Gas Cylinder Blast: ಮದುವೆ ಮನೆಯಲ್ಲಿ ಸಿಲಿಂಡರ್‌ ಸ್ಫೋಟ: ನಾಲ್ಕು ಮಂದಿ ಸಾವು, 60 ಮಂದಿ ಗಾಯ

ಜೋಧ್‌ಪುರ: (Gas Cylinder Blast) ಮದುವೆ ಸಮಾರಂಭವೊಂದರಲ್ಲಿ ಗ್ಯಾಸ್ ಸಿಲಿಂಡರ್‌ಗಳು ಏಕಾಏಕಿ ಸ್ಫೋಟಗೊಂಡ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 60 ಮಂದಿ ಗಾಯಗೊಂಡಿರುವ ದುರ್ಘಟನೆ ಜೋಧ್‌ಪುರದ ಭುಂಗ್ರಾ ಗ್ರಾಮದ ಶೇರ್‌ಗಢ್ ಪ್ರದೇಶದಲ್ಲಿ ನಡೆದಿದೆ. ಈ ಅಗ್ನಿ ಅವಘಡದಲ್ಲಿ ಸುಮಾರು 60 ಮಂದಿ ಗಾಯಗೊಂಡಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಜೋಧ್‌ಪುರದ ಶೇರ್‌ಗಢ್‌ನ ಭುಂಗ್ರಾ ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ಭಕ್ಷ್ಯಗಳನ್ನು ತಯಾರಿಸುತ್ತಿದ್ದ ವೇಳೆ ಅಡುಗೆ ಮನೆಯಲ್ಲಿ ಮೊದಲಿಗೆ ಸಿಹಿ ತಿನಿಸುಗಳನ್ನು ತಯಾರಿಸುತ್ತಿದ್ದ ಸ್ಟವ್ ಬಳಿ ಅಳವಡಿಸಲಾಗಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟ(Gas Cylinder Blast) ಗೊಂಡಿದೆ. ಇದರ ಹಿಂದೆಯೇ ಸಮೀಪದಲ್ಲಿ ಇರಿಸಲಾಗಿದ್ದ 5 ಸಿಲಿಂಡರ್‌ಗಳು ಒಂದೊಂದಾಗಿ ಸ್ಫೋಟಗೊಂಡಿವೆ. ಸ್ಫೋಟದಿಂದ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದರಿಂದ ಕ್ಷಣ ಮಾತ್ರದಲ್ಲಿ ಮದುವೆ ಮಂಟಪ ಬೆಂಕಿಯ ಕೆನ್ನಾಲಿಗೆ ಹರಡಿದ್ದು, ಈ ವೇಳೆ ಬೆಂಕಿಗಾಹುತಿಯಾದ ಜನರ ಕಿರುಚಾಟ ಕೇಳಿದ ಗ್ರಾಮಸ್ಥರು ಅಲ್ಲಿದ್ದ ಜನರನ್ನು ರಕ್ಷಿಸಿದ್ದಾರೆ.

ಈ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾಧಿಕಾರಿ ಹಿಮಾಂಶು ಗುಪ್ತಾ ಮತ್ತು ಗ್ರಾಮಾಂತರ ಎಸ್ಪಿ ಅನಿಲ್ ಕಯಾಲ್, ಗಾಯಾಳುಗಳನ್ನು ಜೋಧ್‌ಪುರದ ಮಹಾತ್ಮ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೆರವಾಗಿದ್ದಾರೆ. ಲಭ್ಯವಿರುವ ಪ್ರಾಥಮಿಕ ಮಾಹಿತಿಗಳ ಪ್ರಕಾರ, ಮದುವೆ ಸಮಾರಂಭದಲ್ಲಿ ಅಡುಗೆಗಾಗಿ 20 ಗ್ಯಾಸ್ ಸಿಲಿಂಡರ್‌ಗಳನ್ನು ಆರ್ಡರ್ ಮಾಡಲಾಗಿತ್ತು. ಅವುಗಳಲ್ಲಿ ಒಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ತಗುಲಿದ ಪರಿಣಾಮ ಒಂದರ ಹಿಂದೆ ಒಂದರಂತೆ ಐದು ಸಿಲಿಂಡರ್‌ಗಳು ಒಟ್ಟಿಗೆ ಸ್ಪೋಟಗೊಂಡಿವೆ.

ಇದನ್ನೂ ಓದಿ : Brahmavara Road accident: ಟೂರಿಸ್ಟ್‌ ಬಸ್‌ ಚಾಲಕನ ಅಜಾಗರೂಕತೆಗೆ ಓರ್ವ ಬಲಿ

ಇದನ್ನೂ ಓದಿ : ಮಂಗಳೂರಲ್ಲಿ ಸಿಟಿ ಬಸ್ ಚಾಲಕನ ಅಟ್ಟಹಾಸ : ಇಂಜಿನಿಯರ್ ಸಾವು, ಸಾರ್ವಜನಿಕರ ಆಕ್ರೋಶ

ಈ ದುರ್ಘಟನೆಯಲ್ಲಿ ವರ ಸುರೇಂದ್ರ ಸಿಂಗ್, ವರನ ತಂದೆ ತಗತ್ ಸಿಂಗ್, ವರನ ತಾಯಿ ದಖು ಕವಾರ್ ಮತ್ತು ಸಹೋದರಿ ರಸಲ್ ಕನ್ವರ್ ಜುಲ್ಸ್ ಸೇರಿದಂತೆ ಸುಮಾರು 60 ಜನರು ಸುಟ್ಟುಕರಕಲಾಗಿದ್ದು ಎಲ್ಲರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

(Gas Cylinder Blast) Four people were killed and 60 injured when gas cylinders suddenly exploded during a wedding ceremony in Shergarh area of Bhungra village in Jodhpur. About 60 people were injured in this fire incident and it is reported that the injured have been admitted to a nearby hospital.

Comments are closed.