Home Remedy For Health : 90 ರೋಗಗಳಿಗೆ ರಾಮಬಾಣ ಈ ಮನೆಮದ್ದು

ನಮ್ಮ ಶರೀರದಲ್ಲಿ ಹಲವಾರು ರೋಗಗಳು ದಿನದಿಂದ ದಿನಕ್ಕೆ ಹುಟ್ಟಿಕೊಳ್ಳುತ್ತದೆ. ಹೀಗೆ ಹುಟ್ಟಿಕೊಳ್ಳುವ ರೋಗಗಳು ಮೊದಲಿಗೆ ನಮ್ಮ ಅರಿವಿಗೆ ಬರುವುದಿಲ್ಲ. (Home Remedy For Health) ಅದರ ಬದಲು ನಮ್ಮ ದೇಹದಲ್ಲಿ ರೋಗಗಳು ಉಲ್ಬಣಗೊಂಡಾಗ ನಮಗೆ ತಿಳಿಯುತ್ತದೆ. ಹೆಚ್ಚಾಗಿ ನಮ್ಮ ದೇಹದಲ್ಲಿ ಪ್ರತಿಯೊಂದು ರೋಗಗಳು ಹುಟ್ಟಿಕೊಳ್ಳುವುದು ಹೊಟ್ಟೆಯಿಂದ ಎನ್ನಬಹುದು. ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣಕ್ರಿಯೆ ಆಗದೇ ಇದ್ದಾಗ ಕಶ್ಮಲಗಳು ಹೊಟ್ಟೆಯಲ್ಲೇ ಉಳಿದುಕೊಳ್ಳುತ್ತದೆ.

ಇದರಿಂದಾಗಿ ಗ್ಯಾಸ್ಟ್ರಿಕ್‌, ಎದೆಯುರಿ, ಅತಿಸಾರ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರಿಂದ ನಮ್ಮ ದೇಹದಲ್ಲಿ ಹೊಟ್ಟೆ ಆರೋಗ್ಯವು ಅತಿ ಮುಖ್ಯವಾಗಿರುತ್ತದೆ. ಅದರಲ್ಲೂ ದೊಡ್ಡಕರಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಹಾಗಾಗಿ ಹೊಟ್ಟೆಯು ಆರೋಗ್ಯವಾಗಿದ್ದರೆ ನಮ್ಮ ಸಂಪೂರ್ಣ ದೇಹ ಕೂಡ ಆರೋಗ್ಯವಾಗಿ ಇರುತ್ತದೆ. ಆದರೆ ಈಗಾಗಲೇ ಹುಟ್ಟಿಕೊಂಡ ಹಲವಾರು ರೋಗಗಳನ್ನು ಸುಲಭ ರೀತಿಯ ಮನೆಮದ್ದಿನ ಮೂಲಕ ಸರಿಪಡಿಸಿಕೊಳ್ಳಬಹುದಾಗಿದೆ. ಹಾಗಾದರೆ ಆ ಮನೆಮದ್ದನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿ :
ಕೊತ್ತಂಬರಿ ಬೀಜ
ಸೊಂಪು
ಜೀರಿಗೆ
ಕಲ್ಲುಸಕ್ಕರೆ

ತಯಾರಿಸುವ ವಿಧಾನ :
ರಾತ್ರಿ ಮಲಗುವ ಮೊದಲು ಒಂದು ಬೌಲ್‌ಗೆ ಒಂದು ಚಮಚ ಕೊತ್ತಂಬರಿ ಬೀಜ, ಒಂದು ಚಮಚ ಜೀರಿಗೆ ಮತ್ತು ಒಂದು ಚಮಚ ಸೊಂಪುಗೆ ಒಂದು ಲೋಟ ಕುಡಿಯುವ ನೀರನ್ನು ಹಾಕಿ ನೆನೆಸಿ ಇಡಬೇಕು. ಬೆಳಿಗ್ಗೆ ನೆನೆಸಿ ಇಟ್ಟ ಮಿಶ್ರಣಕ್ಕೆ ಒಂದು ಲೋಟ ನೀರನ್ನು ಬೆರೆಸಿ ಒಂದು ಪಾತ್ರೆಗೆ ಹಾಕಿ ಗ್ಯಾಸ್‌ ಮೇಲೆ ಇಟ್ಟು ಚೆನ್ನಾಗಿ ಕುದಿಸಿಕೊಳ್ಳಬೇಕು. ಹೀಗೆ ಚೆನ್ನಾಗಿ ಕುದಿಸಿದ ಮಿಶ್ರಣವು ಮುಕ್ಕಾಲು ಲೋಟದಿಂದ ಅರ್ಧ ಲೋಟ ಹದಕ್ಕೆ ಬಂದ ಮೇಲೆ ಒಂದು ಲೋಟಕ್ಕೆ ಸೊಸಿಕೊಳ್ಳಬೇಕು.

ಸೊಸಿಕೊಂಡ ಕಷಾಯಕ್ಕೆ ರುಚಿಗೆ ಬೇಕಾದಷ್ಟು ಕಲ್ಲುಸಕ್ಕರೆಯನ್ನು ಸೇರಿಸಿಕೊಂಡು ಕುಡಿಯಬಹುದು ಅಥವಾ ಹಾಗೆ ಕೂಡ ಕುಡಿಬಹುದು. ಇನ್ನೂ ಸಕ್ಕರೆ ಕಾಯಿಲೆ ಇರುವವರು ಹಾಗೆ ಕುಡಿಯುವುದು ಹೆಚ್ಚು ಸೂಕ್ತ. ಈ ಒಂದು ಕಷಾಯ ನಮ್ಮ ದೇಹಲ್ಲಿ ಹುಟ್ಟಿಕೊಳ್ಳುವ 90 ರೋಗದಿಂದ ನಮ್ಮಿಂದ ದೂರವಿಡುತ್ತದೆ. ಈ ಮೂರು ಪದಾರ್ಥಗಳನ್ನು ಬಳಸಿ ಮಾಡಿರುವ ಕಷಾಯವನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಮ್ಮ ದೇಹದಲ್ಲಿ ಹುಟ್ಟಿಕೊಳ್ಳುವ 90 ರೋಗವನ್ನು ದೂರವಿಡುತ್ತದೆ.

ಇದನ್ನೂ ಓದಿ : Tomato: ತಲೆಹೊಟ್ಟಿನ ಸಮಸ್ಯೆಗೆ ಟೊಮೇಟೊ ಹಣ್ಣು!

ಇದನ್ನೂ ಓದಿ : Boosting your Immunity:ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ಕಷಾಯಪುಡಿ

ಇದನ್ನೂ ಓದಿ : Amaranthus: ಹರಿವೆ ಸೊಪ್ಪಿನಲ್ಲೂ ಇದೆ ಔಷದೀಯ ಗುಣಗಳು

ಇದನ್ನೂ ಓದಿ : Winter Hair Care :ಚಳಿಗಾಲದಲ್ಲಿ ಕೂದಲು ಆರೈಕೆಗೆ ಬಳಸಿ ಈ ಎಣ್ಣೆ

ಥೈರಾಡ್‌, ಅಂಗಾಲಿನ ಊರಿ, ಹೊಟ್ಟೆ ಊರಿ ಅಥವಾ ಉಷ್ಣ, ಸಕ್ಕರೆ ಕಾಯಿಲೆ, ಉರಿಮೂತ್ರ, ಜೀರ್ಣಕ್ರಿಯೆ ಸಮಸ್ಯೆ, ದೊಡ್ಡಕರಳಿನ ಸಮಸ್ಯೆ, ಗ್ಯಾಸ್ಟ್ರಿಕ್‌ ಮುಂತಾದ 90 ರೋಗಗಳಿಗೆ ರಾಮಬಾಣವಾಗಿ ಪರಿಣಮಿಸುತ್ತದೆ. ದೇಹದಲ್ಲಿನ ಬೇಡವಾದ ಬೊಜ್ಜನ್ನು ಕರಗಿಸುವಲ್ಲಿ ಈ ಮೂರು ಪದಾರ್ಥಗಳು ಹೆಚ್ಚಿನ ಪಾತ್ರವನ್ನು ವಹಿಸುತ್ತದೆ. ಹಾಗೆ ಹೊಟ್ಟೆಯಲ್ಲಿರುವ ಕಶ್ಮಲಗಳನ್ನು ಈ ಒಂದು ಮನೆಮದ್ದಿನಿಂದ ಸುಲಭವಾಗಿ ಹೊರಹಾಕಬಹುದು. ಒಮ್ಮೆ ನಮ್ಮ ದೇಹದಲ್ಲಿರುವ ದೊಡ್ಡಕರಳು ಸಂಪೂರ್ಣವಾಗಿ ಸ್ವಚ್ಚವಾದರೆ ಎಲ್ಲಾ ರೋಗಗಳು ನಮ್ಮಿಂದ ದೂರ ಉಳಿಯುತ್ತದೆ.

Home Remedy For Health: This home remedy is a panacea for 90 diseases

Comments are closed.