Hanged the dog: ನಾಯಿಯನ್ನು ನೇಣು ಹಾಕಿ ಕ್ರೌರ್ಯ ಮೆರೆದ ದುಷ್ಕರ್ಮಿಗಳು

ಗಾಜಿಯಾಬಾದ್‌: (Hanged the dog) ಮೂವರು ಪುರುಷರು ನಾಯಿಯನ್ನು ನೇಣು ಬಿಗಿದು ಸಾಯಿಸುತ್ತಿರುವ ಹೃದಯವಿದ್ರಾವಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಗಾಜಿಯಾಬಾದ್‌ನ ಲೋನಿ ಬಳಿಯ ಎಲೈಚಿಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಒಂದು ನಾಯಿಯ ಕುತ್ತಿಗೆಗೆ ಹಗ್ಗವನ್ನು ಬಿಗಿದು(Hanged the dog) ನೇತುಹಾಕುತ್ತಿರುವುದನ್ನು ನಾವು ವೀಡಿಯೋದಲ್ಲಿ ನೋಡಬಹುದು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಗಾಜಿಯಾಬಾದ್‌ನ ಲೋನಿ ಬಳಿಯ ಎಲೈಚಿಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ವಿಡಿಯೋ ಮೂರು ತಿಂಗಳ ಹಳೆಯದಾಗಿದೆ. ಈ ರೀತಿಯ ಹೃದಯ ವಿದ್ರಾವಕ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ವಿಚಾರಣೆಗೆ ಕರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೋ ಕ್ಲಿಪ್‌ನಲ್ಲಿ, ಇಬ್ಬರು ಪುರುಷರು ನಾಯಿಯನ್ನು ಲೋಹದ ಸರಪಳಿಯಿಂದ ಕುತ್ತಿಗೆಯನ್ನು ಕಟ್ಟಿ ಗೋಡೆಗೆ ನೇತುಹಾಕುತ್ತಿರುವುದನ್ನು ಕಾಣಬಹುದು. ನಂತರ ಅವರಲ್ಲಿ ಒಬ್ಬ ಸರಪಳಿಯನ್ನು ಎಳೆಯುತ್ತಾರೆ, ಈ ರೀತಿಯಾಗಿ ನಾಯಿಗೆ ಚಿತ್ರಹಿಂಸೆಯನ್ನು ನೀಡಿ ಆ ನಾಯಿಯನ್ನು ಸಾಯಿಸುತ್ತಾರೆ.

ಸಾಕು ನಾಯಿ ಅಥವಾ ಬೆಕ್ಕು ಯಾರಿಗಾದರೂ ದಾಳಿ ಮಾಡಿದರೆ ಮಾಲೀಕರು 10,000 ರೂಪಾಯಿ ದಂಡ ವಿಧಿಸಬೇಕು ಎಂದು ನೋಯ್ಡಾ ಪ್ರಾಧಿಕಾರ ಸೂಚನೆ ಹೊರಡಿಸಿತ್ತು. ಇದಾದ ಒಂದು ದಿನದ ನಂತರ ಈ ವೀಡಿಯೊ ಹೊರಬಿದ್ದಿದೆ. ಇದಲ್ಲದೆ ತಮ್ಮ ಸಾಕುಪ್ರಾಣಿಗಳಿಂದ ಉಂಟಾದ ಗಾಯದ ಚಿಕಿತ್ಸೆಗಾಗಿ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಪಾವತಿಸಲು ಮಾಲೀಕರೇ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಹೇಳಲಾಗಿತ್ತು.

ಇದನ್ನೂ ಓದಿ : Murder Case : ದೇಶವನ್ನೇ ಬೆಚ್ಚಿಬೀಳಿಸಿದ ಶ್ರದ್ಧಾ ಕೊಲೆ ಪ್ರಕರಣ: ಮರಣದಂಡನೆ ವಿಧಿಸಲು ತಂದೆ ಅಗ್ರಹ

ಇದನ್ನೂ ಓದಿ : Crime News: ಗುದನಾಳಕ್ಕೆ ಏರ್‌ ಕಂಪ್ರೆಸ್ಸರ್‌ ಪೈಪ್‌ ತುರುಕಿದ ಸಹ ಉದ್ಯೋಗಿ; ಕಾರ್ಮಿಕ ಸಾವು

ಸಾಕುಪ್ರಾಣಿಗಳ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ನೀತಿಯನ್ನು ರೂಪಿಸಲಾಗಿದೆ. ಕಳೆದ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ನೋಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ಏಳು ತಿಂಗಳ ಹಸುಳೆಯನ್ನು ಬೀದಿ ನಾಯಿ ಕೊಂದು ಹಾಕಿತ್ತು. ಗಾಯಗಳಿಂದ ಬಳಲುತ್ತಿದ್ದ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸೆಕ್ಟರ್ 100ರ ಲೋಟಸ್ ಬುಲೆವಾರ್ಡ್ ಸೊಸೈಟಿಯ ಆವರಣದಲ್ಲಿ ಈ ಘಟನೆ ನಡೆದಿತ್ತು.

ನಾಯಿ ಕಡಿತದ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಗಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನಿವಾಸಿಗಳು ಉಗ್ರವಾದ ಪಿಟ್‌ಬುಲ್, ರಾಟ್‌ವೀಲರ್ ಮತ್ತು ಡೋಗೊ ಅರ್ಜೆಂಟಿನೋ ತಳಿಗಳನ್ನು ಸಾಕುಪ್ರಾಣಿಗಳಾಗಿ ಸಾಕುವುದನ್ನು ನಿಷೇಧಿಸಿದೆ.

(Hanged the dog) A heartbreaking video of three men hanging a dog to death is circulating on social media. The incident took place in Elaichipura area near Loni in Ghaziabad.

Comments are closed.