Gang rape on minor girl: ಪ್ರಿಯಕರನ ಬಟ್ಟೆ ಬಿಚ್ಚಿ ಮರಕ್ಕೆ ಕಟ್ಟಿ ಹಾಕಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

ಪಾಲ್ಘರ್ : (Gang rape on minor girl) ತನ್ನ ಪ್ರಿಯಕರನೊಂದಿಗೆ ಸಂಜೆಯ ವಾಕಿಂಗ್‌ಗೆ ಹೊರಟಿದ್ದ ಬಾಲಕಿಯ ಮೇಲೆ ಇಬ್ಬರು ವ್ಯಕ್ತಿಗಳು ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪಿಟಿಐ ವರದಿ ಮಾಡಿದೆ. ಇದೀಗ ಆರೋಪಿಗಳನ್ನು ಬಂಧಿಸಿದ್ದು, ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಪೊಲೀಸರ ಪ್ರಕಾರ, ಆರೋಪಿಗಳು ಅವರನ್ನು ನೋಡಿದಾಗ ಬಾಲಕಿ ಮತ್ತು ಆಕೆಯ ಗೆಳೆಯ ವಾಕಿಂಗ್ ಮಾಡಲು ಹತ್ತಿರದ ಬೆಟ್ಟಕ್ಕೆ ಹೋಗಿದ್ದರು. ಈ ವೇಳೆ ಆರೋಪಿಗಳು ಪ್ರೇಮಿಗಳಿಗೆ ಬೆದರಿಕೆ ಹಾಕಿದ್ದಾರೆ. ನಂತರ ಆರೋಪಿ ಹಾಗೂ ಬಾಲಕನ ನಡುವೆ ವಾಗ್ವಾದ ನಡೆದ್ದಿದ್ದು, ಆರೋಪಿಗಳು ಇಬ್ಬರಿಗೆ ಖಾಲಿ ಬಿಯರ್ ಬಾಟಲಿಯಿಂದ ಹೊಡೆದಿದ್ದಾರೆ. ನಂತರ ಬಾಲಕನನ್ನು ವಿವಸ್ತ್ರಗೊಳಿಸಿ ಮರಕ್ಕೆ ಕಟ್ಟಿ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಾದ ಬಳಿಕ 22 ಮತ್ತು 25 ವರ್ಷದ ಆರೋಪಿಗಳು ಬಾಲಕಿಯನ್ನು ಪ್ರತ್ಯೇಕ ಸ್ಥಳಕ್ಕೆ ಎಳೆದೊಯ್ದು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರ ಎಸಗಿದ್ದಲ್ಲದೇ ಆಕೆ ಅಲ್ಲಿಂದ ತೆರಳಬಾರದೆಂದು ಸಂತ್ರಸ್ತೆಯ ಪರ್ಸ್ ಅನ್ನು ಸಹ ಸುಟ್ಟು ಹಾಕಿದ್ದಾರೆ. ಆದರೆ ಸಂತ್ರಸ್ತೆ ಆರೋಪಿಗಳ ಹಿಡಿತದಿಂದ ಹಾಗೋ ಹೀಗೋ ತಪ್ಪಿಸಿಕೊಂಡು ಮನೆಗೆ ತಲುಪಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಆದರೆ ಮರಕ್ಕೆ ಕಟ್ಟಿಹಾಕಲಾಗಿದ್ದ ಬಾಲಕನನ್ನು ಗಂಟೆಗಳ ನಂತರ ಪೊಲೀಸರು ರಕ್ಷಿಸಿದರು ಎಂದು ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ : Acid Attack-complaint filed : ತಾಯಿ ಮತ್ತು ಮಗುವಿನ ಮೇಲೆ ಆಸಿಡ್ ದಾಳಿ: ದೂರು ದಾಖಲು

ಇದನ್ನೂ ಓದಿ : Electricity bill fraud: ವಿದ್ಯುತ್ ಬಿಲ್ ಹೆಸರಲ್ಲೂ ನಿಮ್ಮನ್ನು ವಂಚನೆ ಮಾಡಬಹುದು ಹುಷಾರ್‌!

ಘಟನೆಯ ಬಳಿಕ ಆರೋಪಿಗಳನ್ನು ಬಂಧಿಸಿ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಮ್ಯಾಜಿಸ್ಟ್ರೇಟ್ ಅವರನ್ನು ಮಾರ್ಚ್ 27 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು, ಮುಂಬೈನ ದೂರದ ಉಪನಗರವಾದ ವಿರಾರ್‌ನ ಸಾಯಿನಾಥ್ ನಗರ ಪ್ರದೇಶದ ನಿವಾಸಿಗಳಾದ ಇಬ್ಬರು ಆರೋಪಿಗಳ ವಿರುದ್ಧ ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ.

Gang rape on minor girl: The girl was gang-raped by undressing her lover and tying her to a tree

Comments are closed.