BBK9 Grand Finale : ಗೆಲುವಿನ ಅಂಚಿನಲ್ಲಿ ಎಡವಿದ ರಾಕೇಶ್‌ ಅಡಿಗ ಗೆದ್ದ ಹಣವೆಷ್ಟು ಗೊತ್ತಾ ?

ಕಲರ್ಸ್‌ ಕನ್ನಡದಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್‌ 9 (BBK9 Grand Finale)ಹೊಸವರ್ಷದ ರಾತ್ರಿ ಅಂದು ಅದ್ಧೂರಿಯಾಗಿ ಮುಗಿದಿದೆ. ಮೊದಲ ಬಿಗ್‌ಬಾಸ್‌ ಒಟಿಟಿ ಸೀಸನ್‌ನಲ್ಲಿ ಅದ್ಭುತವಾಗಿ ಆಟ ಆಡಿ ಚಾಂಪಿಯನ್ ಎನಿಸಿಕೊಂಡಿದ್ದ ರೂಪೇಶ್ ಶೆಟ್ಟಿಯವರೇ ಬಿಗ್‌ಬಾಸ್ ಸೀನಸ್ 9ರ ವಿನ್ನರ್ ಆಗಿದ್ದಾರೆ. ಬಿಗ್‌ಬಾಸ್‌ ಒಟಿಟಿಯಲ್ಲಿಯೂ ಅದ್ಭುತವಾಗಿ ಆಡಿದ್ದ ರಾಕೇಶ್ ಅಡಿಗ ಬಿಗ್‌ಬಾಸ್ ಕನ್ನಡ ಸೀಸನ್ 9 ರಲ್ಲಿ ಚೆನ್ನಾಗಿ ಆಡಿ ರನ್ನರ್ ಅಪ್ ಆಗಿದ್ದಾರೆ. ಹಲವು ಮಂದಿ ಸ್ವತಃ ರಾಕೇಶ್ ಅಡಿಗ ಅವರೇ ಗೆಲ್ಲುತ್ತಾರೆ ಎಂದುಕೊಂಡಿದ್ದರು ಆದರೆ ಅದು ಸುಳ್ಳಾಗಿದೆ.

ನೂರು ದಿನದಲ್ಲಿ ಕೇವಲ ಒಂದು ಬಾರಿಯಷ್ಟೆ ಮನೆಯವರಿಂದ ನಾಮಿನೇಟ್ ಆಗಿದ್ದ ರಾಕೇಶ್ ಅಡಿಗ ಅವರೇ ಬಿಗ್‌ಬಾಸ್ ಗೆಲ್ಲುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸುಳ್ಳಾಗಿ ರೂಪೇಶ್ ಶೆಟ್ಟಿ ಗೆದ್ದಿದ್ದಾರೆ. ಬಿಗ್‌ಬಾಸ್‌ ವಿನ್ನರ್‌ ಆಗಿರುವ ರೂಪೇಶ್‌ ಶೆಟ್ಟಿಗೆ 60 ಲಕ್ಷ ರುಪಾಯಿ ಬಹುಮಾನ ನೀಡಲಾಗಿದೆ. ಆದರೆ ರನ್ನರ್ ಅಪ್ ಆದ ರಾಕೇಶ್ ಅಡಿಗಗೂ ಬಹುಮಾನ ನೀಡಿದ್ದು, ರೂಪೇಶ್ ಶೆಟ್ಟಿಯಷ್ಟು ಅಲ್ಲದಿದ್ದರೂ ಸಮಾಧಾನಕರವಾದ ಬಹುಮಾನ ರಾಕೇಶ್‌ಗೆ ಲಭಿಸಿದೆ.

ರಾಕೇಶ್ ಅಡಿಗಗೆ ಬಿಗ್‌ಬಾಸ್ ಆಯೋಜಕರ ಕಡೆಯಿಂದ ಏಳು ಲಕ್ಷ ರುಪಾಯಿ ಬಹುಮಾನ ಲಭಿಸಿದೆ. ಅದಾದ ಬಳಿಕ ಫಿನೊಲೆಕ್ಸ್‌ ಅತ್ಯುತ್ತಮ ನಾಯಕ ಪ್ರಶಸ್ತಿ ಸಹ ರಾಕೇಶ್ ಅಡಿಗ ಪಾಲಾಗಿದ್ದು, ಫಿನೋಲೆಕ್ಸ್‌ನವರು ಐದು ಲಕ್ಷ ರುಪಾಯಿ ಬಹುಮಾನವನ್ನು ರಾಕೇಶ್ ಅಡಿಗಗೆ ನೀಡಿದ್ದಾರೆ.ಇನ್ನು ಮೂರನೇ ಸ್ಥಾನ ಪಡೆದ ದೀಪಿಕಾ ದಾಸ್‌ಗೆ ಐದು ಲಕ್ಷ ರೂಪಾಯಿ ಬಹುಮಾನ ನೀಡಲಾಯಿತು.

ಇದನ್ನೂ ಓದಿ : BBK9 Grand Finale : ಬಿಗ್ ಬಾಸ್ ಸೀಸನ್ 9 ಅನ್ನು ಗೆದ್ದ ರೂಪೇಶ್ ಶೆಟ್ಟಿ ಗಳಿಸಿದ ಹಣವೆಷ್ಟು ಗೊತ್ತಾ ?

ಇದನ್ನೂ ಓದಿ : Kannada Bigg Boss Season 9 : ಕನ್ನಡ ಬಿಗ್‌ಬಾಸ್‌ ಸೀಸನ್‌ 9 ಗ್ಯ್ರಾಂಡ್‌ ಫಿನಾಲೆ : ಯಾರಾಗ್ತಾರೆ ವಿನ್ನರ್‌ ?

ಇದನ್ನೂ ಓದಿ : Tunisha Sharma death case : ಶೀಜಾನ್ ಖಾನ್ 14 ದಿನಗಳ ನ್ಯಾಯಾಂಗ ಬಂಧನ : ಖಾನ್‌ ಷರತ್ತುಗಳು ಏನು ಗೊತ್ತಾ ?

ನಾಲ್ಕನೇ ಸ್ಥಾನ ಪಡೆದ ರೂಪೇಶ್ ರಾಜಣ್ಣ ಅವರಿಗೆ ಮೂರು ಲಕ್ಷ ರುಪಾಯಿ ಬಹುಮಾನ ದೊರಕಿತು. ರಾಕೇಶ್ ಅಡಿಗ, ಒಟಿಟಿ ಸೀಸನ್‌ನಲ್ಲಿಯೇ ಗೆಲ್ಲಬೇಕಿತ್ತು. ಆದರೆ ಅಲ್ಲಿಯೂ ಕೊನೆಗೆ ಬಂದು ಎಡವಿದರು. ಅಲ್ಲಿ ಚಾಂಪಿಯನ್ ಪಟ್ಟ ರೂಪೇಶ್ ಶೆಟ್ಟಿ ಪಾಲಾಗಿ ಅವರಿಗೆ ಐದು ಲಕ್ಷ ರುಪಾಯಿ ಬಹುಮಾನ ದೊರಕಿತು. ರಾಕೇಶ್ ಅಡಿಗ ಟಿವಿ ಸೀಸನ್‌ನಲ್ಲಿ ಅರಂಭದಿಂದಲೂ ಬಹಳ ಚೆನ್ನಾಗಿ ಆಡಿದರು. ಮನೆಯವರಿಂದ ಕೇವಲ ಒಂದು ಬಾರಿ ಮಾತ್ರ ನಾಮಿನೇಟ್ ಆಗಿದ್ದರು. ಈ ಬಾರಿ ರಾಕೇಶ್ ಅವರೇ ಗೆಲ್ಲುತ್ತಾರೆ ಎನ್ನಲಾಗಿತ್ತು ಆದರೆ ಗೆದ್ದಿದ್ದು ರೂಪೇಶ್ ಶೆಟ್ಟಿ. ಹಾಗಾಗಿ ಇಲ್ಲೂ ಕೂಡ ರಾಕೇಶ್‌ ಅಡಿಗ ಎಡವಿದಂತಾಗಿದೆ.

BBK9 Grand Finale: Do you know how much money Rakesh Adiga won?

Comments are closed.