswami passed away: ಹಿರಿಯ ವಿದ್ವಾಂಸ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ. ಮಲೆಯೂರು ಗುರುಸ್ವಾಮಿ ವಿಧಿವಶ

ಇದನ್ನೂ ಓದಿ : Second PUC Exam: ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ : ಪರೀಕ್ಷಾ ಕೇಂದ್ರದ ಸುತ್ತ ಬಿಗಿ ಭದ್ರತೆ

ಇದನ್ನೂ ಓದಿ : ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಜಾಮೀನು ಅರ್ಜಿ ತುರ್ತು ವಿಚಾರಣೆ: ಪಕ್ಷಪಾತ ಎಂದು ಸಿಜೆಗೆ ದೂರು ಸಲ್ಲಿಸಿದ ವಕೀಲರು

Singapore tour plan: Sweet news for civil servants! 300 civil servants benefit from “Singapore Tour Scheme”.

Comments are closed.