ಮರವಂತೆ : ಭಾರೀ ಗಾಳಿ, ಮಳೆಯಿಂದ ಅಪಾರ ನಷ್ಟ

ಕುಂದಾಪುರ : ಕುಂದಾಪುರದ ಮರವಂತೆ ಗ್ರಾಮದಲ್ಲಿ ನಿನ್ನೆ ತಡರಾತ್ರಿ ವೇಳೆ ಬೀಸಿದ ಬಿರುಗಾಳಿ ಮತ್ತು ಮಳೆಯಿಂದಾಗಿ (Heavy rains cause huge losses) ಅಪಾರ ನಷ್ಟ ಸಂಭವಿಸಿದೆ. ಅಂಚೆಕಟ್ಟೆ ಎಂಬಲ್ಲಿ ವಿಶ್ವನಾಥ ಶಾನುಭೋಗ್‌ ಅವರಮನೆಯ ಮೇಲೆ ಮೂರು ತೆಂಗಿನ ಮರಗಳು ಉರುಳಿದ ಕಾರಣ ಮನೆಯ ಹಂಚಿನ ಮಾಡು ಜಖಂಗೊಂಡಿದ್ದು, ಸುಮಾರು ರೂ. 1.5 ಲಕ್ಷದಷ್ಟು ನಷ್ಟವಾಗಿದೆ ಎಂದು ವರದಿ ಆಗಿದೆ.

ಮನೆಯ ಜಗಲಿಯಲ್ಲಿ ಮಲಗಿದ್ದ ವಿಶ್ವನಾಥ ಶಾನುಭೋಗ್‌ ಅವರ ತಲೆಯ ಮೇಲೆ ಹಂಚಿನ ತುಂಡುಗಳು ಬಿದ್ದ ಪರಿಣಾಮವಾಗಿ ಗಾಯಗಳಾಗಿವೆ. ಸಮೀಪದ ಅನಂತ ಶೆಣೈ ಅವರು ಮನೆಯ ಬಳಿಯ ಒಂದು ತೆಂಗಿನ ಮರ ಉರುಳಿದೆ. ಆನಂದ ಖಾರ್ವಿ ಅವರ ತೋಟದ ತೆಂಗಿನ ಮರ ಉರುಳಿ, ಸನಿಹದ ವಿದ್ಯುತ್‌ ಕಂಬ ತುಂಡಾಗಿದೆ. ಹಲವಾರು ಮನೆಗಳ ತೋಟಗಳಲ್ಲಿ ಬೆಳೆದಿದ್ದ ಬಾಳೆ ಮರಗಳು ಮುರಿದು ಬಿದ್ದಿವೆ.

ಇದನ್ನೂ ಓದಿ : ಒಂದೇ ಗ್ರಾಮದ ನಾಲ್ವರು ಮಕ್ಕಳು ನಾಪತ್ತೆ : ದೂರು ದಾಖಲು

ಇದನ್ನೂ ಓದಿ : ಪ್ರಯಾಣಿಕರಿಗಾಗಿ 1 ಕಿ.ಮೀ. ಹಿಮ್ಮುಖ ಚಲಿಸಿದ ರೈಲು

ಹಾನಿಗೊಳಗಾದ ಸ್ಥಳಗಳಿಗೆ ಗ್ರಾಮ ಲೆಕ್ಕಾಧಿಕಾರಿ ಸಂದೀಪ್‌ ಭೇಟಿ ನೀಡಿ ಪರಿಶೀಲಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಕಳೆದ ಎರಡು ವಾರದಿಂದ ಕರಾವಳಿ ಬಿಸಿನಿಂದ ಕೂಡಿದ್ದ ವಾತಾವರಣವಿದ್ದು, ನಿನ್ನೆ ಹಲವು ಕಡೆ ಮಳೆ ಸುರಿದಿರುತ್ತದೆ. ಇದ್ದರಿಂದ ಹಲವೆಡೆ ನಷ್ಟಗಳು ಸಂಭವಿಸಿದೆ.

ಸಿಲಿಕಾನ್‌ ಸಿಟಿಯಲ್ಲಿ ವರುಣ ಆರ್ಭಟಕ್ಕೆ ಮತ್ತೊಂದು ಬಲಿ

ಬೆಂಗಳೂರು : ಬೆಂಗಳೂರು ನಗರದಲ್ಲಿ (Heavy rainfall in Bangalore) ವರುಣನ ಆರ್ಭಟಕ್ಕೆ ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಆಗಿದೆ. ನಿನ್ನೆ ಸುರಿದ ಧಾರಾಕಾರ ಮಳೆಗೆ ಸಿಲಿಕಾನ್‌ ಸಿಟಿಯಲ್ಲಿ ಯುವಕನೊಬ್ಬ ರಾಜಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾನೆ ಎಂದು ವರದಿ ಆಗಿದೆ. ಇನ್ನೊಂದು ಕಡೆ ಅಂಡರ್‌ಪಾಸ್‌ನಲ್ಲಿ ಮಳೆ ನೀರು ತುಂಬಿದ್ದರಿಂದ ಕಾರೊಂದು ಸಿಕ್ಕಿ ಬಿದ್ದಿದ್ದು, ಓರ್ವ ಯುವತಿ ಮೃತ ಪಟ್ಟಿದ್ದಾಳೆ. ಅದೇ ಕಾರಿನಲ್ಲಿ ಉಳಿದ ನಾಲ್ವರನ್ನು ರಕ್ಷಣೆ ಮಾಡಲಾಗಿದೆ.

ಮೃತ ಯುವಕ ಲೋಕೇಶ್‌ (27 ವರ್ಷ) ಎಂದು ಗುರುತಿಸಲಾಗಿದೆ. ಜೋರಾಗಿ ಬಂದ ಮಳೆಯಿಂದಾಗಿ ಕೆಪಿ ಅಗ್ರಹಾರದ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಲೋಕೇಶ್‌ನ ಮೃತದೇಹ ಇಂದು ಬ್ಯಾಟರಾಯನಪೂರದ ರಾಜಕಾಲುವೆ ಬಳಿ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಕಳೆದ ಒಂದಷ್ಟು ದಿನದಿಂದ ರಾಜ್ಯದ ರಾಜಧಾನಿಯಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ಆಲಿಕಲ್ಲು ಮಳೆ ಸಂಭವಿಸಿದೆ. ಇದ್ದರಿಂದಾಗಿ ಜನರ ಜೀವನ ಅಸ್ಥವ್ಯಸ್ಥಗೊಂಡಿದ್ದು, ಸಾವಿನ ಸಂಖ್ಯೆ ಕೂಡ ಏರಿಕೆ ಕಂಡಿದೆ. ಅವೈಜ್ವಾನಿಕ ರಾಜಕಾಲುವೆ ಕಾಮಗಾರಿಯಿಂದ ಕೊಚ್ಚಿ ಹೋಗಿರುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಕೆಪಿ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Heavy rains cause huge losses : Huge loss due to heavy wind and rain in Kundapur

Comments are closed.