Govt employees strike: ಸರಕಾರಿ ನೌಕರರ ಮುಷ್ಕರ: ಶಾಲೆ, ಸರಕಾರಿ ಸೇವೆಗಳು ಬಂದ್, ಚಿಕಿತ್ಸೆಗಾಗಿ ರೋಗಿಗಳ ಪರದಾಟ

ಬೆಂಗಳೂರು: (Govt employees strike) ಹಳೆ ಪಿಂಚಣಿ ವ್ಯವಸ್ಥೆ ಜಾರಿ ಹಾಗೂ ಏಳನೇ ವೇತನ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರಿಂದಾಗಿ ಕರ್ನಾಟಕದಲ್ಲಿ ಶಾಲೆ, ಸರಕಾರಿ ಕಚೇರಿಗಳು ಬಂದ್ ಆಗಿವೆ. ತುರ್ತು ಚಿಕಿತ್ಸೆಗೆ ಮಾತ್ರವೇ ಸರಕಾರಿ ಆಸ್ಪತ್ರೆಗಳಲ್ಲಿ ಅವಕಾಶ ಇರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ರೋಗಿಗಳು ಪರದಾಟ ನಡೆಸುತ್ತಿದ್ದಾರೆ.

7 ವೇತನದ ವರದಿ ಜಾರಿಗೆ ಅಗ್ರಹಿಸಿ ರಾಜ್ಯ ಸರಕಾರಿ ನೌಕರರ ಸಂಘ ಇಂದಿನಿಂದ ಮುಷ್ಕರ ಪ್ರಾರಂಭಿಸಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಭರವಸೆ ನೀಡಿದ್ದರೂ ಕೂಡ ಸರಕಾರಿ ನೌಕರರು ತಮ್ಮ ನಿರ್ಧಾರವನ್ನ ಹಿಂಪಡೆದಿಲ್ಲ. ನಿನ್ನೆ ಮಧ್ಯಾಹ್ನದಿಂದಲೇ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಂಧಾನ ಸಭೆ ನಡೆದಿದ್ದರೂ ಕೂಡ ಸಂದಾಯ ಯಶಸ್ವಿಯಾಗಿಲ್ಲ. ಅಲ್ಲದೇ ಸಂಜೆಯ ತುರ್ತು ಸಭೆಯೂ ಕೂಡ ಫಲಕೊಡಲಿಲ್ಲ. ಇಂದಿನಿಂದ ಸರಕಾರಿ ನೌಕರರು ಬಂದ್ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಸೇವೆಗಳು ಸಂಪೂರ್ಣ ಬಂದ್ ಆಗಲಿವೆ.

ದೇಶದಲ್ಲಿನ ಐದು ರಾಜ್ಯಗಳು ಈಗಾಗಲೇ ಎನ್‌ಪಿಎಸ್‌ ರದ್ದು ಮಾಡಿ ಒಪಿಎಸ್‌ ಜಾರಿ ಮಾಡಿದೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲಿಯೂ ಕೂಡ ಹಳೆ ಪಿಂಚಣಿ ಪದ್ದತಿಯನ್ನು ಜಾರಿಗೆ ತರಬೇಕು ಎಂದು ಸರಕಾರಿ ನೌಕರರು ಆಗ್ರಹಿಸುತ್ತಿದ್ದಾರೆ. ಆದರೆ ಈ ಕುರಿತು ಇದುವರೆಗೂ ಯಾವುದೇ ಚರ್ಚೆಗಳು ನಡೆದಿಲ್ಲ. ರಾಜ್ಯ ಸರಕಾರ ಕೂಡ ಹೊಸ ಪಿಂಚಣಿ ಪದ್ದತಿಯನ್ನು ರದ್ದು ಮಾಡಲು ಮನಸ್ಸು ಮಾಡುತ್ತಿಲ್ಲ. ಯಾವುದೇ ಕಾರಣಕ್ಕೂ ನಾವು ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಸರಕಾರಿ ನೌಕರರು ಪಟ್ಟು ಹಿಡಿದಿದ್ದಾರೆ.

ಈ ಬಾರಿ ಮಂಡಿಸಿದ ಬಜೆಟ್‌ ನಲ್ಲಿ ಸರಕಾರಿ ನೌಕರರ ವೇತನ ಪರಿಷ್ಕರಣೆ, ಏಳನೇ ವೇತನ ಆಯೋಗದ ವರದಿ ಜಾರಿ, ಹಳೆ ಪಿಂಚಣಿ ಜಾರಿಯ ಕುರಿತು ಯಾವುದೇ ಘೋಷಣೆಯನ್ನು ರಾಜ್ಯ ಸರಕಾರ ಮಾಡದೇ ಇರುವುದು ಸರಕಾರಿ ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.ನೌಕರರ ಸಂಘ ಕರೆ ನೀಡಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಗ್ರಾಮ ಪಂಚಾಯತಿ ಸಿಬ್ಭಂದಿ, ನಗರ ಸ್ಥಳೀಯ ಸಂಸ್ಥೆಗಳು, ಬಿಬಿಎಂಪಿ ಕಾಯಂ ಪೌರ ಕಾರ್ಮಿಕರು, ಉಪ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿಗಳು ಈ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.

ಕರ್ನಾಟಕ ಸಚಿವಾಲಯ ನೌಕರರ ಸಂಘ, ವಿವಿಧ ನಿಗಮ ಮಂಡಳಿಗಳ ನೌಕರರು, ಅರಣ್ಯ ಇಲಾಖೆ ನೌಕರರು ಭಾಗವಹಿಸುತ್ತಿದ್ದು, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಸರಕಾರಿ ವೈದ್ಯಾಧಿಕಾರಿಗಳ ಸಂಘ, ಪೌರ ಕಾರ್ಮಿಕರು ಹೀಗೆ ವಿವಿಧ ನೌಕರರು ಸಂಘಗಳು ಸೇರಿ ಸುಮಾರು ನಲವತ್ತಕ್ಕು ಹೆಚ್ಚು ಸಂಘಟನೆಗಳು ಈ ಮುಷ್ಕರಕ್ಕೆ ಬೆಂಬಲವನ್ನು ನೀಡಿದೆ. ಸುಮಾರು ಹತ್ತು ಲಕ್ಷ ನೌಕರರು ಈ ಮುಷ್ಕರದಲ್ಲಿ ಭಾಗಿಯಾಗಲಿದ್ದು, ಜನಸಾಮಾನ್ಯರಿಗೆ ಸರಕಾರಿ ಸೇವೆಗಳು ಲಭ್ಯವಿರುವುದಿಲ್ಲ.

ಶಾಲೆ- ಕಾಲೇಜುಗಳು ಬಂದ್
ಇನ್ನೂ ರಾಜ್ಯ ಸರಕಾರಿ ಶಾಲಾ-ಕಾಲೇಜು ಸಂಘದ ಅಧ್ಯಕ್ಷ ಶಂಭುಲಿಂಗ ಗೌಡ ಸಹ ಮುಷ್ಕರಕ್ಕೆ ಬೆಂಬಲ ಘೋಷಿಸಿದ್ದು, ಮುಷ್ಕರ ಕೊನೆಗೊಳ್ಳುವವರೆಗೂ ಶಾಲಾ ಕಾಲೇಜುಗಳು ಕೂಡ ಬಂದ್‌ ಆಗಿರಲಿವೆ. ಇಂದಿನಿಂದಲೇ ಮಕ್ಕಳಿಗೆ ಶಿಕ್ಷಕರು ರಜೆಯನ್ನು ಘೋಷಣೆ ಮಾಡಿದ್ದಾರೆ. ಹೀಗಾಗಿ ರಾಜ್ಯದಲ್ಲಿನ ಬಹುತೇಕ ಸರಕಾರಿ ಶಾಲೆಗಳಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.

ಪರೀಕ್ಷೆಗಳು ಮುಂದೂಡಿಕೆ
ಎಸ್ಎಸ್ಎಲ್ ಸಿ ಪೂರ್ವತಯಾರಿ ಪರೀಕ್ಷೆಗಳು ನಡೆಯುತ್ತಿದ್ದು, ಸರಕಾರಿ ನೌಕರರ ಬಂದ್ ಹಿನ್ನೆಲೆಯಲ್ಲಿ ಪರೀಕ್ಷೆಗಳು ಮುಂದೂಡಿಕೆ ಮಾಡಲಾಗಿದೆ. ಮಂಗಳೂರು ವಿವಿ ಕೂಡ ಪದವಿ ಪರೀಕ್ಷೆಗಳು ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದೆ.

ಇದನ್ನೂ ಓದಿ : Strike of government employees: ಸರಕಾರಿ ನೌಕರರ ಅನಿರ್ದಿಷ್ಟಾವದಿ ಮುಷ್ಕರ ಹಿನ್ನಲೆ ಇಂದು ಸಂಜೆ ತುರ್ತು ಸಭೆ

ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಅವಕಾಶ
ಸರಕಾರಿ ಆಸ್ಪತ್ರೆಗಳಿಗೂ ಸರಕಾರಿ ನೌಕರರ ಮುಷ್ಕರದ ಬಿಸಿ ತಟ್ಟಿದೆ. ರಾಜ್ಯದಲ್ಲಿನ ಸರಕಾರಿ ಆಸ್ಪತ್ರೆಗಳಲ್ಲಿ ತುರ್ತು ಸೇವೆಯನ್ನು ಹೊರತು ಪಡಿಸಿ ಉಳಿದ ಯಾವುದೇ ಸೇವೆಗಳು ಲಭ್ಯ ಇರುವುದಿಲ್ಲ. ಇದರಿಂದಾಗಿ ಆಸ್ಪತ್ರೆಗಳಲ್ಲಿ ರೋಗಿಗಳು ಚಿಕಿತ್ಸೆಗಾಗು ಪರದಾಟ ನಡೆಸುತ್ತಿದ್ದಾರೆ. ಸರಕಾರಿ ಆಸ್ಪತ್ರೆಗಳನ್ನೇ ನೆಚ್ಚಿಕೊಂಡಿರುವ ಜಿಲ್ಲೆಗಳಲ್ಲಿನ ಜನರ ಸ್ಥಿತಿ ಹೇಳ ತೀರದಾಗಿದೆ.

Govt employees strike: Govt employees strike: School, govt services shut, patients rush for treatment

Comments are closed.