Guwahati Fire accident: ಭೀಕರ ಅಗ್ನಿ ಅವಘಡ: 100ಕ್ಕೂ ಹೆಚ್ಚು ಮನೆಗಳು ಬೆಂಕಿಗೆ ಆಹುತಿ

ಗುವಾಹಟಿ: (Guwahati Fire accident) ನಗರದ ಹಟಿಗಾಂವ್‌ ಚರಿಯಾಲಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 100ಕ್ಕೂ ಹೆಚ್ಚು ಮನೆಗಳು ಬೆಂಕಿಗೆ ಆಹುತಿಯಾಗಿವೆ. ಪರಿಣಾಮ ಕೋಟ್ಯಾಂತರ ರೂ. ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಬೆಂಕಿ ಆಹುತಿಗೆ ನಿಖರ ಕಾರಣಗಳು ಏನೆಂಬುದು ಇನ್ನೂ ತಿಳಿದುಬಂದಿಲ್ಲ.

ಹಟಿಗಾಂವ್‌ ನ ಅಜಂತಾ ರಸ್ತೆಯ ರಿಜು ಅಲಿ ಎನ್ನುವವರ ಬಾಡಿಕೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಬೆಂಕಿಯ ಜ್ವಾಲೆಯು ಇಡೀ ಪ್ರದೇಶವನ್ನು ಅವರಿಸಿದೆ. ಆದರೆ ಬೆಂಕಿ ಅನಾಹುತಕ್ಕೆ ನಿಖರ ಕಾರಣಗಳು ಏನೆಂಬುದು ತಿಳಿದುಬಂದಿಲ್ಲ. ಆದರೆ ಬಾಡಿಗೆ ಮನೆಯಲ್ಲಿ ಸಿಲಿಂಡರ್‌ ಸ್ಫೋಟದಿಂದ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸುಮಾರು ಹದಿನೈದು ಸಿಲಿಂಡರ್‌ ಗಳು ಸ್ಫೋಟಗೊಂಡಿವೆ. ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿವೆ. ಇನ್ನೂ ಬೆಂಕಿ ಅವಘಡದಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳದ ಹದಿನೈದು ವಾಹನಗಳು ಸ್ಥಳಕ್ಕೆ ಧಾವಿಸಿವೆ. ಹಲವು ಗಂಟೆಗಳ ಕಾರ್ಯಾಚರಣೆಯ ನಂತರ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳದಿಂದ ನೂರಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ಯಾವುದೇ ಸಾವು ನೋವುಗಳು ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಗುವಾಹಟಿ ಪೊಲೀಸ್‌ ಉಪ ಅಯುಕ್ತ ಸೂರಜಿತ್‌ ಸಿಂಗ್‌ ಪನೇಸರ್‌ ಸ್ಥಳಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅವಘಡದಲ್ಲಿ ನಾಶವಾದ ಬಹುತೇಕ ಮನೆಗಳು ಹುಲ್ಲಿನ ಮನೆಗಳಾಗಿವೆ. ಎಲ್ಲಾ ಮನೆಗಳು ರಿಜು ಅಲಿ ಎನ್ನುವವರಿಗೆ ಸೇರಿದ್ದಾಗಿದ್ದು, ದಿನಗೂಲಿ ಕಾರ್ಮಿಕರು ಇಲ್ಲಿ ಬಾಡಿಗೆದಾರರು ವಾಸವಿದ್ದರು. ಬೆಂಕಿ ಕಾಣಿಸಿಕೊಂಡ ತಕ್ಷಣ ಇಡೀ ಪ್ರದೇಶವನ್ನು ದಟ್ಟವಾದ ಹೊಗೆ ಆವರಿಸಿತ್ತು.

ಇದನ್ನೂ ಓದಿ : Murder mystery: 11 ವರ್ಷದ ಬಾಲಕಿಯ ಕೊಲೆ ರಹಸ್ಯ ಭೇದಿಸಲು ಸಹಾಯವಾಯ್ತು ಆ ಒಂದು ಮಿಸ್ಡ್ ಕಾಲ್

ಇದನ್ನೂ ಓದಿ : Lorry Car Major Accident: ಕಾರು, ಲಾರಿ ನಡುವೆ ಭೀಕರ ಅಪಘಾತ: 5 ಮಂದಿ ಸ್ಥಳದಲ್ಲೇ ಸಾವು, 3 ಮಂದಿಗೆ ಗಂಭೀರ ಗಾಯ

ಇದನ್ನೂ ಓದಿ : Truck-pickup accident: ಟ್ರಕ್‌ಗೆ ಪಿಕಪ್ ವಾಹನ ಢಿಕ್ಕಿ: 11 ಮಂದಿ ಸಾವು, ಹಲವರಿಗೆ ಗಾಯ

Guwahati Fire accident: Fierce fire accident: More than 100 houses burnt down

Comments are closed.