Greece train accident: ಗ್ರೀಸ್‌ನಲ್ಲಿ ರೈಲು ಅಪಘಾತ: 26 ಪ್ರಯಾಣಿಕರು ಸಾವು, 85 ಕ್ಕೂ ಹೆಚ್ಚು ಮಂದಿಗೆ ಗಾಯ

ಥೆಸಲೋನಿಕಿ: (Greece train accident) ಸರಕು ಸಾಗಾಟದ ರೈಲು ಹಾಗೂ ಪ್ರಯಾಣಿಕ ರೈಲುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ 26 ಮಂದಿ ಸಾವನ್ನಪ್ಪಿದ್ದು, 85 ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿರುವ ಘಟನೆ ಉತ್ತರ ಗ್ರೀಸ್ ನಲ್ಲಿ ನಡೆದಿದೆ. ಗಾಯಗೊಂಡವರ ಸ್ಥಿತಿ ಗಂಭೀರವಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಆಸ್ಪತ್ರೆಗಳಿಗೆ ಹೆಚ್ಚಿನ ಸಿಬ್ಬಂಧಿಗಳನ್ನು ನಿಯೋಜನೆ ಮಾಡಲಾಗಿದೆ.

ಅಥೆನ್ಸ್‌ನ ಉತ್ತರಕ್ಕೆ ಸುಮಾರು 380 ಕಿಲೋಮೀಟರ್ (235 ಮೈಲುಗಳು) ದೂರದಲ್ಲಿರುವ ಟೆಂಪೆ ಬಳಿ ಪ್ರಯಾಣಿಕರ ರೈಲು ಹಾಗೂ ಸರಕು ಸಾಗಾಣಿಕೆ ರೈಲು ಢಿಕ್ಕಿಯಾಗಿವೆ. ಪರಿಣಾಮ ರೈಲಿನ ಹಲವು ಭೋಗಿಗಳು ಹಳಿತಪ್ಪಿದ್ದು, ಮೂರು ಭೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಈ ಭೀಕರ ಅಪಘಾತದಲ್ಲಿ 26 ಪ್ರಯಾಣಿಕರು ಮೃತಪಟ್ಟಿದ್ದು, 85 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 25 ಮಂದಿ ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಗೊಂಡ ಪ್ರಯಾಣಿಕರನ್ನು ಸಮೀಪದ ಲಾರಿಸ್ಸಾ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳದ ಸುತ್ತಮುತ್ತಲಿನ ಪಟ್ಟಣಗಳಲ್ಲಿರುವ ಅಂಬ್ಯುಲೆನ್ಸ್ ಗಳ ಸಹಕಾರದಿಂದ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಅಪಘಾತದ ನಂತರ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಲಾಗಿದೆ.ರಕ್ಷಣಾ ಕಾರ್ಯದಲ್ಲಿ ಸಹಾಯ ಮಾಡಲು ಸೇನೆಯನ್ನು ಸಂಪರ್ಕಿಸಲಾಗಿದೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ. “ಇದು ಅತ್ಯಂತ ಭೀಕರ ರೈಲು ಅಪಘಾತವಾಗಿದ್ದು,ಇದು ಭಯಾನಕ ರಾತ್ರಿ ಕಂಡಿದ್ದೇವೆ. ದೃಶ್ಯವನ್ನು ವಿವರಿಸುವುದು ಕಷ್ಟ ಎಂದು ಕೇಂದ್ರ ಥೆಸಲಿ ಪ್ರದೇಶದ ಪ್ರಾದೇಶಿಕ ಗವರ್ನರ್ ಕೋಸ್ಟಾಸ್ ಅಗೋರಾಸ್ಟೋಸ್ ಸರಕಾರಿ ವಾಹಿನಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : 10 ವರ್ಷದ ಬಾಲಕನನ್ನು ಅಪಹರಿಸಿ ಹತ್ಯೆ: ಪೊದೆಯಲ್ಲಿ ಮೃತದೇಹ ಪತ್ತೆ

ಇದನ್ನೂ ಓದಿ : ಪಟಾಕಿ ಸಾಗಿಸುತ್ತಿದ್ದ ಇ-ರಿಕ್ಷಾದಲ್ಲಿ ಸ್ಫೋಟ: ಓರ್ವ ವ್ಯಕ್ತಿ ಸಾವು, ಇನ್ನೋರ್ವನಿಗೆ ಗಾಯ

ಇದನ್ನೂ ಓದಿ : Bidar murder: ಜನನಿಬೀಡ ಪ್ರದೇಶದಲ್ಲಿ ಹಾಡಹಗಲೇ ವ್ಯಕ್ತಿಯನ್ನು ಕಡಿದು ಬರ್ಬರ ಹತ್ಯೆ

Greece train accident: Train accident in Greece: 26 passengers dead, more than 85 injured

Comments are closed.