Gang rape of young woman: ಕೇರಳ ಮೂಲದ ಯುವತಿ ಮೇಲೆ ಗ್ಯಾಂಗ್‌ ರೇಪ್‌: ಇಬ್ಬರ ಬಂಧನ

ಬೆಂಗಳೂರು: (Gang rape of young woman) ಕೇರಳ ಮೂಲದ ಯುವತಿಯ ಮೇಲೆ ಇಬ್ಬರು ಯುವಕರು ಗ್ಯಾಂಗ್ ರೇಪ್ ಮಾಡಿದ ಘಟನೆ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿ ನಡೆದಿದೆ. ಕಳೆದ ಶುಕ್ರವಾರ ರಾತ್ರಿ ಘಟನೆ ನಡೆದಿದ್ದು ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಸಂತ್ರಸ್ತ ಯುವತಿ (Gang rape of young woman) ಬಿಟಿಎಂ ಲೇಔಟ್‌ನ ಸಂಸ್ಥೆಯೊಂದರಲ್ಲಿ ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡಿಕೊಂಡಿದ್ದಳು ಎಂಬ ಮಾಹಿತಿ ತಿಳಿದು ಬಂದಿದೆ. ಯುವತಿ ಶುಕ್ರವಾರ ರಾತ್ರಿ ರ‍್ಯಾಪಿಡೋ ಬೈಕ್ ಬುಕ್ಕಿಂಗ್ ಮಾಡಿದ್ದು, ಬಿಟಿಎಂ ಲೇಔಟ್‌ನಿಂದ ನೀಲಾದ್ರಿ ನಗರಕ್ಕೆ ರ‍್ಯಾಪಿಡೋ ಬೈಕ್ ಬುಕ್ಕಿಂಗ್ ಆಗಿತ್ತು. ರ‍್ಯಾಪಿಡೋ ಬೈಕ್ ಹುಡುಗ ಪಿಕ್ ಅಪ್ ವೇಳೆ ಯುವತಿ ಮದ್ಯಪಾನ ಮಾಡಿದ್ದಳು ಅಂತ ಹೇಳಲಾಗುತ್ತಿದೆ.

ನೀಲಾದ್ರಿ ನಗರ ತಲುಪುವ ಹೊತ್ತಿಗೆ ಯುವತಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದಳು. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು ರ‍್ಯಾಪಿಡೋ ಯುವಕ ಆಕೆಯನ್ನು ಮನೆಗೆ ಬಿಡುವ ಬದಲಾಗಿ ತನ್ನ ಸ್ನೇಹಿತನ ನೆರವಿನಿಂದ ನೀಲಾದ್ರಿ ನಗರದ ತನ್ನ ರೂಮಿಗೆ ಕರೆದೊಯ್ದನು. ನಂತರ ಇಬ್ಬರೂ ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಇದನ್ನೂ ಓದಿ : Noida Accident : ಕಾರು ಹರಿದು 6 ವರ್ಷದ ಬಾಲಕಿ ಸಾವು, ಇಬ್ಬರು ಗಂಭೀರ

ಇದನ್ನೂ ಓದಿ : teacher called the student a terrorist: ವಿದ್ಯಾರ್ಥಿಯನ್ನು ಭಯೋತ್ಪಾದಕ ಎಂದ ಶಿಕ್ಷಕ: ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್‌

ಇದನ್ನೂ ಓದಿ : Bike Accident 2died: ಬಿಬಿಎಂಪಿ ಕಸದ ಲಾರಿಗೆ ಇಬ್ಬರು ಬಲಿ: ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕ

ಅರೆ ಪ್ರಜ್ಞಾನಸ್ಥೆಯಲ್ಲಿದ್ದ ಯುವತಿಗೆ ಪ್ರಜ್ಞೆ ಬಂದ ಬಳಿಕ ಆರೋಪಿಗಳು ಆಕೆಯನ್ನು ಬಿಟ್ಟು ಕಳುಹಿಸಿದ್ದರು. ಯಾರಿಗೂ ಹೇಳದಂತೆ ಬೆದರಿಕೆ ಕೂಡ ಹಾಕಿ ಕಳುಹಿಸಿದ್ದರು. ಬಳಿಕ ಸಂತ್ರಸ್ತ ಯುವತಿ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಳು. ಯುವತಿಯ ದೂರನ್ನು ಆಧರಿಸಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Gang rape of young woman) The incident of gang rape of a young woman from Kerala by two youths took place in Neeladri Nagar of Electronic City. The incident took place last Friday night and the case came to light late.

Comments are closed.