ಭಾರತೀಯ ಅಂಚೆ ಇಲಾಖೆಯಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಉದ್ಯೋಗಾವಕಾಶ, ಕೂಡಲೇ ಅರ್ಜಿ ಸಲ್ಲಿಸಿ

ಭಾರತೀಯ ಅಂಚೆ ಇಲಾಖೆ ನೇಮಕಾತಿ (Indian Postal Department Recruitment) ಅಧಿಕೃತ ಅಧಿಸೂಚನೆ ಮೇ 2023 ರ ಮೂಲಕ ಗ್ರಾಮೀಣ ಡಾಕ್ ಸೇವಕ್ (BPM/ABPM) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಭಾರತೀಯ ಅಂಚೆ ಕಚೇರಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ. ಹಾಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗಿದೆ.‌

ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆಯ ಸಂಪೂರ್ಣ ವಿವರ :
ಸಂಸ್ಥೆಯ ಹೆಸರು : ಭಾರತ ಅಂಚೆ ಕಚೇರಿ
ಹುದ್ದೆಗಳ ಸಂಖ್ಯೆ : 12828 ಹುದ್ದೆಗಳು
ಉದ್ಯೋಗ ಸ್ಥಳ : ಅಖಿಲ ಭಾರತ
ಹುದ್ದೆಯ ಹೆಸರು : ಗ್ರಾಮೀಣ ಡಾಕ್ ಸೇವಕ್ (BPM/ABPM)
ವೇತನ : ರೂ.10000-29380/- ಪ್ರತಿ ತಿಂಗಳು

ಭಾರತೀಯ ಅಂಚೆ ಇಲಾಖೆ ನೇಮಕಾತಿ : ವಿವಿಧ ನಗರದಲ್ಲಿ ಖಾಲಿ ಇರುವ ಹುದ್ದೆಗಳ ವಿವರ :

  • ಆಂಧ್ರ ಪ್ರದೇಶ : 118 ಹುದ್ದೆಗಳು
  • ಅಸ್ಸಾಂ : 151 ಹುದ್ದೆಗಳು
  • ಬಿಹಾರ : 76 ಹುದ್ದೆಗಳು
  • ಛತ್ತೀಸ್‌ಗಢ : 342 ಹುದ್ದೆಗಳು
  • ಗುಜರಾತ್ : 110 ಹುದ್ದೆಗಳು
  • ಹರಿಯಾಣ : 8 ಹುದ್ದೆಗಳು
  • ಹಿಮಾಚಲ ಪ್ರದೇಶ : 37 ಹುದ್ದೆಗಳು
  • ಜಮ್ಮು ಮತ್ತು ಕಾಶ್ಮೀರ : 89 ಹುದ್ದೆಗಳು
  • ಜಾರ್ಖಂಡ್ : 1125 ಹುದ್ದೆಗಳು
  • ಕರ್ನಾಟಕ : 48 ಹುದ್ದೆಗಳು
  • ಮಧ್ಯಪ್ರದೇಶ : 2992 ಹುದ್ದೆಗಳು
  • ಮಹಾರಾಷ್ಟ್ರ : 620 ಹುದ್ದೆಗಳು
  • ಈಶಾನ್ಯ : 4384 ಹುದ್ದೆಗಳು
  • ಒಡಿಶಾ : 948 ಹುದ್ದೆಗಳು
  • ಪಂಜಾಬ್ : 13 ಹುದ್ದೆಗಳು
  • ರಾಜಸ್ಥಾನ : 1408 ಹುದ್ದೆಗಳು
  • ತಮಿಳುನಾಡು : 18 ಹುದ್ದೆಗಳು
  • ತೆಲಂಗಾಣ : 96 ಹುದ್ದೆಗಳು
  • ಉತ್ತರ ಪ್ರದೇಶ : 160 ಹುದ್ದೆಗಳು
  • ಉತ್ತರಾಖಂಡ : 40 ಹುದ್ದೆಗಳು
  • ಪಶ್ಚಿಮ ಬಂಗಾಳ : 45 ಹುದ್ದೆಗಳು

ಶೈಕ್ಷಣಿಕ ಅರ್ಹತೆ :
ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ ವಿವರ :
ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸು ಹೊಂದಿರಬೇಕು ಮತ್ತು ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು.

ವಯೋಮಿತಿ ಸಡಿಲಿಕೆ :

  • OBC ಅಭ್ಯರ್ಥಿಗಳು : 03 ವರ್ಷಗಳು
  • SC/ST ಅಭ್ಯರ್ಥಿಗಳು : 05 ವರ್ಷಗಳು
  • PwD ಅಭ್ಯರ್ಥಿಗಳು : 10 ವರ್ಷಗಳು
  • PwD (OBC) ಅಭ್ಯರ್ಥಿಗಳು : 13 ವರ್ಷಗಳು
  • PwD (SC/ST) ಅಭ್ಯರ್ಥಿಗಳು : 15 ವರ್ಷಗಳು

ಅರ್ಜಿ ಶುಲ್ಕ :
ಸ್ತ್ರೀ/SC/ST/PwD ಮತ್ತು ಟ್ರಾನ್ಸ್‌ವುಮೆನ್ ಅಭ್ಯರ್ಥಿಗಳು : ಯಾವುದೇ ಶುಲ್ಕ ಇರುವುದಿಲ್ಲ
ಎಲ್ಲಾ ಇತರ ಅಭ್ಯರ್ಥಿಗಳು : ರೂ.100/-

ಪಾವತಿ ವಿಧಾನ:
ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕಾಗಿದೆ.

ಆಯ್ಕೆ ಪ್ರಕ್ರಿಯೆ:
ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿ, ದಾಖಲೆ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಸಂಬಳ (ತಿಂಗಳಿಗೆ)ದ ವಿವರ :
ಗ್ರಾಮೀಣ ಡಾಕ್ ಸೇವಕ (ಶಾಖೆ ಪೋಸ್ಟ್ ಮಾಸ್ಟರ್) : ರೂ.12000-29380/-
ಗ್ರಾಮೀಣ ಡಾಕ್ ಸೇವಕ (ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್) : ರೂ.10000-24470/-

ಇದನ್ನೂ ಓದಿ : ಬೆಂಗಳೂರು ನಿಮ್ಹಾನ್ಸ್‌ನಲ್ಲಿ ಪದವೀಧರರಿಗೆ ಉದ್ಯೋಗಾವಕಾಶ, 40000 ರೂ. ವರೆಗೆ ವೇತನ

ಇದನ್ನೂ ಓದಿ : ಬೆಂಗಳೂರು ಮೆಟ್ರೋದಲ್ಲಿ ಉದ್ಯೋಗಾವಕಾಶ : ಡಿಪ್ಲೊಮಾ ಪದವೀಧರರಿಗೆ 1 ಲಕ್ಷ ವೇತನ

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 22 ಮೇ 2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11 ಜೂನ್ 2023
ಅರ್ಜಿದಾರರಿಗೆ ಸಂಪಾದನೆ/ತಿದ್ದುಪಡಿ ವಿಂಡೋ ದಿನಾಂಕ : 12 ರಿಂದ 14ನೇ ಜೂನ್ 2023

Indian Postal Department Recruitment : SSLC Passed Job Opportunity in Indian Postal Department, Apply Immediately

Comments are closed.