Aamir Khan: ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡ ಅಮೀರ್ ಖಾನ್; ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋಲೇ ಈ ನಿರ್ಧಾರಕ್ಕೆ ಕಾರಣವಾಯ್ತಾ..?

ಮುಂಬೈ: ಲಾಲ್ ಸಿಂಗ್ ಚಡ್ಡಾ ಸಿನಿಮಾದ ಬಳಿಕ ಅಮೀರ್ ಖಾನ್ (Aamir khan) ಮುಂದಿನ ಸಿನಿಮಾಕ್ಕಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ನಿರಾಸೆ ಕಾದಿದೆ. ಅದೇನಂದ್ರೆ ಅಮೀರ್ ಖಾನ್ ಕೆಲ ಸಮಯ ತಾನು ನಟನೆಯಿಂದ ದೂರ ಉಳಿಯುವುದಾಗಿ (Aamir Khan goodbye to acting ) ತಿಳಿಸಿದ್ದಾರೆ.

ಇತ್ತೀಚೆಗೆ ಅಮೀರ್ ಖಾನ್ ಅವರು ತಮ್ಮ ವೃತ್ತಿಬದುಕಿನಲ್ಲಿ ಒಂದರ ಮೇಲೊಂದು ಸೋಲನ್ನೇ ಕಾಣುತ್ತಿದ್ದಾರೆ. ಅವರ ಯಾವುದೇ ಸಿನಿಮಾಗಳೂ ಸಕ್ಸಸ್ ಕಾಣುತ್ತಿಲ್ಲ. ಈ ಹಿಂದೆ ರಿಲೀಸ್ ಆಗಿದ್ದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮೇಲೆ ಅವರು ಸಾಕಷ್ಟು ಭರವಸೆಯನ್ನು ಇಟ್ಟುಕೊಂಡಿದ್ದರು. ಆದರೆ ಬಾಯ್ಕಾಟ್ ಬಿಸಿ ಈ ಸಿನಿಮಾವನ್ನು ಮಕಾಡೆ ಮಲಗಿಸಿದೆ. ಅಷ್ಟೇ ಅಲ್ಲದೇ ಈ ಹಿಂದೆ ಅಮೀರ್ ಖಾನ್ ಅವರು ಆಡಿದ್ದ ದೇಶ ವಿರೋಧಿ ಮಾತುಗಳು ವೈಯಕ್ತಿಕ ಅಲ್ಲದೇ ವೃತ್ತಿಜೀವನದಲ್ಲೂ ಕಪ್ಪುಚುಕ್ಕೆಯಾಗಿ ಸೋಲಿಗೆ ಕಾರಣವಾಗುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಅಮೀರ್ ಖಾನ್ ವಿರುದ್ಧ ಜನರು ದ್ವೇಷ ಕಾರುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ಅಮೀರ್ ಖಾನ್ ಕಂಗೆಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Murder Case : ದೇಶವನ್ನೇ ಬೆಚ್ಚಿಬೀಳಿಸಿದ ಶ್ರದ್ಧಾ ಕೊಲೆ ಪ್ರಕರಣ: ಮರಣದಂಡನೆ ವಿಧಿಸಲು ತಂದೆ ಅಗ್ರಹ

ಲಾಲ್ ಸಿಂಗ್ ಚಡ್ಡಾ ಸಿನಿಮಾದ ಸೋಲು ಅಮೀರ್ ಖಾನ್ ನಿದ್ದೆಗಡಿಸಿದೆಯಂತೆ.ಈ ಸಿನಿಮಾ ಅದ್ಭುತ ಯಶಸ್ಸು ಗಳಿಸುತ್ತೆ ಅಂತಾನೇ ಅವರು ನಂಬಿದ್ದರು. ನಿರೀಕ್ಷೆಯಂತೆ ಸಿನಿಮಾ ರಿಲೀಸ್ ಗೂ ಮುನ್ನ ಭಾರೀ ಸದ್ದು ಮಾಡಿತ್ತು. ಟೀಸರ್ ಗೂ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ರಿಲೀಸ್ ಆದ ಬಳಿಕ ಬಹಿಷ್ಕಾರದ ಬಿಸಿಯಿಂದಾಗಿ ಸೋತು ಹೋಯಿತು.

ಇದನ್ನೂ ಓದಿ: Hanged the dog: ನಾಯಿಯನ್ನು ನೇಣು ಹಾಕಿ ಕ್ರೌರ್ಯ ಮೆರೆದ ದುಷ್ಕರ್ಮಿಗಳು

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅಮೀರ್ ಖಾನ್, ನಟನೆಯಲ್ಲಿ ತಾನು ತೊಡಗಿದಾಗ ಬೇರೇನೂ ತೋಚುವುದಿಲ್ಲ, ಅದರಲ್ಲೇ ಕಳೆದುಹೋಗುತ್ತೇನೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ಆದ ಬಳಿಕ ಚಾಂಪಿಯನ್ಸ್ ಸಿನಿಮಾ ಮಾಡಬೇಕೆಂದುಕೊಂಡಿದ್ದೆ. ಆ ಸಿನಿಮಾ ಅದ್ಭುತ, ಹೃದಯಸ್ಪರ್ಶಿ ಪ್ರೇಮ ಕಥೆಯನ್ನೊಳಗೊಂಡಿತ್ತು. ಅದನ್ನು ನಾನೇ ನಿರ್ಮಿಸಿ ನಟಿಸಬೇಕೆಂದುಕೊಂಡಿದ್ದೆ. ಆದರೆ ಇದೀಗ ನನ್ನ ನಿರ್ಧಾರ ಬದಲಾಗಿದೆ. ನಟನೆಯಿಂದ ಕೆಲ ಕಾಲ ದೂರ ಉಳಿದು ಕುಟುಂಬದ ಕೊತೆ ಕಾಲ ಕಳೆಯಬೇಕು ಎಂದುಕೊಂಡಿದ್ದೇನೆ. ಮುಂದಿನ ಒಂದರಿಂದ ಒಂದೂವರೆ ವರ್ಷ ಚಿತ್ರರಂಗದಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಳ್ಳಲಿದ್ದೇನೆ ಎಂದು ಅಮೀರ್ ಖಾನ್ ತಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಮಿಸ್ಟರ್ ಪರ್ಫೆಕ್ಟ್ ಎಂದೇ ಗುರುತಿಸಿಕೊಂಡಿರುವ ಅಮೀರ್ ಖಾನ್ ಅವರ ನಿರ್ಧಾರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

Aamir Khan goodbye to acting Lal Singh Chadha’s movie failure is the reason for this decision?

Comments are closed.