Eliminator match : ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ಗೆ ದಬಾಂಗ್ ಡೆಲ್ಲಿ ಎದುರಾಳಿ

ಹೈದರಾಬಾದ್ : 6ನೇ ಆವೃತ್ತಿಯ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ, ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ (Pro Kabaddi League) ಮೊದಲ ಎಲಿಮಿನೇಟರ್ ಪಂದ್ಯದಲ್ಲಿ (Eliminator match) ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡವನ್ನು ಎದುರಿಸಲಿದೆ. ಹೈದರಾಬಾದ್’ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಗೆಲ್ಲಲೇಬೇಕಾಗಿದ್ದ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ವಿರುದ್ಧ 46-46ರಲ್ಲಿ ಟೈ ಮಾಡಿಕೊಂಡ ದಬಾಂಗ್ ಡೆಲ್ಲಿ ಒಟ್ಟಾರೆ ಅಂಕಗಳಿಕೆಯನ್ನು 63ಕ್ಕೆ ಏರಿಸಿಕೊಂಡು 6ನೇ ತಂಡವಾಗಿ ಪ್ಲೇ ಆಫ್ ಹಂತಕ್ಕೇರಿತು. ಮಾಡು ಇಲ್ಲ ಮಡಿ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಗೆಲುವಿನ ಅವಕಾಶವನ್ನು ಕೈಚೆಲ್ಲಿದ ಬೆಂಗಾಲ್ ವಾರಿಯರ್ಸ್ ಟೂರ್ನಿಯಿಂದ ಹೊರಬಿತ್ತು. ಬೆಂಗಾಲ್ ತಂಡದ ಸೋಲಿನೊಂದಿಗೆ ಹರ್ಯಾಣ ಸ್ಟೀಲರ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳ ಪ್ಲೇ ಆಫ್ ಕನಸು ನುಚ್ಚು ನೂರಾಯಿತು.

ಮಂಗಳವಾರ (ಡಿಸೆಂಬರ್ 13) ಮುಂಬೈನ ಡೋಮ್, NSCI SVP ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳು ಮುಖಾಮುಖಿಯಾಗಲಿವೆ. 2ನೇ ಎಲಿಮಿನೇಟರ್ ಪಂದ್ಯದಲ್ಲಿ ಯು.ಪಿ ಯೋಧಾ ಪಡೆ ತಮಿಳ್ ತಲೈವಾಸ್ ತಂಡವನ್ನು ಎದುರಿಸಲಿದೆ. ಎಲಿಮಿನೇಟರ್ ಪಂದ್ಯಗಳಲ್ಲಿ ಗೆದ್ದ ತಂಡಗಳು ಸೆಮಿಫೈನಲ್’ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಪುಣೇರಿ ಪಲ್ಟನ್ ತಂಡಗಳನ್ನು ಎದುರಿಸಲಿವೆ. ಲೀಗ್ ಹಂತದಲ್ಲಿ ಆಡಿರುವ 21 ಪಂದ್ಯಗಲಿಂದ ತಲಾ 79 ಅಂಕಗಲೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆದಿರುವ ಪಿಂಕ್ ಪ್ಯಾಂಥರ್ಸ್ ಮತ್ತು ಪಲ್ಟನ್ ತಂಡಗಳು ನೇರವಾಗಿ ಸೆಮಿಫೈನಲ್’ಗೆ ಲಗ್ಗೆ ಇಟ್ಟಿವೆ.

ಪ್ರೊ ಕಬಡ್ಡಿ ಲೀಗ್-9: ಶುಕ್ರವಾರದ ಪಂದ್ಯಗಳು (Pro Kabaddi League) :

  1. ಜೈಪುರ ಪಿಂಕ್ ಪ್ಯಾಂಥರ್ಸ್ Vs ಗುಜರಾತ್ ಜೈಂಟ್ಸ್
  2. ಯು.ಪಿ ಯೋಧಾ Vs ಯು ಪುಣೇರಿ ಪಲ್ಟನ್

ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : Pro Kabaddi League: ದಕ್ಷಿಣ ಭಾರತ ಡರ್ಬಿಯಲ್ಲಿ ತಲೈವಾಸ್ ವಿರುದ್ಧ ಗೆದ್ದರೆ ಬೆಂಗಳೂರು ಬುಲ್ಸ್ ಟೇಬಲ್ ಟಾಪರ್

ಇದನ್ನೂ ಓದಿ : Pro Kabaddi League: ಫೋಟೋ ಫಿನಿಷ್ ರೇಸ್‌ನಲ್ಲಿ ಬೆಂಗಳೂರು ಬುಲ್ಸ್, ಪುಣೇರಿ ಪಲ್ಟನ್ ಪಡೆಗೆ ಸೋಲು

ಇದನ್ನೂ ಓದಿ : Tamil Talaiwas enters play off : ಅದ್ಭುತ ಕಂಬ್ಯಾಕ್‌ನೊಂದಿಗೆ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಟ್ಟ ತಮಿಳ್ ತಲೈವಾಸ್

ಪ್ರೊ ಕಬಡ್ಡಿ ಲೀಗ್-9: ಪ್ಲೇ ಆಫ್/ಸೆಮಿಫೈನಲ್/ಫೈನಲ್ ಪಂದ್ಯಗಳ ವೇಳಾಪಟ್ಟಿ :
ಡಿಸೆಂಬರ್ 13
ಎಲಿಮಿನೇಟರ್ 1: ಬೆಂಗಳೂರು ಬುಲ್ಸ್ Vs ದಬಾಂಗ್ ಡೆಲ್ಲಿ
ಎಲಿಮಿನೇಟರ್ 2: ಯು.ಪಿ ಯೋಧಾ Vs ತಮಿಳ್ ತಲೈವಾಸ್

ಡಿಸೆಂಬರ್ 15
ಸೆಮಿಫೈನಲ್ 1 & ಸೆಮಿಫೈನಲ್ 2

ಡಿಸೆಂಬರ್ 17
ಫೈನಲ್ ಪಂದ್ಯ

ಪ್ಲೇ ಆಫ್ ಪಂದ್ಯಗಳ ಆತಿಥ್ಯ:
ಡೋಮ್, NSCI SVP ಸ್ಟೇಡಿಯಂ, ಮುಂಬೈ

Pro Kabaddi League-9: Dabang Delhi to take on Bengaluru Bulls in eliminator match

Comments are closed.