ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಆರೆಸ್ಟ್

ಇಸ್ಲಾಮಾಬಾದ್‌ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ನ್ನು ಭಷ್ಟಾಚಾರ ಹಾಗೂ ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಂಗಳವಾರ ಬಂಧಿಸಲಾಗಿದೆ. ಪಾಕಿಸ್ತಾನ ರೇಂಜರ್ಸ್‌ ಇಮ್ರಾನ್‌ ಖಾನ್‌ರನ್ನು ಇಸ್ಲಾಮಾಬಾದ್‌ನಲ್ಲಿ (Imran Khan Arrest) ವಶಕ್ಕೆ ತೆಗೆದುಕೊಳ್ಳಲಾಗಿದೆ.

ಇಮ್ರಾನ್‌ ಖಾನ್‌ರನ್ನು ಪಾಕಿಸ್ತಾನದ ಸೇನೆಯನ್ನು ಸಾರ್ವಜನಿಕವಾಗಿ ಟೀಕೆ ಮಾಡಿದ ಕೆಲವೇ ದಿನಗಳಲ್ಲಿ ಬಂಧಿಸಲಾಗಿದೆ. ಮಂಗಳವಾರ ಇಸ್ಲಾಮಾಬಾದ್‌ ಹೈಕೋರ್ಟ್‌ನ ಎದುರು ಇಮ್ರಾನ್‌ ಖಾನ್‌ರನ್ನು ರೇಂಜರ್ಸ್‌ ವಶಕ್ಕೆ ಪಡೆದುಕೊಳ್ಳುವ ವೇಳೆ ಇಮ್ರಾನ್‌ ಪರ ವಕೀಲರಿಗೆ ಗಂಭೀರ ಗಾಯವಾಗಿದೆ. ತಮ್ಮ ವಿರುದ್ಧ ಸರಕಾರ ಹಾಕಿರುವ ಹಲವು ಕೇಸ್‌ಗಳ ವಿರುದ್ಧ ಜಾಮೀನು ಪಡೆದುಕೊಳ್ಳುವ ಸಲುವಾಗಿ ಇಮ್ರಾನ್‌ ಖಾನ್‌ ಇಸ್ಲಾಮಾಬಾದ್‌ ಹೈಕೋರ್ಟ್‌ಗ ತೆರಳಿದ್ದರು.

ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ದಿನದಿಂದಲೂ ಅವರು ಪಾಕಿಸ್ತಾನದ ಸೇನೆಯ ಅಗ್ರ ಅಧಿಕಾರಿಗಳು ಟೀಕಿಸುವ ಮೂಲಕ ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದು, ಅವರು ಹೈಕೋರ್ಟ್‌ನ ಹೊರ ಆವರಣಕ್ಕೆ ಬರುತ್ತಿದ್ದಂತೆ ಪಾಕಿಸ್ತಾನಿ ರೇಂಜರ್ಸ್‌ ಬಂಧಿಸಿದ್ದಾರೆ. ಇಮ್ರಾನ್‌ ಪರ ವಕೀಲ ಫೈಸಲ್‌ ಚೌಧರಿ ಕೂಡ ಇಮ್ರಾನ್‌ ಖಾನ್‌ ಬಂಧನವನ್ನು ಖಚಿತಪಡಿಸಿದ್ದಾರೆ. ಇಮ್ರಾನ್‌ ಖಾನ್‌ ಅವರ ಪಕ್ಷ ಪಿಟಿಐನ ಮುಖ್ಯಸ್ಥ ಮಸರತ್‌ ಚೌಧರಿ ಮಾತನಾಡಿದ್ದು, ‘ನನ್ನ ಎದುರಿಗೇ ದೊಡ್ಡ ಪ್ರಮಾಣದಲ್ಲಿ ಇಮ್ರಾನ್‌ ಖಾನ್‌ ಅವರ ಮೇಲೆ ಹಲ್ಲೆ ಮಾಡಿ ಬಂಧಿಸಲಾಗಿದೆ. ಅವರನ್ನು ಕೊಂದುಹಾಕಬಹುದು ಎನ್ನುವ ಭಯ ಕೂಡ ನನಗೆ ಕಾಡಿದೆ’ ಎಂದಿದ್ದಾರೆ.

ಇಮ್ರಾನ್ ಅವರನ್ನು ರೇಂಜರ್‌ಗಳು ನ್ಯಾಯಾಲಯದ ಒಳಗಿನಿಂದ “ಅಪಹರಣ” ಮಾಡಿದ್ದಾರೆ ಎಂದು ಪಿಟಿಐನ ಅಜರ್ ಮಶ್ವಾನಿ ಆರೋಪಿಸಿದ್ದಾರೆ. ಇಮ್ರಾನ್‌ ಖಾನ್‌ ಬಂಧನದ ಬೆನ್ನಲ್ಲಿಯೇ ಇಡೀ ದೇಶದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವಂತೆ ಪಿಟಿಐ ತನ್ನ ಕಾರ್ಯಕರ್ತರಿಗೆ ಕರೆ ನೀಡಿದೆ ಎಂದು ಹೇಳಿದ್ದಾರೆ. ಈ ನಡುವೆ ಪಾಕಿಸ್ತಾನದ ರಾಜಧಾನಿಯಲ್ಲಿ ಸೆಕ್ಷನ್ 144 ವಿಧಿಸಲಾಗಿದೆ ಎಂದು ಇಸ್ಲಾಮಾಬಾದ್ ಪೊಲೀಸರು ತಿಳಿಸಿದ್ದಾರೆ. ಯಾರಿಗೂ ಚಿತ್ರಹಿಂಸೆ ನೀಡಿಲ್ಲ ಎಂದು ದೃಢಪಡಿಸಿದ್ದು, ಪೊಲೀಸರು ಇಮ್ರಾನ್ ಕಾರನ್ನು ಸುತ್ತುವರಿದಿದ್ದಾರೆ.

ಇದನ್ನೂ ಓದಿ : ಶ್ರದ್ಧಾ ವಾಕರ್‌ ಕೊಲೆ ಪ್ರಕರಣ : ದೆಹಲಿ ಕೋರ್ಟ್‌ನಿಂದ ಮಹತ್ವದ ತೀರ್ಪು

ಇದನ್ನೂ ಓದಿ : ಸೇತುವೆಯಿಂದ ಕೆಳಗೆ ಉರುಳಿದ ಬಸ್ : 14 ಮಂದಿ ದುರ್ಮರಣ

ಹಲವಾರು ವಿಫಲ ಪ್ರಯತ್ನಗಳ ಬಳಿಕ ಪಾಕಿಸ್ತಾನಿ ರೇಂಜರ್ಸ್‌ ಇಮ್ರಾನ್‌ ಖಾನ್‌ರನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಲಾಹೋರ್‌ನ ಜಮಾನ್ ಪಾರ್ಕ್‌ನಲ್ಲಿರುವ ಅವರ ನಿವಾಸದ ಮೇಲೆ ಪೋಲೀಸ್ ದಾಳಿ ಸೇರಿದಂತೆ, ಅವರನ್ನು ಬಂಧಿಸಲು ಹಲವು ಪ್ರಯತ್ನ ಮಾಡಿದ್ದರು. ಪ್ರತಿ ಬಾರಿಯೂ ಅವರು ಯಶಸ್ವಿಯಾಗಿ ತಪ್ಪಿಸಿಕೊಂಡಿದ್ದರು. ಆದರೆ, ಈ ಬಾರಿ ಅದು ಸಾಧ್ಯವಾಗಿಲ್ಲ.

Former Prime Minister of Pakistan Imran Khan Arrested

Comments are closed.